ಇಡೀ ಜಗತ್ತಿನಲ್ಲಿ ಹಲವಾರು ಧರ್ಮಗಳಿವೆ. ಹಾಗೆ ಎಲ್ಲಾ ದೇಶಗಳಲ್ಲೂ ಬೇರೆ ಬೇರೆ ರೀತಿಯ ಧರ್ಮಗಳಿವೆ. ಜಗತ್ತಿನಾದ್ಯಂದ ಅತಿಹೆಚ್ಚು ಜನಸಂಖ್ಯೆ ಹೊಂದಿದ ಟಾಪ್ 8 ಧರ್ಮಗಳ ಪಟ್ಟಿ ಇಲ್ಲಿದೆ.

ಇಸ್ಲಾಂ ವಿಶ್ವದ ಎರಡನೇ ಅತಿದೊಡ್ಡ ಧರ್ಮವಾಗಿದ್ದು, ಮುಖ್ಯವಾಗಿ ಇಂಡೋನೇಷ್ಯಾ, ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ವ್ಯಾಪಿಸಿದೆ.ಇಸ್ಲಾಂ ಧರ್ಮ ಅತಿ ವೇಗವಾಗಿ ಬೆಳೆಯುತ್ತಿದೆ. ಹಿಂದೂಗಳಿಗಿಂತ ಇಸ್ಲಾಂ ಸಂಖ್ಯೆಯೇ ಪ್ರಪಂಚದಾದ್ಯಂತ ಹೆಚ್ಚಾಗಿದೆ. 34.7 ಕೋಟಿ ಜನಸಂಖ್ಯೆ ಹೆಚ್ಚಳವನ್ನು ಈ ಧರ್ಮದಲ್ಲಿ ಕಾಣಬಹುದು, ಮುಸ್ಲಿಮರ ಸಂಖ್ಯೆ ಶತಕೋಟಿ ಸಮೀಪ ಬಂದಿದೆ.ಈ ಧರ್ಮ ಸದ್ಯಕ್ಕೆ ವೇಗಗವಾಗಿ ವೃದ್ಧಿಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ.

ಕ್ರಿಶ್ಚಿಯನ್ ಧರ್ಮವು ವಿಶ್ವದ ಅತಿದೊಡ್ಡ ಧರ್ಮವಾಗಿದ್ದು, ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಮೆಕ್ಸಿಕೊ, ರಷ್ಯಾ ಮತ್ತು ಯುರೋಪಿನಾದ್ಯಂತ ವ್ಯಾಪಿಸಿದೆ.

ಹಿಂದೂ ಧರ್ಮವು ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಿದ್ದು, 1.1 ಬಿಲಿಯನ್ ಜನಸಂಖ್ಯೆಯನ್ನು ಹೊಂದಿದೆ, ಇವರಲ್ಲಿ ಹೆಚ್ಚಿನವರು ಭಾರತ ಮತ್ತು ನೇಪಾಳದಲ್ಲಿ ಮತ್ತು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪ್ರಪಂಚದ ಕೆಲವು ಇತರೆ ಕಡೆಯಲ್ಲಿ ನೆಲೆಸಿದ್ದಾರೆ. ಗೌತಮ (ಬುದ್ಧ) ಸ್ಥಾಪಿಸಿದ ಈ ಬೌದ್ಧ ಧರ್ಮವು ನಾಲ್ಕನೇ ಅತಿದೊಡ್ಡ ಧರ್ಮವಾಗಿದ್ದು ಚೀನಾ, ಜಪಾನ್, ಥೈಲ್ಯಾಂಡ್, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಲ್ಲಿದೆ.

ಜಪಾನ್‌ನ ಸಾಂಪ್ರದಾಯಿಕ ಧರ್ಮವಾದ ಶಿಂಟೋವನ್ನು 104 ಮಿಲಿಯನ್ ಜನರು ಆಚರಿಸುತ್ತಾರೆ. ಇದು ಐದನೇ ಅತಿದೊಡ್ಡ ಧರ್ಮವಾಗಿದೆ.ಭಾರತದ ಪಂಜಾಬ್‌ನಲ್ಲಿ, ಸಿಖ್ ಧರ್ಮ ಬಲವಾದ ಅಸ್ತಿತ್ವವನ್ನು ಹೊಂದಿದ್ದು, ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ದಲ್ಲಿಯೂ ಪ್ರಮುಖ ಸಧರ್ಮವಾಗಿದೆ. ಇದು ಆರನೇ ಅತಿದೊಡ್ಡ ಧರ್ಮವಾಗಿದೆ.

ಯಹೂದಿ ಧರ್ಮವು ಪ್ರಾಥಮಿಕವಾಗಿ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಸ್ತಿತ್ವದಲ್ಲಿದ್ದು, ಸುಮಾರು 14 ಮಿಲಿಯನ್ ಜನಸಂಖ್ಯೆ ಹೊಂದಿದೆ.ಯುರೋಪ್, ಕೆನಡಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿಯೂ ಯಹೂದಿ ಸಮುದಾಯಗಳನ್ನು ನೋಡಬಹುದು. ಇದು ಏಳನೇ ಅತಿದೊಡ್ಡ ಧರ್ಮವಾಗಿದೆ. ಟಾವೊ ತತ್ತ್ವವು ಮುಖ್ಯವಾಗಿ ಚೀನಾ ಮತ್ತು ತೈವಾನ್‌ನ ಕೆಲವು ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಇದು ಎಂಟನೇ ಅತಿದೊಡ್ಡ ಧರ್ಮವಾಗಿದೆ






