ಮೈಸೂರು ರಾಜವಂಶಸ್ಥರ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಿದೆ. ಸಿದ್ದರಾಮಯ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ಸಮರ ಅಂತಿಮ ಘಟ್ಟಕ್ಕೆ ತಲುಪಿದ್ದು, ರಾಜ್ಯ ಸರ್ಕಾರ ಬೆಂಗಳೂರು ಅರಮನೆ ಮೈದಾನದ ಭೂಮಿಯನ್ನ ವಶಕ್ಕೆ ಪಡೆದಿದ್ದ ವಿಚಾರದಲ್ಲಿ ಸುಗ್ರಿವಾಜ್ಞೆ ಜಾರಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.. 2025ರ ಜನವರಿ 16 ಕಾನೂನು ಹೋರಾಟಕ್ಕೆ ಸರ್ಕಾರ ನಿರ್ಧರಿಸಿತ್ತು. ಅದರ ಮುಂದಿನ ಭಾಗ ಸುಗ್ರೀವಾಜ್ಞೆ ಜಾರಿಗೆ ತರಲು ನಿರ್ಣಯ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 1996 ರಲ್ಲಿ ಅರಮನೆ ಜಾಗ ಸರ್ಕಾರದ ಸುಪರ್ಧಿಗೆ ಪಡೆಯಲು ಕಾನೂನು ಮಾಡಲಾಗಿತ್ತು. ರಾಷ್ಟ್ರ ಪತಿಗಳು ಅಂಗೀಕಾರ ಮಾಡಿದ್ರು. 472 ಎಕರೆ ಭೂಮಿಗೆ ಅಂದಿನ ಮಾರುಕಟ್ಟೆ ಮೌಲ್ಯ 11 ಕೋಟಿ ಆಗಿತ್ತು. ಈಗ 2025, 28 ವರ್ಷಗಳು ಗತಿಸಿವೆ. ಮೈಸೂರು ಭೂಸ್ವಾಧೀನ ಕಾಯ್ದೆಯನ್ನ ಪ್ರಶ್ನಿಸಿದ್ರು. ಆದರೆ ಹೈಕೋರ್ಟ್ ಕಾಯ್ದೆಯನ್ನ ಎತ್ತಿಹಿಡಿದಿತ್ತು. ಅದಾದ ಮೇಲೆ 1997 ರಲ್ಲಿ ಅರಮನೆಯವ್ರು ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಹೋಗಿದ್ರು, ಈಗ 27 ವರ್ಷಗಳು ಆಗಿವೆ ಜಯಮಹಲ್, ಬಳ್ಳಾರಿ ರಸ್ತೆಗಳೆನ್ನ ಅಗಲೀಕರಣ ಮಾಡಲು ಸುರ್ಪಿಂನಲ್ಲಿ ಚರ್ಚೆ ನಡೆದಿದೆ ಹೀಗಾಗಿ 27 ವರ್ಷಗಳ ಬಳಿಕ ಈ ವ್ಯಾಜ್ಯ ಮುಂಚೂಣಿಗೆ ಬಂದಿದೆ ಎಂದಿದ್ದಾರೆ.
ಅಂದು ಎಕರೆಗೆ 2.30 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಸುಪ್ರಿಂ ಕೋರ್ಟ್‌ನಲ್ಲಿ ದೊಡ್ಡ ಮಟ್ಟದ ವ್ಯಾಜ್ಯ ನಡೆದು 472.16 ಎಕರೆ ಜಾಗವನ್ನ 11 ಕೋಟಿ ನಿಗದಿ ಮಾಡಲಾಗಿತ್ತು. ಹೈಕೋರ್ಟ್ ತೀರ್ಪಿನ ಸಂಬಂಧ ಈವರೆಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿಲ್ಲ. 2024 ಡಿಸೆಂಬರ್ 10 ರಂದು ಸುಪ್ರಿಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಚಾಲ್ತಿ ಇರುವ ಮಾರುಕಟ್ಟೆ ಮೌಲ್ಯಕ್ಕೆ ವರ್ಗಾಯಿಸಿ ಅರಮನೆ ಜಾಗವನ್ನ ಬಳಕೆ ಮಾಡಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. 15.36 ಎಕರೆ ಭೂಮಿಯನ್ನ 13,91,742 ಅಡಿಗಳಷ್ಟು ಜಾಗ ವಶಕ್ಕೆ ಪಡೆದು ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದೆವು. ಚದರ ಅಡಿಗೆ 2.17 ಲಕ್ಷ ರೂಪಾಯಿ ಅಂತೆ 3014 ಕೋಟಿ ಸರ್ಕಾರ ಕೊಡಬೇಕಾಗಿದೆ ಎಂದಿದ್ದಾರೆ.
ಒಂದು ಎಕರೆಗೆ 2.30 ಲಕ್ಷ ರೂಪಾಯಿ ಎಲ್ಲಿ, 200 ಕೋಟಿ ರೂಪಾಯಿ ಎಲ್ಲಿ ಎಂದಿರುವ ಹೆಚ್.ಕೆ ಪಾಟೀಲ್, ಇದರಿಂದ ಅಭಿವೃದ್ಧಿಗೆ ಗಂಡಾಂತರ ಆಗಲಿದೆ. ಇದು ಪ್ರಗತಿ ವಿರೋಧಿ ನೀತಿ ಆಗುತ್ತದೆ. ಒಂದು ಕಡೆ ಮಾರುಕಟ್ಟೆ ಮೊತ್ತ, ಮತ್ತೊಂದು ಕಡೆ ಸರ್ಕಾರ ಖರೀದಿ ಮಾಡಿರುವ ಜಮೀನು. 3,016 ಕೋಟಿ ಹಣ ನೀಡಬೇಕೆನ್ನುವುದು ಅಂದ್ರೆ ಇದೊಂದು ಅವ್ಯವಹಾರ ಆಗುತ್ತದೆ. ಇಷ್ಟು ಜಮೀನಿಗೆ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ. ಹೀಗಾಗಿ ಸುಗ್ರಿವಾಜ್ಞೆ ಜಾರಿಗೆ ತಂದಿದ್ದೇವೆ. ಒಂದು ಟಿಡಿಆರ್ ನೀಡಿದರೆ ಹಿಂಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಕೊಟ್ಟರೆ ರಾಜ್ಯದ ಪ್ರಗತಿಗೆ ಮಾರಕ. ಹೀಗಾಗಿ ಟಿಡಿಆರ್ ಕೊಡದಂತೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಮುಂದಿನ ವಾರ ಸುಪ್ರಿಂನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಸರ್ಕಾರದ ನಿಲುವನ್ನ ಕೋರ್ಟ್‌ಗೆ ತಿಳಿಸಬೇಕಿದೆ. ಹೀಗಾಗಿ ಇಂದು ತುರ್ತು ಸಚಿವ ಸಂಪುಟ ಸಭೆ ಕರೆದು ಈ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.