ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೀಕೆಂಡ್ ಪ್ರೊಗ್ರಾಂ ನಡೆಸಿಕೊಡ್ತಾರೆ. ಕಿಚ್ಚನ ಪಂಚಾಯ್ತಿ ನೋಡುವ ಉದ್ದೇಶದಿಂದಲೇ ಸಾಕಷ್ಟು ಜನರು ಕಾತುರದಿಂದ ಕಾಯುತ್ತಿರುತ್ತಾರೆ. ಕಿಚ್ಚ ಸುದೀಪ್ ತಾಯಿ ವಿಧಿವಶರಾದ ಹಿನ್ನೆಲೆಯಲ್ಲಿ ಕಳೆದ ವಾರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.ಈ ವಾರ ವೀಕೆಂಡ್ ವಿತ್ ಸುದೀಪ ಕಾರ್ಯಕ್ರಮ ನಡೆಸಿಕೊಟ್ರು.

ಕಿಚ್ಚ ಸುದೀಪ್ ಎಂಟ್ರಿ ಆದ ಬಳಿಕ ದಿವಂಗತ ಸರೋಜಾ ಸಂಜೀವ್ ಅವರ ಫೋಟೋ ಹಾಕಿ, ಗಾಯಕ ವಾಸುಕಿ ವೈಭವ್ ಅವರಿಂದ ಪರಪಂಚ ನೀನೇ.. ಹಾಡನ್ನು ಹಾಡಿಸಲಾಯ್ತು. ಬಿಗ್‌ಬಾಸ್ ಸ್ಪರ್ಧಿಗಳೆಲ್ಲರೂ ಎದ್ದು ನಿಂತು ಗೌರವ ಸಮರ್ಪಣೆ ಮಾಡಿದ್ರು. ಆ ಬಳಿಕ ಕಿಚ್ಚು ಸುದೀಪ್ ಪ್ರತಿವಾರದಂತೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಚಾಟಿ ಬೀಸಿ ಎಚ್ಚರಿಸುವ ಕೆಲಸ ಮಾಡಿದ್ರು.

ಆ ಬಳಿಕ ವೀಕೆಂಡ್ ವಿತ್ ಸುದೀಪ ಕಾರ್ಯಕ್ರಮ ಮುಗಿಸುವ ಮುನ್ನ ತನ್ನ ತಾಯಿ ಬಗ್ಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಕಾರ್ಯಕ್ರಮ ನನ್ನ ತಾಯಿಗೆ ಅಚ್ಚುಮೆಚ್ಚಾಗಿತ್ತು. ನಾನು ಕಾರ್ಯಕ್ರಮ ಮುಗಿಸಿ ಮನೆಗೆ ಹೋದಾಗ ನನ್ನ ವೀಕೆಂಡ್ ಕಾಸ್ಟ್ಯೂಮ್ ನೋಡಿ, ‘ಥೂ ನಾಯಿ’ ಎಂದು ಹೇಳುತ್ತಿದ್ದರು. ತುಂಬಾ ಚೆನ್ನಾಗಿ ಕಾಣ್ತಿದ್ಯಾ ದೃಷ್ಟಿ ತೆಗೆಸಿಕೊ ಎಂದು ಹಾಗೆ ಹೇಳ್ತಿದ್ರು ಎಂದಿದ್ದಾರೆ.
