ಮಹಾರಾಷ್ಟ್ರದಲ್ಲಿ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೀತು.. ರಾಜಕೀಯ ಗಣ್ಯರು, ಸಿನಿಮಾ ನಟ, ನಟಿಯರು ಹಾಗೂ ಸೆಲೆಬ್ರೆಟಿಗಳು ಮತದಾನ ಮಾಡಿದ್ರು. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಜಾನ್ ಅಬ್ರಾಹಂ, ಶಾರೂಖ್ ಖಾನ್ ಸೇರಿ ಪ್ರಮುಖರು ಕುಟುಂಬ ಸಮೇತ ಬಂದು ಮತ ಹಾಕಿದ್ರು..
2019ರಲ್ಲಿ ಶೇಕಡ 61.4ರಷ್ಟು ಮತದಾನ ಆಗಿತ್ತು. ಮಹಾರಾಷ್ಟ್ರದಲ್ಲಿ ಈ ಬಾರಿ ಶೇಕಡ 60ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಲೆಕ್ಕ ಕೊಟ್ಟಿದೆ.. ಜಾರ್ಖಂಡ್ನಲ್ಲಿ ಅದ್ಧೂರಿ ಮತದಾನ ಆಗಿದ್ದು ಬರೋಬ್ಬರಿ ಶೇಕಡ 70ರಷ್ಟು ವೋಟಿಂಗ್ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆ
ಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ 2024ರ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿವೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಮಹಾಯುತಿ ಮತ್ತು ಮಹಾವಿಕಾಸ್ ಅಘಾಡಿ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿಯ ಚುನಾವಣೆ ನಡೆದಿದೆ.. ಆದ್ರೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟದ ಕಡೆಯೇ ಜನರ ಒಲವು ಹೆಚ್ಚಾಗಿದೆ ಎನ್ನುವುದು ಚುನಾವಣೋತ್ತರ ಸಮೀಕ್ಷೆ ಲೆಕ್ಕಾಚಾರ
P MARQ
BJP+ 137-157
CONG+ 126 – 146
OTH 02 -08
MATRIZE
BJP+ 150-170
CONG+ 110-130
OTH 8-10
PPL PULSE
BJP+ 182
CONG+ 97
OTH 01