~ಡಾ. ಜೆ ಎಸ್ ಪಾಟೀಲ.
ಬೆಂಗಳೂರು :ಏ.೦೮: ಕೇವಲ ಅತ್ಯಲ್ಪ ಅವಧಿಯಲ್ಲಿ ಬಿಜೆಪಿ ಎನ್ನುವ ಪುರೋಹಿತಶಾಹಿಗಳು ಸ್ಥಾಪಿಸಿದ ರಾಜಕೀಯ ಪಕ್ಷ ಇಡೀ ಜಗತ್ತಿನಲ್ಲೇ ಶ್ರೀಮಂತ ಪಕ್ಷವಾಗಿದ್ದು ಬಹಳ ಪಾರದರ್ಶಕ ಹಣಕಾಸು ವ್ಯವಹಾರಗಳಿಂದ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶತಮಾನೋತ್ಸವ ಕಂಡು ಕನಿಷ್ಟ ೫೫ ವರ್ಷ ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಮಾಣದ ಹಣ ಮಾಡಲು ಆಗಲಿಲ್ಲ. ಅದಕ್ಕೆ ಬಿಜೆಪಿ ಸಮರ್ಥಕರು ಕಾಂಗ್ರೆಸ್ ನಾಯಕರು ಹಣ ಮಾಡಿದ್ದಾರೆ ಆದರೆ ಬಿಜೆಪಿ ಪಕ್ಷಕ್ಕಾಗಿ ಹಣ ಮಾಡಿದೆ ಎನ್ನುತ್ತಾರೆ. ಆದರೆ ಕೇವಲ ಅತ್ಯಲ್ಪ ಅವಧಿಯಲ್ಲಿ ಬಿಜೆಪಿ ಪುಢಾರಿಗಳು ಮಾಡಿದಷ್ಟು ಹಣ ಭಾರತದ ಬೇರಾವ ರಾಜಕೀಯ ಪಕ್ಷಗಳು ಮಾಡಿಲ್ಲ ಎನ್ನುವುದಕ್ಕೆ ಅಂಕಿಅಂಶಗಳು ಸಾಕ್ಷಿಯಾಗಿವೆ. ಕರ್ನಾಟಕದಲ್ಲಿಯೆ ೨೦೦೫ ರ ನಂತರದ ಅವಧಿಯಲ್ಲಿ ಶಾಸಕರಾದವರ ಐಶ್ವರ್ಯ ಸರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಏರಿದೆ. ಅದರಲ್ಲಿ ಬಿಜೆಪಿ ಪುಢಾರಿಗಳದ್ದೆ ಸಿಂಹಪಾಲು.

ಇನ್ನು ಬಿಜೆಪಿ ದಿಲ್ಲಿಯಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಪಕ್ಷದ ಐಶಾರಾಮಿ ಕಛೇರಿಗಳ ಕಟ್ಟಡಕ್ಕೆ ನೂರರಿಂದ ಸಾವಿರಾರು ಕೋಟಿ ಖರ್ಚು ಮಾಡಿದ್ದು ಮುಚ್ಚಿಡಲಾಗದು. ಆದರೆ ಅದರ ಹಣದ ಮೂಲ ಖಂಡಿತ ಮುಚ್ಚಿಡಲಾಗಿದೆˌ ಅದೂ ಕಾನೂನಿನ ಸಹಾಯದಿಂದ ಎನ್ನುವುದು ಇನ್ನೂ ಸೋಜಿಗದ ಸಂಗತಿ. ಇನ್ನು ಬಿಜೆಪಿ ಆಡಳಿತದ ಪ್ರತಿ ರಾಜ್ಯಗಳಲ್ಲಿ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಪತ್ತೆಯಾದರೂ ಸರಿಯಾದ ವಿಚಾರಣೆಯೆ ಆಗದೆ ಅವೆಲ್ಲ ಮುಚ್ಚಿಹೋಗಿವೆ. ಕರ್ನಾಟಕದಲ್ಲಿ ೨೦೦೮ ರಲ್ಲಿ ಆಡಳಿತಕ್ಕೆ ಬಂದಿದ್ದ ಬಿಜೆಪಿ ಸರಕಾರದ ಅರ್ಧ ಡಜನ್ ಗೂ ಹೆಚ್ಚಿನ ಮಂತ್ರಿಗಳು ಜೈಲುಪಾಲಾಗಿದ್ದು ನಾವು ಸ್ಮರಿಸಬಹುದು. ಇಡೀ ಭಾರತದಲ್ಲಿ ಬಳ್ಳಾರಿಯ ಗಣಿಹಗರಣ ಬಿಜೆಪಿಯ ಕಾರ್ಯವೈಖರಿಗೆ ಗರಿ ಇದ್ದಂತೆ. ಕಾಂಗ್ರೆಸ್ ಆಡಳಿತದಲ್ಲೂ ಗಣಿಗಳ್ಳರು ಇದ್ದರು. ಆದರೆ ಸುಷ್ಮಾ ಸ್ವರಾಜ ಮುಂತಾದ ಬಿಜೆಪಿ ಕೇಂದ್ರ ನಾಯಕರ ಕೃಪಾಕಟಾಕ್ಷದಿಂದ ಬಿಜೆಪಿ ಅವಧಿಯಲ್ಲಿ ಗಣಿ ಹಗರಣಕ್ಕೆ ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಕುಖ್ಯಾತಿ ಬಂದದ್ದು ಸುಳ್ಳಲ್ಲ.
