ಶ್ರೀನಿವಾಸಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ನ ಯಾವ ಶಾಸಕರು ಸಿಎಂ ಬದಲಾವಣೆ ಬಯಸುತ್ತಿಲ್ಲ. ವಿರೋಧ ಪಕ್ಷದ ಶಾಸಕರು ಮಾತ್ರ ವಿನಾಕರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು. ಅವರು ಬುಧವಾರ ಶ್ರೀನಿವಾಸಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಅಧಿಕಾರ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಹತಾಶೆಯಿಂದ ವಿರೋಧ ಪಕ್ಷದವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ 136 ಶಾಸಕರು ಒಗ್ಗಟ್ಟಾಗಿದ್ದೀವಿ, ಯಾರು ಎನೇ ಹೇಳಲಿ ಸುಭದ್ರ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದರು.
ದೇಶದಲ್ಲಿ ಮೋದಿ ಆಡಳಿತಕ್ಕೆ ಜನ ಬೆಸೆತ್ತಿದ್ದಾರೆ. ಅವರ ಹವಾ ಕಡಿಮೆಯಾಗುತ್ತಿದೆ. ನಮ್ಮ ಸರ್ಕಾರಕ್ಕೆ ಲೋಕಸಭೆ ಚುನಾವಣೆ ಬಹಳ ಮಹತ್ವದಾಗಿದೆ ರಾಜ್ಯದಲ್ಲಿ ಪ್ರತಿ ಲೋಕಸಭೆ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನೆ ಕಣಕ್ಕೆ ಇಳಿಸುತ್ತೇವೆ ಕೋಲಾರ ಕ್ಷೇತ್ರದಲ್ಲೂ ಉತ್ತಮ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುತ್ತೇವೆ ಎಂದರು. ಶ್ರೀನಿವಾಸಪುರದಲ್ಲಿ ಕೊಲೆಯಾದ ಕಾಂಗ್ರೆಸ್ ಮುಖಂಡ ಶ್ರೀನಿವಾಸನ್ ಮನೆಗೆ ಭೇಟಿ ಕೊಟ್ಟು ಅವರ ಪತ್ನಿ ಡಾ.ಚಂದ್ರಕಲಾ ಮತ್ತು ಅವರ ಮಕ್ಕಳಿಗೆ ಸಚಿವರು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಭಾಸ್ಕರ್, ಉನಿಕಿಲಿ ನಾಗರಾಜ್, ಅಂಬೇಡ್ಕರ್ ಪಾಳ್ಯ ವಿ.ಮುನಿರಾಜು, ಮತ್ತಿತರರು ಇದ್ದರು.