ಬಿಎಂಟಿಸಿ ಕಂಡಕ್ಟರ್‌ಗೆ ಪ್ರಯಾಣಿಕನೊಬ್ಬ ಚಾಕು ಇರಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಭಯಾನಕ ದೃಶ್ಯ ಬಿಎಂಟಿಸಿ ಬಸ್‌ನ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಈ ಘಟನೆ ನಡೆದಿದ್ದು, ಕೆಲಸದಿಂದ ತೆಗದರು ಅನ್ನೋ ಕೋಪದಲ್ಲಿ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಬಸ್‌ನೊಳಗೆ ಕುಳಿತಿದ್ದ ಯುವಕ ಏಕಾಏಕಿ ಕಿರುಚಿಕೊಂಡಿದ್ದಾನೆ. ಕೂಡಲೇ ಕಂಡಕ್ಟರ್ ಯಾರು..? ಯಾಕೆ ಕೂಗಿಕೊಂಡಿದ್ದು ಎಂದು ಪ್ರಶ್ನಿಸಿದ್ದಾರೆ.ಈ ವೇಳೆ ಯುವಕ ಕಂಡಕ್ಟರ್‌ಗೆ ಏಕಾಏಕಿ ಚಾಕು ಇರಿದಿದ್ದಾನೆ.. ಯುವಕನ ಪುಂಡಾಟಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರು ದಿಕ್ಕಪಾಲಾಗಿ ಓಡಿದ್ದಾರೆ.
ಚಾಕು ಇರಿತಕ್ಕೆ ಒಳಗಾದ ಕಂಡಕ್ಟರ್ ಏಕಾಏಕಿ ಕೂಗಿಕೊಂಡಿದ್ದಾರೆ. ಆಸ್ಪತ್ರೆಗೆ ಬಸ್ ತೆಗೆದುಕೊಂಡು ನಡೀ ಎಂದು ಡ್ರೈವರ್‌ಗೆ ಕೂಗಿಕೊಂಡಿದ್ದಾರೆ. ಆದರೆ ಜನರು ದಿಕ್ಕಾಪಾಲಾಗಿ ಓಡಿದ್ರಿಂದ ಬಸ್ ಓಡಿಸಲು ಸಾಧ್ಯವಾಗಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಬಿಎಂಟಿಸಿ ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈಟ್ಫೀಲ್ಡ್ನ ಖಾಸಗಿ ಆಸ್ಪತ್ರೆಯಲ್ಲಿ ಕಂಡಕ್ಟರ್‌ಗೆ ಚಿಕಿತ್ಸೆ ಮುಂದುವರಿದಿದೆ.
ಕಳೆದ 20 ದಿನಗಳಿಂದ ಕೆಲಸ ಸಿಗದೇ ಆರೋಪಿ ಹರಿಸಿನ್ಹಾ ಅಲೆದಾಡ್ತಿದ್ನಂತೆ.. ನಿನ್ನೆಯೂ ಇಂಟರ್ ವ್ಯೂ ಒಂದಕ್ಕೆ ಹೋಗಿ ಬಂದಿದ್ನಂತೆ.. ಅಲ್ಲಿಯೂ ಸೆಲೆಕ್ಟ್ ಆಗಿರಲಿಲ್ಲ.. ಇದ್ರಿಂದ ಮಾನಸಿಕವಾಗಿ ನೊಂದಿದ್ದ ಹರಿಸಿನ್ಹಾ ಏಕಾಏಕಿ ಬಸ್‌ನಲ್ಲಿ ಕಿರುಚಾಡಿ.. ಈ ಕೃತ್ಯವೆಸಗಿದ್ದಾನೆ . ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಂಧಿತನ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಿದ್ದೇವೆ ಎಂದಿದ್ದಾರೆ.
ಬಸ್‌ನಲ್ಲಿ ಚಾಕು ಇರಿತಕ್ಕೊಳಗಾದ ಕಂಡಕ್ಟರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಆರೋಪಿ ಹರಿಸಿನ್ಹಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.. ಅಲ್ಲದೆ ಕಂಡಕ್ಟರ್‌ಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಂಘಟನೆಯವರು ಆಗ್ರಹಿಸಿದ್ದಾರೆ. ಶೀಘ್ರವೇ ಸ್ಪಂದಿಸಿದ ಬಿಎಂಟಿಸಿ ಅಧಿಕಾರಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ..