• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!

ಪ್ರತಿಧ್ವನಿ by ಪ್ರತಿಧ್ವನಿ
August 27, 2026
in ಸಿನಿಮಾ
0
ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!
Share on WhatsAppShare on FacebookShare on Telegram

ಸೂಪರ್‌ಸ್ಟಾರ್‌ ಯಶ್‌ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದ ಕ್ಷಣ ಕೊನೆಗೂ ಬಂದಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಯಶ್‌ ಮಾತ್ರವಲ್ಲದೆ, ಕಿಯಾರಾ ಅಡ್ವಾಣಿ ಅವರ ಅಭಿನಯ ಹಾಗೂ ಪಾತ್ರದ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ.

ADVERTISEMENT

ಈ ನಡುವೆ ‘ಟಾಕ್ಸಿಕ್’ ಚಿತ್ರದ ಟೀಸರ್‌ ಮತ್ತು ಟ್ರೈಲರ್‌ನಲ್ಲಿ ಕಿಯಾರಾ ಅಡ್ವಾಣಿ ಪಾತ್ರಕ್ಕೆ ಕನ್ನಡ ಧ್ವನಿ ನೀಡಿದ ಡಬ್ಬಿಂಗ್‌ ಕಲಾವಿದೆ ರಿಚಾ ಶಾಸ್ತ್ರಿ ಅವರ ಕಥೆಯೂ ಗಮನ ಸೆಳೆಯುತ್ತಿದೆ.

ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಿಚಾ, ಕೊರೊನಾ ಬಳಿಕ ಡಬ್ಬಿಂಗ್‌ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇತ್ತೀಚಿನ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಅವರು, ‘ಟಾಕ್ಸಿಕ್’ ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಹೇಗೆ, 120ಕ್ಕೂ ಹೆಚ್ಚು ಮಂದಿಯ ನಡುವೆ ಆಡಿಷನ್‌ ಗೆದ್ದು ಕಿಯಾರಾ ಪಾತ್ರಕ್ಕೆ ಧ್ವನಿ ನೀಡಿದ್ದು ಹೇಗೆ ಹಾಗೂ ಯಶ್‌ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

C S Patil's Explosive information : ವಿನಾಶದತ್ತ ನೆರ ರಾಷ್ಟ್ರ ನೇಪಾಳದ ಸ್ಥಿತಿ.! ಜಲಪ್ರಳಯಕ್ಕೆ ನಗರಗಳೇ ಸರ್ವನಾಶ

‘ಟಾಕ್ಸಿಕ್’ ಚಿತ್ರದ ಡಬ್ಬಿಂಗ್‌ಗಾಗಿ ಆಕಾಶ್‌ ಸ್ಟುಡಿಯೋದಿಂದ ಜಯದೇವ್‌ ಮೋಹನ್‌ ಅವರು ರಿಚಾ ಅವರಿಗೆ ಕರೆ ಮಾಡಿದ್ದರು. ಸ್ಯಾಂಪಲ್‌ ನೀಡಲು ತೆರಳಿದ್ದ ಅವರು ತಾರಾ ಸುತಾರಿಯಾ ಹಾಗೂ ನಯನತಾರಾ ಪಾತ್ರಗಳಿಗೆ ಧ್ವನಿ ನೀಡಿ ಬಂದಿದ್ದರು.ಆದರೆ ಅಲ್ಲಿ ಈಗಾಗಲೇ 100ರಿಂದ 120ಕ್ಕೂ ಹೆಚ್ಚು ಮಂದಿ ಆಡಿಷನ್‌ ನೀಡಿರುವುದು ರಿಚಾ ಅವರಿಗೆ ತಿಳಿಯಿತು. ಇದರಿಂದ ತಾನು ಆಯ್ಕೆಯಾಗುವ ಬಗ್ಗೆ ಇದ್ದ ಆತ್ಮವಿಶ್ವಾಸವೂ ಕಡಿಮೆಯಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಆದರೆ ಕೊನೆಗೆ ಅವರ ಪ್ರತಿಭೆ ಕೈಹಿಡಿದಿದ್ದು, ತಾರಾ ಸುತಾರಿಯಾ ಪಾತ್ರಕ್ಕೆ ರಿಚಾ ಅವರ ಧ್ವನಿ ಆಯ್ಕೆಯಾಯಿತು.

Lakshmi Hebbalkar : ಸಂಪುಟದಲ್ಲಿ ಮಹಿಳೆಗೆ ಸ್ಥಾನ ಕೊಟ್ಟೆ ಕೊಡ್ತಾರೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್..! #congress

ಇದರ ಬೆನ್ನಲ್ಲೇ ರಿಚಾ ತಮ್ಮ ಮನೆಯಲ್ಲಿ ಹುಟ್ಟುಹಬ್ಬದ ಗೆಟ್‌-ಟುಗೆದರ್‌ ಆಯೋಜಿಸಿದ್ದರು. ಸಂಜೆ ಸುಮಾರು 7.30ಕ್ಕೆ ಬಂದ ಒಂದು ಫೋನ್‌ ಕಾಲ್‌ ಅವರ ಇಡೀ ದಿನದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.ಜಯದೇವ್‌ ಮೋಹನ್‌ ಕರೆ ಮಾಡಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಹಾಗೂ ಯಶ್‌ ಅವರಿಗೆ ರಿಚಾ ಅವರ ಧ್ವನಿ ಇಷ್ಟವಾಗಿದ್ದು, ಕಿಯಾರಾ ಅಡ್ವಾಣಿ ಪಾತ್ರಕ್ಕೂ ಧ್ವನಿ ನೀಡಲು ಮತ್ತೊಮ್ಮೆ ಆಡಿಷನ್‌ ನೀಡಬೇಕು ಎಂದು ತಿಳಿಸಿದರು. ಈ ಸುದ್ದಿ ಕೇಳಿದ ರಿಚಾ ಕೂಡಲೇ ಆಕಾಶ್‌ ಸ್ಟುಡಿಯೋಗೆ ತೆರಳಿದರು.

BR Ramegowda : ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಬಿ.ಆರ್.‌ ರಾಮೇಗೌಡ..! #siddaramaiah #congress

ಸ್ಟುಡಿಯೋದಲ್ಲಿ ಗೀತು ಮೋಹನ್‌ದಾಸ್‌ ಅವರು ರಿಚಾ ಅವರ ಧ್ವನಿಯನ್ನು ಮೆಚ್ಚಿಕೊಂಡರೂ, ಅಂತಿಮ ಆಯ್ಕೆಗೆ ಸುಲಭವಾದ ಸೀನ್‌ ನೀಡಲಿಲ್ಲ. ಭಾವುಕತೆಯಿಂದ ಕೂಡಿದ ಕಠಿಣ ಸಿಂಕ್‌ ಸೌಂಡ್‌ ಸೀನ್‌ ಅನ್ನು ಆಡಿಷನ್‌ಗಾಗಿ ನೀಡಲಾಯಿತು.ಚಳಿಯ ವಾತಾವರಣದಲ್ಲಿಯೂ ಧ್ವನಿಯಲ್ಲಿ ಭಾವನೆ, ನಡುಕ ಹಾಗೂ ಪಾತ್ರದ ತೀವ್ರತೆಯನ್ನು ಮೂಡಿಸುವ ಸವಾಲು ರಿಚಾ ಅವರ ಮುಂದಿತ್ತು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಸೌಂಡ್‌ ಇಂಜಿನಿಯರ್‌ ಆನಂದ್‌ ಕೂಡ ಅವರ ಪ್ರತಿಭೆಯನ್ನು ಮೆಚ್ಚಿಕೊಂಡರು.

