ಇಂಡಿಯನ್ ಪ್ರೀಮಿಯರ್ ಲೀಗ್‌ನ 34ನೇ ಪಂದ್ಯದಲ್ಲಿ ಡೆಲ್ಲಿ ಹಾಗೂ ರಾಜಸ್ಥಾನ ಎದುರಾಗಲಿವೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಡೆಲ್ಲಿ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನಾಯಕ ರಿಷಬ್ ಪಂತ್ ಹೇಳಿದ್ದಾರೆ.
ಇನ್ನು ರಾಜಸ್ಥಾನ ತಂಡದಲ್ಲಿ ಸಹ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದು ಬಂದಿದೆ. 2021 ರಲ್ಲಿ ಆಡಿದ 2 ಪಂದ್ಯಗಳಲ್ಲು ಎರಡು ತಂಡಗಳು ಸಹ ಸೋಲು ಮತ್ತು ಗೆಲುವನ್ನು ಸಮಾನಾಗಿ ಸ್ವೀಕರಿಸಿದ್ದವು.