ಬಿಜೆಪಿ ಕೇವಲ ಎಲೆಕ್ಟೋರಲ್ ಬಾಂಡ್‌ಗಳಿಂದಷ್ಟೇ ಅಲ್ಲದೆ ಅನೇಕ ಮೂಲಗಳಿಂದ ದೇಣಿಗೆ ಹಣ ಪಡೆಯುತ್ತಿದೆ. ೨೦೧೯ ರಿಂದ, ಅರ್ಥ ಮಂತ್ರಿ ಪ್ರಕಟಣೆ ಹೊರಡಿಸುವ ಮುನ್ನ, ಷೇರು ಮಾರುಕಟ್ಟೆ ಬಹಳ ನಾಟಕೀಯ ರೀತಿಯಲ್ಲಿ ಏರಿಕೆಯಾಗಲು ಪ್ರಾರಂಭಿಸುವುದನ್ನು ನೋಡುತ್ತೇವೆ. ಪ್ರಕಟಣೆಯ ನಂತರ, ಅದು ತಕ್ಷಣವೇ ಬೀಳಲು ಪ್ರಾರಂಭಿಸುತ್ತದೆ. ಅಂದರೆ ಯಾರಾದರೂ ಕೆಲವು ಆಯ್ದ ಶ್ರೀಮಂತ ಜನರಿಗೆ ಷೇರು ಖರೀದಿಸಲು ಹೇಳುವುದು ಮತ್ತು ೫-೧೦ ದಿನಗಳ ಮುಂಚಿತವಾಗಿ ಪ್ರಕಟಣೆಯನ್ನು ಸೋರಿಕೆಯಾಗುವಂತೆ ನೋಡಿಕೊಳ್ಳುವ ವ್ಯವಸ್ಥಿತ ಹುನ್ನಾರದಂತೆ ಇದು ಎದ್ದು ಕಾಣುತ್ತದೆ. ಪ್ರಕಟಣೆಯಾದ ನಂತರ ಸಾಮಾನ್ಯ ಜನರು ಷೇರುಗಳನ್ನು ಖರೀದಿಸುತ್ತಾರೆ, ಮತ್ತು ಮೊದಲು ಖರಿದಿಸಿದ ಆ ಶ್ರೀಮಂತ ಜನರು ಆ ಷೇರುಗಳನ್ನು ಆಗ ಮಾರಾಟ ಮಾಡುತ್ತಾರೆ.

ಹಿಂದಿನ ಕೆವಲು ವರ್ಷಗಳ ಅಂಕಿ ಅಂಶಗಳು ಹೇಳುವಂತೆ ಕೇಮನ್ ದ್ವೀಪಗಳಿಂದ ಬರುವ ಅಕ್ರಮ ಹಣದ ಹರಿವು ಮೂರು ಪಟ್ಟು ಹೆಚ್ಚಾಗಿದೆ. ಈ ಹಣವೆಲ್ಲವೂ ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆಯಾಗುತ್ತದೆ ಮತ್ತು ಮರಳಿ ಕೇಮನ್ ದ್ವೀಪಗಳಿಗೆ ಹೋಗುತ್ತದೆ. ಈ ಹಣಕಾಸು ವ್ಯವಹಾರವು ಯಾವುದೇ ತೆರಿಗೆಗಳಿಗೆ ಒಳಪಡುವುದಿಲ್ಲ. ಕೇಮನ್ ದ್ವೀಪಗಳು ವಿಶ್ವದ ಕಪ್ಪು ಹಣದ ಕೇಂದ್ರವಾಗಿದೆ. NBFC ಗಳಿಗೆ ನೀಡಲಾಗುವ ಆ ಪರಿಹಾರ ಪ್ಯಾಕೇಜ್‌ಗಳು ಅದು ಹಣಕಾಸಿನ ಮತ್ತೊಂದು ಮೂಲವಾಗಿದೆ. ಮೂಲತಃ ಎನ್‌ಬಿಎಫ್‌ಸಿ ಗಳು ವಿದೇಶಿ ಮೂಲಗಳಿಂದ ಹಣವನ್ನು ಪಡೆಯುತ್ತವೆ. ನಂತರ ಅವು ಆ ಹಣವನ್ನು ಬಳಸುತ್ತವೆ ಮತ್ತು ಇಲ್ಲಿ ಸಾಲವನ್ನು ನೀಡುತ್ತವೆ. ಡಿಎಚ್‌ಎಫ್‌ಎಲ್ ಅಂತಹ ಒಂದು ಕಂಪನಿಯಾಗಿದ್ದು, ಇದು ಬಿಜೆಪಿಗೆ ಬಹಿರಂಗವಾಗಿ ದೇಣಿಗೆ ನೀಡುತ್ತದೆ. ಅಂತಹ ಎನ್‌ಬಿಎಫ್‌ಸಿ ಗಳು ಎಲ್ಲಾ ಹಣವನ್ನು ಈ ರೀತಿ ಮುಗಿಸಿಹಾಕಿ ಬಿಜೆಪಿಗೆ ದೇಣಿಗೆ ನೀಡುತ್ತವೆ. ಇತ್ತೀಚೆಗೆ, ಬಿಜೆಪಿ ಎನ್‌ಬಿಎಫ್‌ಸಿ ಗಳಿಗೆ ೭೫೦೦೦ ಕೋಟಿ ಪರಿಹಾರ ಪ್ಯಾಕೇಜ್ ನೀಡಿದೆ. ಮತ್ತು ತಮ್ಮ ಹಣವನ್ನು ಎನ್‌ಬಿಎಫ್‌ಸಿಯಲ್ಲಿ ಇರಿಸಿದ ವಿದೇಶಿ ಕಂಪನಿಗಳಿಗೆ ಹಿಂದಿರುಗಿಸಲಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆˌ ಬಿಜೆಪಿ ಹಣ ಪಡೆಯುತ್ತದೆ, ಮತ್ತು ಭಾರತ ದೇಶ ಅದನ್ನು ಹಿಂದಿರುಗಿಸುತ್ತದೆ
ಬ್ಯಾಂಕುಗಳ ಈ ಕೆಟ್ಟ ಮತ್ತು ವಂಚನೆ ಸಾಲದ ಅಂಕಿ ಅಂಶಗಳು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಲವು ಪಟ್ಚು ಬೆಳೆದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ಯಾಂಕುಗಳು ಬಿಜೆಪಿಗೆ ಆಪ್ತರಾಗಿರುವವರಿಗೆ ಸಾಲವನ್ನು ನೀಡುತ್ತದೆ, ಮತ್ತು ನಂತರ ಅದನ್ನು ವಂಚನೆ ಮತ್ತು ಕೆಟ್ಟ ಸಾಲವೆಂದು ಘೋಷಿಸಿಸಲಾಗುತ್ತದೆ. ಆ ಹಣ ಎಂದಿಗೂ ಬ್ಯಾಂಕುಗಳಿಗೆ ಹಿಂತಿರುಗುವುದಿಲ್ಲ. ೨೦೨೦ ರ ಹೊತ್ತಿಗೆ ಅಂತಿಮವಾಗಿ ೯ ಲಕ್ಷ ಕೋಟಿ ಹೆಚ್ಚುವರಿ ಹಣ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿತ್ತು. ಬಿಜೆಪಿ ಆಡಳಿತವು ನೋಟು ನಿಷೇಧಗೊಳಿಸಿದಾಗ ೨೦೧೬ ರಲ್ಲಿ ಚಲಾವಣೆಯಲ್ಲಿದ್ದದ್ದು ಒಟ್ಟು ೧೭ ಲಕ್ಷ ಕೋಟಿ ಹಣ. ೨೦೧೯ ರಲ್ಲಿ ಅದು ೨೦ ಲಕ್ಷ ಕೋಟಿಗೆ ಏರಿತು. ೨೦೨೦-೨೧ ರಲ್ಲಿ ಅದು ೨೬ ಲಕ್ಷ ಕೋಟಿ ಮುಟ್ಟಿತು. RBI ಮಾಹಿತಿ ಆಧಾರಗಳು ಈ ಅಂಕಿ ಅಂಶಗಳನ್ನು ದೃಢಪಡಿಸುತ್ತವೆ. ಈ ಹೆಚ್ಚುವರಿ ೯ ಐಎಲ್ ಎಲ್ಲಿಂದ ಬಂತು? ಬಿಜೆಪಿ ಅದನ್ನು ಮುದ್ರಿಸಿತೆ? ಇದು ಸೋಜಿಗವೆನ್ನಿಸುವುದು ಹಾಗು ಸಂಶಯಾಸ್ಪದ ಎನ್ನುವುದು ಸಹಜವಲ್ಲವೆ!
~ ಡಾ. ಜೆ ಎಸ್ ಪಾಟೀಲ.