ಸದ್ಯ ರಾಜ್ಯ ರಾಜಕಾರಣದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಪದ ಬಿಟ್ಕಾಯಿನ್. ರಾಜಕಾರಣಿಗಳ ಮಧ್ಯೆ ಆರೋಪ ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿರುವ ಬಿಟ್ಕಾಯಿನ್ ದಂಧೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಟ್ಕಾಯಿನ್ ದಂಧೆ ಜೊತೆ ಕೇಳಿ ಬರುತ್ತಿರುವ ಹೆಸರೇ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ. ಮೊನ್ನೆಯಷ್ಟೇ ಹೋಟೆಲ್ನಲ್ಲಿ ಜಗಳ ಮಾಡಿಕೊಂಡು ಅರೆಸ್ಟ್ ಆಗಿದ್ದ ಶ್ರೀಕಿ ನಿನ್ನೆ ರಿಲೀಸ್ ಆಗಿದ್ದಾನೆ. ಮಾಧ್ಯಮಗಳ ಮುಂದೆ ನಂಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂದು ಹುಸಿನಗೆಯಲ್ಲಿ ಹೇಳಿದ್ದಾನೆ. ಕಾಣುವಷ್ಟು ಸುಲಭವಲ್ಲ ಈತ, ಈ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿಯ ಭೂತಕಾಲ ಅಗೆದಷ್ಟು ಆಶ್ವರ್ಯ ಹುಟ್ಟಿಸುವಂತದ್ದು.
ಪ್ರೈಮರಿ ಶಾಲೆಯಲ್ಲಿರುವಾಗಲೇ ಹ್ಯಾಕಿಂಗ್ನಲ್ಲಿ ಆಸಕ್ತಿ.!!
ಈ ಹ್ಯಾಕರ್ ಶ್ರೀಕಿ ಬಾಲ್ಯದಿಂದಲೇ ಟೆಕ್ಕಿ ಆಗಲು ಬಯಸಿದ್ದನಂತೆ. ಶಾಲೆಯ ಮಟ್ಟದಲ್ಲಿ ಬುದ್ಧಿವಂತ ಎಂದೇ ಕರೆಸಿಕೊಂಡಿದ್ದ. ಆದರೆ ಈತನ ಬುದ್ಧಿವಂತಿಕೆ ಖರ್ಚಾಗಿದ್ದೆಲ್ಲಾ ಕಾನೂನು ಬಾಹಿರ ಕೆಲಸಗಳಿಗೇನೆ. ಪ್ರೈಮರಿ ತರಗತಿಯಲ್ಲಿ ಇರುವಾಗಲೇ ಶ್ರೀಕಿ ಹ್ಯಾಕಿಂಗ್ ಬಗ್ಗೆ ಕುತೂಹಲ ಹೊಂದಿದ್ದ ಎನ್ನಲಾಗಿದೆ. ಡಿಜಿಟಲ್ ಡಾರ್ಕ್ ರೂಮನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ. ಈತನ ಅಂತರ್ಜಾಲ ಕಳ್ಳಾಟ ಶುರುವಾಗಿದ್ದು ಕೂಡ ಇದೇ ವಯಸ್ಸಿನಲ್ಲಿ. ದೇಶ ವಿದೇಶಗಳನ್ನ ಸುತ್ತಿದ್ದ ಶ್ರೀಕಿ 2015ರಲ್ಲಿ ಭಾರತಕ್ಕೆ ಮರಳಿರುತ್ತಾನೆ. ಭಾರತಕ್ಕೆ ಬರುವ ಮುಂಚೆ ನೆದರ್ ನೆಂಡ್ ನಲ್ಲಿ ನೆಲೆಸಿದ್ದ. ಇನ್ನೂ ನೆದರ್ಲೆಂಡ್ ನಲ್ಲಿ ಶ್ರೀಕಿ ಜೊತೆಯಲ್ಲಿ ಇದ್ದ ಡ್ರೈವರ್ ವಾಲಿದ್ದ್ ಶ್ರೀಕಿ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದ. ಮನೆಯಲ್ಲಿದ್ದ 2 ಲ್ಯಾಪ್ ಟಾಪ್, 2 ಫೋನ್ ಗಳು ಹಾಗೂ ಪಾಸ್ಪೋರ್ಟ್ ಗಳನ್ನು ಕಳ್ಳತನ ಮಾಡಿದ್ದ ಡ್ರೈವರ್ ವಾಲಿದ್ದ್.
ಲಾಪ್ಟಾಪ್ ಕಳ್ಳತನವಾದ ಕಾರಣಕ್ಕೆ ವಿದೇಶ ಸುತ್ತಿದ ಶ್ರೀಕಿ.!!
ಶ್ರೀಕಿ ಅಕೌಂಟ್ ನಲ್ಲಿ ಸುಮಾರು 3 ಮಿಲಿಯನ್ ಬಿಟ್ ಕಾಯಿನ್ ಕರೆನ್ಸಿಗಳು ಸಹ ಇದ್ದವು. ಶ್ರೀಕಿ ಲ್ಯಾಪ್ ಟಾಪ್ ಕಳ್ಳತನ ಆಗಿರುವುದರಿಂದ ಅಕೌಂಟ್ ನಲ್ಲಿ ಇದ್ದ ಕರೆನ್ಸಿಗಳು ಎಲ್ಲವೂ ಸ್ಟಾಕ್ ಆಗಿತ್ತಂತೆ. ಶ್ರೀಕೃಷ್ಣ ಮತ್ತೆ ಹಳೆಯ ಸ್ನೇಹಿತರನ್ನು ಹುಡುಕಿಕೊಂಡು ಫ್ರಾನ್ಸ್, ಜರ್ಮನಿ ಸೇರಿದಂತೆ ಇನ್ನೂ ಹಲವು ದೇಶವನ್ನು ಸುತ್ತುತ್ತಾನೆ. ಅಲ್ಲಿ ಯಾವುದೇ ರೀತಿಯ ಪ್ರಯೋಜನವಾಗದೆ 2015ಕ್ಕೆ ಭಾರತಕ್ಕೆ ಹಿಂದಿರುಗುತ್ತಾನೆ.
ಬಿಟ್ಕಾಯಿನ್ಗಾಗಿಯೇ ಕಫೆಯಲ್ಲಿ ನಡೆಯಿತು ಗಲಾಟೆ.!?
2015ರಲ್ಲಿ ಭಾರತಕ್ಕೆ ಬಂದ ನಂತರ ಮನೀಶ್ ಎಂಬ ಯುವಕನ ಪರಿಚಯವಾಗುತ್ತದೆ. ಮನೀಶ್ ಮುಖಾಂತರ ಉಮರ್ ನಲಪಾಡ್ ಪರಿಚಯವಾಗುತ್ತದೆ. ಮನೀಶ್ ಹಾಗೂ ಉಮರ್ ನಲಪಾಡ್ ಇಬ್ಬರು ಒಂದೇ ಕ್ಲಾಸ್ ನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಮೂರು ವರ್ಷಗಳ ಕಾಲ ಶ್ರೀಕೃಷ್ಣ ,ಉಮರ್,ಮನೀಶ್ ಜೊತೆಯಲ್ಲಿ ಇರುತ್ತಾರೆ. 2018ರಲ್ಲಿ ಫರ್ಜಿ ಕೆಫೆಯಲ್ಲಿ ಗಲಾಟೆ ಆಗುವುದು ಸಹ ಇದೆ ಬಿಟ್ಕಾಯಿನ್ಗಾಗಿ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಕೆಫೆಯಲ್ಲಿ ಗಲಾಟೆ ಆದ ನಂತರದಲ್ಲಿ ಶ್ರೀಕೃಷ್ಣಗೆ ಸುನೀಶ್ ಹೆಗಡೆ ಹಾಗೂ ಪ್ರಶೀದ್ ಶೆಟ್ಟಿ ಪರಿಚಯವಾಗುತ್ತದೆ.
10 ನೇ ತರಗತಿ ಇರುವಾಗಲೇ ಹಿಮಾಲಯಕ್ಕೆ ಅಪ್ಸ್ಕಾಂಡ್.!!
ಶ್ರೀಕೃಷ್ಣ 10ನೇ ತರಗತಿಯಲ್ಲಿ ಇರುವಾಗಲೇ ಸಾವಿರಾರು ಬಿಟ್ಕಾಯಿನ್ಗಳನ್ನು ಹ್ಯಾಕ್ ಮಾಡಿದ್ದ. ಶ್ರೀಕೃಷ್ಣ ಶಾಲೆ ಯಲ್ಲಿ ವ್ಯಾಸಂಗ ಮಾಡುವಾಗಲೇ ಶೇನ್ ಎಂಬ ವಿದ್ಯಾರ್ಥಿ ಸಹ ಪರಿಚಯವಾಗಿದ್ದು ಇಬ್ಬರು ಜೊತೆಯಲ್ಲಿ ಕೋಡ್ ವರ್ಡ್ ಗಳನ್ನು ಕಲಿತಿದ್ದಾರೆ. ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ PCMC ವ್ಯಾಸಂಗ ಮಾಡಿರುತ್ತಾನೆ. ಶ್ರೀಕೃಷ್ಣ 2nd PUC ವ್ಯಾಸಂಗ ಮಾಡುತ್ತಿರುವಾಗಲೇ ಕ್ರಿಪ್ಟೋ ಕರೆನ್ಸಿ ಬಗ್ಗೆ ಕಲಿತಿದ್ದಾನೆ. ಶ್ರೀಕೃಷ್ಣ 17ನೇ ವರ್ಷಕ್ಕೆ ನನ್ನ ಫ್ರೆಂಡ್ ರಿತ್ವಿಕ್ ಜೊತೆ ಹಿಮಾಲಯಕ್ಕೆ ಸಹ ತೆರಳಿದ್ದಾನೆ. ಹಿಮಾಲಯದಲ್ಲಿರುವ ಬದ್ರಿನಾಥ್ ನಲ್ಲಿ ಸುಮಾರು ತಿಂಗಳುಗಳು ನೆಲೆಸಿದ್ದಾರೆ. ರಿತ್ವಿಕ್ ತಾಯಿಂದ ಸಿದ್ದಾಪುರ ಹಾಗೂ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಸಹ ದಾಖಲಾಗಿದೆ.