 

ಬಳಿಕ ಕಿಯಾರಾ ಪಾತ್ರಕ್ಕೆ ಈ ಹಿಂದೆ ಆಯ್ಕೆಯಾಗಿದ್ದ ಮತ್ತೊಬ್ಬ ಕಲಾವಿದೆಯ ಧ್ವನಿಯನ್ನು ಬದಲಿಸಿ, ರಿಚಾ ಅವರ ಧ್ವನಿಯನ್ನೇ ಅಂತಿಮಗೊಳಿಸಲಾಯಿತು.ಬಾಂಬೆಯಲ್ಲಿ ಕರೆಕ್ಷನ್‌ ಡಬ್ಬಿಂಗ್‌ ನಡೆಯುತ್ತಿದ್ದ ವೇಳೆ ರಿಚಾ ಅವರಿಗೆ ಯಶ್‌ ಅವರನ್ನು ಹತ್ತಿರದಿಂದ ನೋಡುವ ಹಾಗೂ ಅವರ ನಿರ್ದೇಶನದಲ್ಲಿ ಕೆಲಸ ಮಾಡುವ ಅವಕಾಶವೂ ಸಿಕ್ಕಿತ್ತು.ಟ್ರೈಲರ್‌ ನೋಡಿದಾಗ ಯಶ್‌ ಕಾಣಿಸುವುದಿಲ್ಲ, ಬದಲಿಗೆ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ನಟನೊಬ್ಬ ಕಾಣಿಸುತ್ತಾನೆ ಎಂದು ರಿಚಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸಿನಿಮಾ ಹಾಲಿವುಡ್‌ ಮಟ್ಟದಲ್ಲಿ ಮೂಡಿಬಂದಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

B R Ramegowda : ಸಿದ್ಧರಾಮಯ್ಯ ಬಂದ ಮೇಲೆ ರಾಜ್ಯದಲ್ಲಿ ಶೂದ್ರರಿಗೆ ಜಾಗೃತಿ ಬಂದಿದೆ.! #siddaramaiah #pratidhvani

ಯಶ್‌ ಅವರ ಲುಕ್‌ ಮುಂಚಿತವಾಗಿ ರಿವೀಲ್‌ ಆಗಬಾರದು ಎಂಬ ಕಾರಣಕ್ಕೆ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಅವರ ಪಕ್ಕದಲ್ಲೇ ಕುಳಿತು ಸೀನ್‌ಗಳ ಕುರಿತು ಇನ್‌ಪುಟ್‌ ನೀಡಿ ಕೆಲಸ ಮಾಡಿದ್ದು ತಮ್ಮ ಪಾಲಿಗೆ ವಿಶೇಷ ಅನುಭವ ಎಂದು ರಿಚಾ ಹೇಳಿದ್ದಾರೆ.‘ಟಾಕ್ಸಿಕ್’ನಲ್ಲಿ ಕಿಯಾರಾ ಅಡ್ವಾಣಿ ಕನ್ನಡ ಸಂಭಾಷಣೆಗಳಿಗೆ ತಕ್ಕಂತೆ ಲಿಪ್‌ ಮೂವ್‌ಮೆಂಟ್‌ ನೀಡಿದ್ದರು. ಹೀಗಾಗಿ ಅವರ ಮುಖಭಾವ, ತುಟಿ ಚಲನೆ ಹಾಗೂ ಭಾವನೆಗಳಿಗೆ ಸರಿಯಾಗಿ ಕನ್ನಡ ಧ್ವನಿಯನ್ನು ಹೊಂದಿಸುವುದು ರಿಚಾ ಅವರ ಪ್ರಮುಖ ಜವಾಬ್ದಾರಿಯಾಗಿತ್ತು.ಪರದೆಯ ಮೇಲೆ ಕಿಯಾರಾ ಅವರ ಅಭಿನಯ ಎಷ್ಟು ಮುಖ್ಯವೋ, ಅವರ ಪಾತ್ರಕ್ಕೆ ಸೂಕ್ತವಾದ ಧ್ವನಿ ನೀಡುವುದೂ ಅಷ್ಟೇ ಸವಾಲಿನ ಕೆಲಸವಾಗಿತ್ತು.

