ರನ್ ಬರ ಎದುರಿಸುತ್ತಿರುವ ಆರ್ ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಫಾರ್ಮ್ ಕುರಿತು ಇದೇ ಮೊದಲ ಬಾರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಬ್ಬರು ತಮ್ಮ ಆಟವನ್ನು ತೋರುವಲ್ಲಿ ವಿಫಲರಾಗಿದ್ದಾರೆ ಆದರೆ, ಅವರು ಫಾರ್ಮ್ಗೆ ಮರಳುವುದಕ್ಕೆ ಐಪಿಎಲ್ ಇದೊಳ್ಳೆ ಸಮಯವಾಗಿದೆ ಎಂದು ಸೌರವ್ ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು, ಇಬ್ಬರು ಅತ್ಯುತ್ತಮ ಆಟಗಾರರು ಅವರಿಬ್ಬರು ಎಂದಿನಂತೆ ತಮ್ಮ ಫಾರ್ಮ್ಗೆ ಮರಳುತ್ತಾರೆ ಎಂಬ ವಿಶ್ವಾಸ ನನ್ನಗಿದೆ. ವಿರಾಟ್ ತಲೆಯಲ್ಲಿ ಎನು ಒಡುತ್ತಿದೆ ಎಂಬುದು ನನ್ನಗೆ ಗೊತ್ತಿಲ್ಲಾ. ಕೊಹ್ಲಿ ಒಬ್ಬ ಉತ್ತಮ ಆಟಗಾರ ಅವರು ತಮ್ಮ ಎಂದಿನ ಫಾರ್ಮ್ಗೆ ಮರಳಲು ಸ್ವಲ್ಪ ಸಮಯ ಹಿಡಿಯುತ್ತದೆ ಅವರು ಮತ್ತೆ ರನ್ ಹೊಳೆ ಹರಿಸುತ್ತಾರೆ ಎಂಬ ವಿಶ್ವಾಸ ನನ್ನಗಿದೆ ಎಂದು ಹೇಳಿದ್ದಾರೆ.

ಹಾಲಿ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ 16ರ ಸರಾಸರಿಯಲ್ಲಿ 128 ರನ್ಗಳಿಸಿದ್ದಾರೆ. ರೋಹಿತ್ ಶರ್ಮಾ 19.13ರ ಸರಾಸರಿಯಲ್ಲಿ 153 ರನ್ ಗಳಿಸಿದ್ದಾರೆ. ಇಬ್ಬರು ಪ್ರಸಕ್ತ ಐಪಿಎಲ್ನಲ್ಲಿ ಅರ್ಧ ಶತಕವನ್ನು ಗಳಿಸಲು ವಿಫಲರಾಗಿದ್ದಾರೆ.
ಪ್ರಸಕ್ತ ಐಪಿಎಲ್ ಅನ್ನು ಗಂಗೂಲಿ ಬಹಳ ನಿಕಟವಾಗಿ ಅನುಸರಿಸುತ್ತಿದ್ದಾರೆ ಮತ್ತು ಎರಡು ಹೊಸ ತಂಡಗಳ ಸೇರ್ಪಡೆಯಿಂದ ತಾವು ಹೆಚ್ಚು ಪ್ರಭಾವಿರಾಗಿರುವುದಾಗಿ ಹೇಳಿದ್ದಾರೆ.
ಪ್ರಸಕ್ತ ಐಪಿಎಲ್ ಟೂರ್ನಿಯು ತುಂಬಾ ಆಸಕ್ತಿಕರವಾಗಿದ್ದು ನಾನು ಪ್ರತಿನಿತ್ಯ ವೀಕ್ಷಿಸುತ್ತಿದ್ದೇನೆ ಎರಡು ಹೊಸ ತಂಡಗಳಾದ ಗುಜರಾತ್ ಹಾಗೂ ಲಖನೌ ತಂಡಗಳು ಉತ್ತಮವಾಗಿ ತಮ್ಮ ಆಟವನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದ್ದಾರೆ.






