
ಗಂಡು ಮಕ್ಕಳಮೇಲೆ ರೇಗುವುದು ಜಾಸ್ತಿ
ಮಾತು ಮಾತಿಗೆ ಹೆಣ್ಣನ್ನು ಸಂಪ್ರದಾಯ ಪದ್ಧತಿ ಆಚರಣೆ ನಡೆ ನುಡಿ ಮೈಮಾಟ ಸ್ವತಂತ್ರ ಅಳು ನಗು ಎಲ್ಲದರಲ್ಲೂ ಕಟ್ಟಿ ಹಾಕುವ ಸಮಾಜ ಗಂಡಿಗೆ ಸ್ವಲ್ಪ ಸಂಸ್ಕಾರ ಕಲಿಸೋದಿಲ್ಲ ಯಾಕೆ?ಮಾತು ಮಾತಿಗೆ ಹೆಣ್ಣನ್ನು ಸಂಪ್ರದಾಯ ಪದ್ಧತಿ ಆಚರಣೆ ನಡೆ ನುಡಿ ಮೈಮಾಟ ಸ್ವತಂತ್ರ ಅಳು ನಗು ಎಲ್ಲದರಲ್ಲೂ ಕಟ್ಟಿ ಹಾಕುವ ಸಮಾಜ ಗಂಡಿಗೆ ಸ್ವಲ್ಪ ಸಂಸ್ಕಾರ ಕಲಿಸೋದಿಲ್ಲ ಯಾಕೆ?ಮಾತು ಮಾತಿಗೆ ಹೆಣ್ಣನ್ನು ಸಂಪ್ರದಾಯ ಪದ್ಧತಿ ಆಚರಣೆ ನಡೆ ನುಡಿ ಮೈಮಾಟ ಸ್ವತಂತ್ರ ಅಳು ನಗು ಎಲ್ಲದರಲ್ಲೂ ಕಟ್ಟಿ ಹಾಕುವ ಸಮಾಜ ಗಂಡಿಗೆ ಸ್ವಲ್ಪ ಸಂಸ್ಕಾರ ಕಲಿಸೋದಿಲ್ಲ ಯಾಕೆ?
ನಿಮ್ಮ ಮನೆಯ ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು?
ಸಮಾಜ ಕಲಿಸಬೇಕಾ ? ಸಮಾಜ ಅಂದರೆ ಯಾರು? ಊರಿನವರಾ ? ನಿಮ್ಮ ಮನೆಯ ಮಕ್ಕಳಿಗೆ ಊರಿನವರೇ .ಸಂಸ್ಕಾರ ಕಲಿಸಬೇಕೆಂದರೆ ನಿಮ್ಮ ಮನೆಯ ಮಕ್ಕಳು ಮಿತಿಮೀರಿರಬೇಕು, ಹಾಗೆ ಆದರೆ.ಕಲಿಸುವಂತಹ ರೀತಿ ಹೇಗಿರುತ್ತದೆ ಯೋಚನೆ ಮಾಡಿ..(ದಯವಿಟ್ಟು ಕ್ಷಮಿಸಿ, ಇಲ್ಲಿ ನಿಮ್ಮ ಎಂದಿದ್ದು ಸಾಮಾನ್ಯವಾಗಿ.. ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ) (ಮಕ್ಕಳು ಅಂದರೆ ಗಂಡು, ಹೆಣ್ಣು ಇಬ್ಬರೂ)
ಸಮಾಜ ಅಂದರೆ ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆಗಳು/ಶಿಕ್ಷಕರು ಅಂದುಕೊಂಡರೆ ಇವಾಗ ಅವರು ಕೇವಲ ಅಕ್ಷರ ಅಭ್ಯಾಸ, ಸಿಲೆಬಸ್ ಪಾಠ ಮಾಡುವುದಕ್ಕೆ ಅಷ್ಟಕ್ಕೆ ಸೀಮಿತರಾಗಿದ್ದಾರೆ . ಇದರಲ್ಲಿ ಗಂಡು ಹೆಣ್ಣಿನ ಪರಿಬೇಧ ಮಾಡುವುದಿಲ್ಲ ….

ಹಾಗಾದರೆ ನಿಮ್ಮ ಮನೆಯ ಮಕ್ಕಳಿಗೆ ಸಂಸ್ಕಾರ ಕಲಿಸುವ ಸಮಾಜ ಯಾವುದೂ ??? ನಿಮ್ಮ ಮನೆ ತಾನೇ?? .. ಅದಕ್ಕೆ ಹೇಳುವುದು ಮನೆಯೇ ಮೊದಲ ಪಾಠಶಾಲೆ ಅಂತ…
ಸರಿ …ಮನೆಯಲ್ಲಿ ಪಾಠ ಹೇಳಿಕೊಡುವುದು ಯಾರು… ಅಪ್ಪ ಕೆಲಸಕ್ಕೆ ಹೋಗುವವರು ಆಯಿತು . ತಾಯಿಯದೇ ಜವಾಬ್ದಾರಿ ತಾನೇ ಅದು.. ತಾಯಿಯೇ ಮೊದಲ ಗುರು…
ಮಕ್ಕಳಿಗೆ ಸಂಸ್ಕಾರದ ಪಾಠ ಕಲಿಸುವುದು ಮನೆ ಅದರಲ್ಲೂ ತಾಯಿ…

ಸಂಸ್ಕಾರ ಕಲಿಸುವ ತಾಯಿ ಗಂಡು ಹೆಣ್ಣು ಎಂಬ ಭೇದ ಯಾಕೆ ಮಾಡಬೇಕು?? ತನ್ನ ಮಗಳಿಗೆ ಗೌರವ ತೆಗೆದುಕೊಳ್ಳುವ ನಡತೆ ಕಲಿಸುವ ಆ ತಾಯಿ (ಹೆಣ್ಣು) ತನ್ನ ಮಗನಿಗೆ ಗೌರವ ಕೊಡುವಂತಹ ಸಂಸ್ಕಾರ ಯಾಕೆ ಕಲಿಸುವುದಿಲ್ಲ… ಅವನು ಗಂಡು ಏನು ಮಾಡಿದರೂ ನಡೆಯುತ್ತೆ ಅನ್ನುವ ಮನೋಭಾವ ಆ ತಾಯಿಗೆ (ಹೆಣ್ಣಿಗೆ) ಯಾಕೆ???
ಸರ್, ಒಟ್ಟಾರೆ ಉತ್ತರದ ಸಾರಾಂಶ ಇಷ್ಟೇ…
ಗಂಡು ಮಕ್ಕಳಿಗೂ ಸಂಸ್ಕಾರ ಕಲಿಸುವುದು ಹೆಣ್ಣೇ… ಹೆಣ್ಣುಮಕ್ಕಳೇ ಸಂಸ್ಕಾರ ಕಲಿಸುವಲ್ಲಿ ಎಡವಿ ಈ ಸಮಾಜ/ ಗಂಡುಮಕ್ಕಳ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಗಂಡು ಮಕ್ಕಳ ಮೇಲು ಗೌರವ ಇರಲಿ

ನವೀನ ಹೆಚ್ ಎ ಹನುಮನಹಳ್ಳಿ ಕೆ ಆರ್ ನಗರ