
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ಬರೋಬ್ಬರಿ 27 ವರ್ಷಗಳ ಬಳಿಕ ಕೇಸರಿ ರಣಕಹಳೆ ಮೊಳಗಿಸಿದೆ. ದೆಹಲಿಯಲ್ಲಿ ಕಮಲ ಪಡೆಯ ಸಂಭ್ರಮ ಮುಗಿಲು ಮುಟ್ಟಿದ್ದು, ಆಮ್ ಆದ್ಮಿ ಪಾರ್ಟಿಯ ಹ್ಯಾಟ್ರಿಕ್ ಕನಸು ನುಚ್ಚು ನೂರಾಗಿದೆ. 10 ವರ್ಷದ ಆಡಳಿತದ ಬಳಿಕ ಹೀನಾಯ ಸೋಲಿನಿಂದ ಆಪ್ಗೆ ಭಾರೀ ಮುಖಭಂಗ ಆಗಿದೆ. ರಣಕಣದಲ್ಲಿ ಆಪ್ನ ಘಟಾನುಘಟಿ ನಾಯಕರೇ ಸೋಲನ್ನಪ್ಪಿದ್ದಾರೆ. ಬಿಜೆಪಿ 48 ಸ್ಥಾನಗಳಿಸಿದ್ರೆ, ಆಪ್ 22 ಸ್ಥಾನಕ್ಕೆ ಕುಸಿದಿದೆ..

ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದ್ದು, ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ. ಸದ್ಯ ಈಗ ದೆಹಲಿ ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಅರವಿಂದ ಕ್ರೇಜಿವಾಲ್ ಸೋಲಿಸಿದ ಪರ್ವೇಶ್ ಸಿಂಗ್ಗೆ ಸಿಎಂ ಪಟ್ಟ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈಗಾಗಲೇ ಗೆಲುವಿನ ಸಂಭ್ರಮದಲ್ಲಿರುವ ಪರ್ವೇಶ್ ಸಿಂಗ್, ಅಮಿತ್ ಶಾ ಅವರನ್ನ ಭೇಟಿಯಾಗಿದ್ದಾರೆ. ಇನ್ನು ಪರ್ವೇಶ್ಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದ್ದು, ತಂದೆ ಸಾಹೀಬ್ ಸಿಂಗ್ ಕೂಡ ದೆಹಲಿಯ ಸಿಎಂ ಆಗಿದ್ರು. ಹೀಗಾಗಿ ಪರ್ವೇಶ್ಗೆ ಸಿಎಂ ಪಟ್ಟ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸೋಲಿನ ಮೂಲಕ ಭಾರೀ ಮುಖಭಂಗವಾಗಿದೆ.. ನ್ಯೂ ಡೆಲ್ಲಿ ಕ್ಷೇತ್ರದಲ್ಲಿ ಕೇಜ್ರಿವಾಲ್ ಸೋತಿದ್ದು, ಬಿಜೆಪಿಯ ಪರ್ವೇಶ್ ಸಾಹಿಬ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಹಿನ್ನೆಡೆ ಅನುಭವಿಸಿದ್ದ ಕೇಜ್ರಿವಾಲ್ಗೆ ಕೊನೆಗೂ ಸೋಲು ಆಗಿದೆ. ಇದು ಆಪ್ಗೆ ಭಾರೀ ಅಪಘಾತ ಉಂಟು ಮಾಡಿದೆ.. ಇನ್ನು ಆಪ್ನ ಮತ್ತೊಬ್ಬ ಘಟಾನುಘಟಿ ನಾಯಕ ಮನೀಶ್ ಸಿಸೋಡಿಯಾಗೂ ಸೋಲು ಉಂಟಾಗಿದೆ.

ಪಕ್ಷದ ಹೀನಾಯ ಸೋಲಿನ ಬಳಿಕ ಮಾತನಾಡಿರುವ ಅರವಿಂದ ಕೇಜ್ರಿವಾಲ್, ಜನಾದೇಶವನ್ನ ನಮ್ರತೆಯಿಂದ ಸ್ವೀಕರಿಸುತ್ತೇವೆ. ಗೆದ್ದ ಬಿಜೆಪಿಗೆ ಅಭಿನಂದನೆ ಸಲ್ಲಿಸ್ತೇನೆ. ದೆಹಲಿ ಜನತೆಗೆ ಬಿಜೆಪಿ ಕೊಟ್ಟಿರುವ ಗ್ಯಾರಂಟಿಯನ್ನ ಈಡೇರಿಸಲಿ.. ಕಳೆದ 10 ವರ್ಷಗಳಲ್ಲಿ ಎಎಪಿ ಮಾಡಿದ ಸೇವೆಗಿಂತ ಹೆಚ್ಚಿನ ಸೇವೆ ಮಾಡಲಿ.. ನಾವು ವಿಪಕ್ಷದಲ್ಲಿ ಇರ್ತಿವಿ ಎಂದಿದ್ದಾರೆ. ದೆಹಲಿ ಸಿಎಂ ಅತಿಶಿಗೆ ಪ್ರಾಯಾಸದ ಗೆಲುವು ಸಿಕ್ಕಿದೆ. ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಜಯಗಳಿಸಿದ್ದಾರೆ. 3,521 ಮತಗಳ ಅಂತರದಲ್ಲಿ ಅತಿಶಿ ಗೆಲುವು ಸಾಧಿಸಿದ್ದು, ವಿಪಕ್ಷ ನಾಯಕಿ ಆಗುವ ಸಾಧ್ಯತೆ ಇದೆ.






