
ಕರ್ನಾಟಕದಲ್ಲಿ ಮುಸ್ಲಿಮರು ಒಗ್ಗಾಟ್ಟಾಗಿ ಮತ ಚಲಾಯಿಸಿದ್ದು ಕಾಂಗ್ರೆಸ್ ಬರುವುದಕ್ಕೆ ಸಾಧ್ಯವಾಯ್ತು ಅನ್ನೋ ವಿಶ್ಲೇಷಣೆಗಳು ಕೇಳಿ ಬಂದಿದ್ದವು. ಜೆಡಿಎಸ್ ಕೂಡ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಜೆಡಿಎಸ್‌ಗೆ ಬರುತ್ತಿದ್ದ ಮುಸ್ಲಿಂ ಮತಗಳು ಕೂಡ ಜೆಡಿಎಸ್‌ನಿಂದ ದೂರ ಆದವು. ಆ ಮತಗಳು ಅನಿವಾರ್ಯ ಕಾರಣಕ್ಕಾಗಿ ಕಾಂಗ್ರೆಸ್‌ಗೆ ಹೋಗುವಂತೆ ಮಾಡಿತು. ಅದು ಕಾಂಗ್ರೆಸ್ ಗೆಲುವಿನ ಸಂಖ್ಯೆ ಹೆಚ್ಚಾಗುವಂತೆ ಮಾಡಿತ್ತು. ಇದೀಗ ಅದೇ ಮುಸ್ಲಿಮರ ಒಗ್ಗಟ್ಟು ಬಿಜೆಪಿ ಗೆಲುವಿಗೆ ಬಾಷ್ಯ ಬರೆದಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಎಲ್ಲಾ ಸಮುದಾಯಗಳ ಮತಗಳನ್ನು ಪಡೆಯುತ್ತಿತ್ತು. INDIA ಒಕ್ಕೂಟದಲ್ಲೇ ಇದ್ದ AAP, ಇತ್ತೀಚಿಗೆ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದು ಪ್ರತ್ಯೇಕವಾಗಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿತ್ತು. ಕಾಂಗ್ರೆಸ್ ಕೂಡ ಹೊಂದಾಣಿಕೆಗೆ ಮನಸ್ಸು ಮಾಡದೆ ಪ್ರತ್ಯೇಕವಾಗಿ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಘೋಷಣೆ ಮಾಡಿತ್ತು. ಅದೇ ರೀತಿ ರಾಷ್ಟ್ರ ರಾಜಧಾನಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆಮ್ ಆದ್ಮಿ ಹಾಗು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆ ಮಾಡಿದ್ದರೆ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕುವ ಸಾಧ್ಯತೆಯಿತ್ತು ಅನ್ನೋ ಮಾತುಗಳು ಕೇಳಿ ಬರ್ತಿವೆ.

ಕಾಂಗ್ರೆಸ್ ಹಾಗು ಆಮ್ ಆದ್ಮಿ ಪಾರ್ಟಿ ಪ್ರತ್ಯೇಕವಾಗಿ ಅಖಾಡಕ್ಕೆ ಇಳಿದಿದ್ದ ಪರಿಣಾಮ ಮುಸ್ಲಿಮರ ಮತಗಳು ಕಾಂಗ್ರೆಸ್ ಕಡೆಗೆ ವಾಲಿದವು. ಕಾಂಗ್ರೆಸ್ ಗೆಲ್ಲಲಿಲ್ಲ, ಆಮ್ ಆದ್ಮಿ ಗೆಲುವಿಗೆ ಕಾರಣವಾಯ್ತು. ಇದು ಬಿಜೆಪಿ ಗೆಲುವಿಗೆ ಸಹಕಾರಿ ಆಯ್ತು. ಅಂದರೆ ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ರಿಂದ ಆಮ್ ಆದ್ಮಿ ಸೋಲಿಗೆ ಕಾರಣವಾಯ್ತು. ಬಿಜೆಪಿ ಗೆಲುವಿಗೆ ಸಹಕಾರಿ ಆಯ್ತು ಅನ್ನೋ ಚರ್ಚೆಗಳು ಶುರುವಾಗಿದೆ. ಎಷ್ಟರ ಮಟ್ಟಿದೆ ಅನುಕೂಲ ಆಗಿದೆ ಎಂದರೆ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾಗೂ ಸೋಲಾಗುವ ಮಟ್ಟಕ್ಕೆ ಮತಗಳು ಡಿವೈಡ್ ಆಗಿವೆ.