ಡಬ್ಬಿಂಗ್‌ ಕಲಾವಿದರಿಗೆ ಧ್ವನಿಯೇ ದೊಡ್ಡ ಆಸ್ತಿ. ‘ಟಾಕ್ಸಿಕ್’ ಚಿತ್ರದ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಧ್ವನಿಗೆ ಯಾವುದೇ ತೊಂದರೆಯಾಗದಂತೆ ರಿಚಾ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರು.ಬಿಸಿನೀರು ಕುಡಿಯುವುದು, ಐಸ್‌ಕ್ರೀಮ್‌ ಸೇವಿಸದಿರುವುದು, ಮಳೆಯಲ್ಲಿ ನೆನೆಯದಿರುವುದು ಹಾಗೂ ಈಜುಕೊಳದಿಂದ ದೂರವಿರುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಿದ್ದರು. ಸಣ್ಣ ಪ್ರಮಾಣದಲ್ಲಿ ಶೀತದ ಲಕ್ಷಣ ಕಂಡುಬಂದರೂ ಧ್ವನಿ ಹಾಳಾಗದಂತೆ ತಕ್ಷಣ ಎಚ್ಚರಿಕೆ ವಹಿಸುತ್ತಿದ್ದರು.ರಿಚಾ ಅವರ ಮಾತಿನಲ್ಲೇ ಹೇಳುವುದಾದರೆ, ಧ್ವನಿಗೆ ಮುಖ ಇಲ್ಲದಿರಬಹುದು. ಆದರೆ ಪ್ರತಿಯೊಂದು ಧ್ವನಿಯ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ.

 

Tags: ##GeetuMohandas#KannadaDubbing #SandalwoodNews#KiaraAdvani#KiaraAdvaniToxic#RichaShastri ##sandalwood#ToxicMovie#ToxicMovieUpdate#yash#yashfans#YashMoviekannadacinemarockingstaryashtoxic
Previous Post

ದೇಶದ ನಂ.1 ಶ್ರೀಮಂತ ಸಿಎಂ ಡಿಕೆಶಿ;  ಹೇರ್‌ಕಟ್‌ಗೆ ಖರ್ಚು ಮಾಡೋದು ಕೇವಲ ಎಷ್ಟು ಗೊತ್ತೆ ?

Next Post

2027-28ರಲ್ಲಿ ಟಾಲಿವುಡ್‌ನ ಇಬ್ಬರು ಸ್ಟಾರ್‌ಗಳಿಗೆ ಅಪಾಯ? ವೇಣುಸ್ವಾಮಿ ಭವಿಷ್ಯ ವೈರಲ್

Related Posts

ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌
Top Story

ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

by ಪ್ರತಿಧ್ವನಿ
August 27, 2026
0

ಅಭಿನಯ ಚಕ್ರವರ್ತಿ ಅಭಿಮಾನಿಗಳ ಪಾಲಿನ ಪ್ರೀತಿಯ ಬಾದ್‌ಷಾ ಕಿಚ್ಚ ಸುದೀಪ್ ಈ ಬಾರಿಯ ತಮ್ಮ ಹುಟ್ಟುಹಬ್ಬದ ಆಚರಣೆಯ ಬಗ್ಗೆ ಅಭಿಮಾನಿಗಳೊಂದಿಗೆ ಮುಖ್ಯವಾದ ವಿಚಾರವನ್ನು ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 2ರಂದು...

Read moreDetails
ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

August 25, 2026
‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

August 25, 2026
ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

August 25, 2026
‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

‘ಟಾಕ್ಸಿಕ್’ ಸಿನಿಮಾ ರಿವ್ಯೂ ಕೊಡೋ ಮುನ್ನ ಎಚ್ಚರ..! ʼಜಾನ್ ಡೋ’ ಅಸ್ತ್ರ ಬಳಸಿದ ಚಿತ್ರತಂಡ

August 25, 2026
Next Post
2027-28ರಲ್ಲಿ ಟಾಲಿವುಡ್‌ನ ಇಬ್ಬರು ಸ್ಟಾರ್‌ಗಳಿಗೆ ಅಪಾಯ? ವೇಣುಸ್ವಾಮಿ ಭವಿಷ್ಯ ವೈರಲ್

2027-28ರಲ್ಲಿ ಟಾಲಿವುಡ್‌ನ ಇಬ್ಬರು ಸ್ಟಾರ್‌ಗಳಿಗೆ ಅಪಾಯ? ವೇಣುಸ್ವಾಮಿ ಭವಿಷ್ಯ ವೈರಲ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada