ಜಾತಿಗಣತಿ ವರದಿ ಜಾರಿಗೆ (Caste census) ತರುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಒಕ್ಕಲಿಗ ಸಮಾಜ ಹಾಗೂ ಸಮುದಾಯದ ನಾಯಕರ ನಿಲುವು ಏನಾಗಿರಲಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dcm dk Shivakumar) ಇಕ್ಕಟ್ಟಿಗೆ ಸಿಲುಕಿದಂತಿದೆ.

ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಗೋಜಲುಮಯವಾಗಿ ಉತ್ತರಿಸಿದ್ದಾರೆ.ಇದು ಸೆನ್ಸ್‌ಸ್ ಅಲ್ಲಾ .ಇದು ಸಾಮಾಜಿಕ ಆರ್ಥಿಕ ವರದಿ. ನಮ್ಮ ಪಕ್ಷದ ನಿಲುವು ಸರ್ವರಿಗೂ ಸಮಪಾಲು ಸಮಬಾಳು ಎಂದಿದ್ದಾರೆ.
ನಾವು ವರದಿ ನೋಡ್ತೇವೆ. ಇನ್ನು ಸಿಎಂ ಕೂಡ ಸಂಪೂರ್ಣ ವರದಿ ನೋಡಿಲ್ಲ. ನಾನು ನೋಡಿಲ್ಲ.ಇವತ್ತು ವರದಿ ಕಳಿಸಿಕೊಳ್ತಾರೆ ನೋಡ್ತೇವೆ.ಹೆಚ್ಚು ಕಮ್ಮಿ ಇದ್ರೆ ಚರ್ಚೆ ಮಾಡ್ತೇವೆ,ಎಲ್ಲಾ ಸರಿ ಮಾಡೋ ಕೆಲಸ ಮಾಡ್ತೇವೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಡಿಸಿಎಂ ಮಾತನಾಡಿದ್ದಾರೆ.