ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada season 12) ಫಿನಾಲೆ ವಾರದತ್ತ ಸಾಗುತ್ತಿದ್ದು, ದಿನ ಕಳೆದಂತೆ ಶೋ ಇನ್ನಷ್ಟು ಇಂಟ್ರಸ್ಟಿಂಗ್ ಆಗುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವಾರವಾದ ಕಾರಣ ಮನೆ ಬಹಳಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕುಟುಂಬದ ಸದಸ್ಯರ ಭೇಟಿಯಿಂದ ಫುಲ್ ಖುಷಿಯಾಗಿರುವ ಸ್ಪರ್ಧಿಗಳಿಗೆ ವಾರಾಂತ್ಯದಲ್ಲಿ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದ್ದಾರೆ.

ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಮಾರ್ಕ್ ಸಿನಿಮಾದ ಪ್ರಚಾರದ ಹಿನ್ನಲೆಯಲ್ಲಿ ಬ್ಯೂಸಿಯಾಗಿರುವ ಕಾರಣ ಈ ವಾರದ ವಾರಾಂತ್ಯ ಸಂಚಿಕೆಗಳು ವಿಭಿನ್ನವಾಗಿರಲಿದೆ ಎಂದು ಪ್ರೇಕ್ಷಕರು ಮೊದಲೇ ಊಹಿಸಿದ್ದರು. ಅದರಂತೆ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಗೆ ಮೊದಲು ಭಾಗ್ಯ ಲಕ್ಷ್ಮೀ ಧಾರಾವಾಹಿ ಖ್ಯಾತಿಯ ಭಾಗ್ಯ ಪಾತ್ರಧಾರಿ ಸುಷ್ಮಾ ಹಾಗೂ ತಾಂಡವ್ ಪಾತ್ರಧಾರಿ ಸುದರ್ಶನ್ ಬಂದಿದ್ದು, ಸ್ಪರ್ಧಿಗಳು ಫುಲ್ ಖುಷಿಯಾಗಿದ್ದಾರೆ.

ಇನ್ನು ನಿರ್ದೇಶಕ ಪ್ರೇಮ್ ಹಾಗೂ ನಟಿ ರೀಷ್ಮಾ ನಾಣಯ್ಯ ಬಿಗ್ಬಾಸ್ ಮನೆಗೆ ಬಂದಿದ್ದು ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಶಾಕಿಂಗ್ ಎನ್ನುವಂತೆ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಈ ವಿಚಾರ ಕೇಳಿದ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ. ಇಂದಿನ ಪ್ರೋಮೋದ ಪ್ರಕಾರ ರಾಶಿಕಾ ಶೆಟ್ಟಿ, ಧ್ರುವಂತ್, ಸೂರಜ್ ಹಾಗೂ ಸ್ಪಂದನಾ ಕೊನೆಯ ನಾಲ್ಕು ಸ್ಪರ್ಧಿಗಳಾಗಿದ್ದು, ಈ ಪೈಕಿ ಸ್ಪಂದನಾ ಹಾಗೂ ಸೂರಜ್ ಮನೆಯಿಂದ ಹೊರಗೆ ಬರಬಹುದು ಅಥವಾ ಸ್ಪಂದನಾ ಹಾಗೂ ಧ್ರುವಂತ್ ಮನೆಯಿಂದ ಹೊರಗೆ ಬರಬಹುದು ಎಂದು ಪ್ರೇಕ್ಷಕರು ಊಹಿಸಿದ್ದಾರೆ.












