• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅರಬ್​ ರಾಷ್ಟ್ರಕ್ಕೆ ರಫ್ತಾಗುತ್ತಿರುವ ಗೋ ರಕ್ಷಣೆ ಯಾರ ಹೊಣೆ..? ಸತ್ಯವೋ ಸುಳ್ಳೋ..? Facts Check

Krishna Mani by Krishna Mani
April 29, 2024
in Top Story, ಇದೀಗ
0
ಅರಬ್​ ರಾಷ್ಟ್ರಕ್ಕೆ ರಫ್ತಾಗುತ್ತಿರುವ ಗೋ ರಕ್ಷಣೆ ಯಾರ ಹೊಣೆ..? ಸತ್ಯವೋ ಸುಳ್ಳೋ..? Facts Check
Share on WhatsAppShare on FacebookShare on Telegram

ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಭಾರತೀಯ ಜನತಾ ಪಾರ್ಟಿ ಗೋವುಗಳನ್ನು ರಕ್ಷಣೆ ಮಾಡಬೇಕು. ಗೋವುಗಳನ್ನು ತಿನ್ನಬಾರದು. ಹಿಂದೂಗಳು ಪೂಜಿಸುವ ಗೋವುಗಳನ್ನು ಮುಸ್ಲಿಮರು ಕೊಂದು ನಾಶ ಮಾಡ್ತಾರೆ ಎನ್ನುತ್ತ ದೂರುತ್ತಾರೆ. ಅದರಲ್ಲೂ ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್​ ಗೋವುಗಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಗೋವುಗಳನ್ನು ಸಾಗಾಟ ಮಾಡುವುದು ರೈತರಿಗೂ ಕಷ್ಟಕರ ಎನ್ನುವಂತೆ ಆಗಿದೆ. ಮಲೆನಾಡು ಭಾಗದಲ್ಲಿ ಪ್ರಯೋಜನಕ್ಕೆ ಬಾರದ ಗಂಡು ದನಗಳನ್ನು ಹಾದಿ ಬೀದಿಯಲ್ಲಿ ಬಿಟ್ಟು ಹೋಗ್ತಿದ್ದಾರೆ. ಈ ಪರಿಸ್ಥಿತಿ ಇರುವಾಗ ಒಂದು ವಿಡಿಯೋ ವೈರಲ್​ ಆಗಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಕಷ್ಟು ಏರ್​ಪೋರ್ಟ್​ ಹಾಗು ಬಂದರುಗಳನ್ನು ಖಾಸಗಿ ಸಂಸ್ಥೆಯವರಿಗೆ ಮಾರಾಟ ಮಾಡಿದೆ. ಉದಾಹರಣೆಗೆ ಮಂಗಳೂರು ಏರ್​ಪೋರ್ಟ್​, ಗುಜರಾತ್​ನ ಬಂದರು ಸೇರಿದಂತೆ ಸಾಕಷ್ಟು ಕಡೆ ಮಾರಾಟ ಮಾಡಲಾಗಿದೆ. ಈ ರೀತಿಯ ಅದಾನಿ ಬಂದರು ಮೂಲಕ ಗೋವುಗಳ ಸಾಗಾಟ ಮಾಡಲಾಗ್ತಿದೆ ಎನ್ನುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ. ಗುಜರಾತ್​ನ ಅದಾನಿ ಪೋರ್ಟ್​ನಿಂದ ಅರಬ್​ ದೇಶಗಳಿಗೆ ಗೋವುಗಳ ಸಾಗಾಟ ಮಾಡಲಾಗ್ತಿದೆ ಎನ್ನುವುದು ಪ್ರಮುಖ ಆರೋಪ. ಆದರೆ ಈ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಿದಾಗ ನಿಜಾಂಶ ಬಯಲಾಗಿದೆ.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಈ ವಿಡಿಯೋ ಸಾವಿರಾರು ಸಂಖ್ಯೆಯಲ್ಲಿ ಶೇರ್​ ಆಗಿದೆ. ಜನರು ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಹಸುಗಳ ಮಾರಣ ಹೋಮ ಮಾಡಲಾಗ್ತಿದೆ. ಕೆಲವು ಉದ್ಯಮಿಗಳ ವ್ಯವಹಾರಕ್ಕೆ ಗೋವುಗಳನ್ನು ಬಳಸಿಕೊಳ್ಳಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ಈಗಾಗಲೇ ಅದಾನಿ ಪೋರ್ಟ್​ನಲ್ಲಿ ಗಾಂಜಾ, ಡ್ರಗ್ಸ್​ ಸೇರಿದಂತೆ ಮಾದಕ ವಸ್ತುಗಳ ಸಾಗಾಟ ಎಲ್ಲೆ ಮೀರಿದೆ ಎನ್ನುವ ವರದಿಗಳ ಬೆನ್ನಲ್ಲೇ ಈ ರೀತಿಯ ಆರೋಪ ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಆಗಿದೆ. ಆದರೆ ಸತ್ಯಾಂಶವನ್ನು ಬಯಲು ಮಾಡಿದ್ದು, ಸದ್ಯಕ್ಕೆ ಜಾಲತಾಣದಲ್ಲಿ ವೈರಲ್​ ಆಗಿರುವ ಈ ವಿಡಿಯೋ ಅದಾನಿ ಬಂದರು ಅಲ್ಲ ಎನ್ನುವ ವರದಿಗಳು ಬಂದಿವೆ.

https://www.facebook.com/reel/938740381054171?mibextid=qi2Omg

ಈ ವಿಡಿಯೋ ಗುಜರಾತ್​ನ ಅದಾನಿ ಬಂದರ್​ನಿಂದ ಎಕ್ಸ್​ಪೋರ್ಟ್​ ಮಾಡಿರೋದು ಅಲ್ಲ. ಬದಲಿಗೆ ವಿಡಿಯೋ ಫ್ಯಾಕ್ಟ್​​ ಚೆಕ್​ Facts Check ಮಾಡಿದಾಗ, ಈ ವಿಡಿಯೋ ಟಿಕ್​ಟಾಕ್​ನಲ್ಲಿ ಐದು ದಿನಗಳ ಹಿಂದೆ ಪೋಸ್ಟ್​ ಆಗಿದೆ. ಇದು ಈಜಿಪ್ಟ್​ನಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಅರೆಬಿಕ್​ ಭಾಷೆಯಲ್ಲಿ ಬರೆದಿದ್ದು, ಈದ್ ಆಲ್ ಅಧಾ ಎಂದು ಬರೆಯಲಾಗಿದೆ. ಈಜಿಪ್ಟ್​ ಹಾಗು ಇರಾಕ್​ ನಡುವೆ ಈ ರೀತಿಯ ಕೊಡುಕೊಳ್ಳುವಿಕೆ ನಡೆದಿದ್ದು, ಭಾರತಕ್ಕೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ವರದಿಗಳು ಖಚಿತಪಡಿಸಿವೆ.

ಕೃಷ್ಣಮಣಿ

https://www.facebook.com/reel/938740381054171?mibextid=qi2Omg
Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಪ್ರವಾಸಕ್ಕೆಂದು ತೆರಲಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲು

Next Post

ನಮ್ಮ ಮೇಲೆ ದಾಳಿಗೆ ಬಂದರೆ ನುಗ್ಗಿ ಹೊಡಿತೇವಿ; ಮೋದಿ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ನಮ್ಮ ಮೇಲೆ ದಾಳಿಗೆ ಬಂದರೆ ನುಗ್ಗಿ ಹೊಡಿತೇವಿ; ಮೋದಿ

ನಮ್ಮ ಮೇಲೆ ದಾಳಿಗೆ ಬಂದರೆ ನುಗ್ಗಿ ಹೊಡಿತೇವಿ; ಮೋದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada