ನವದೆಹಲಿ:ಮಾ.25: ಅದಾನಿ ಪ್ರಕರಣದಲ್ಲಿ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಭಯ ಕಾಡಿದ್ದರಿಂದ ನನ್ನ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭೆ ಸದಸ್ಯತ್ವ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಪ್ರಕರಣದಲ್ಲಿ ದಿಗಿಲುಗೊಂಡಿರುವ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸಲು ಈ ಆಟವನ್ನು ಆಡಿದೆ ಎಂದು ಆರೋಪಿಸಿದ್ದಾರೆ.

ನನ್ನನ್ನು ಅನರ್ಹಗೊಳಿಸಿರುವುದರಿಂದ ಅಥವಾ ಜೈಲಿಗೆ ಅಟ್ಟುವುದರಿಂದ ನಾನು ಹೆದರುವುದಿಲ್ಲ ಅಥವಾ ಹಿಂದಕ್ಕೆ ಸರಿಯುವುದಿಲ್ಲ. ಷೇರು ಅಕ್ರಮದಲ್ಲಿ ಸಿಲುಕಿರುವ ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿ ನಂಟಿನ ಬಗ್ಗೆ ಪ್ರಶ್ನೆ ಮಾಡುತ್ತಲೇ ಇರುತ್ತೇನೆ ಎಂದು ಹೇಳಿದರು. ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
I'm standing up for the democratic rights of the people of India, and I'm not afraid.
— Congress (@INCIndia) March 25, 2023
These people don't understand me yet.
I remain committed to asking questions about the PM's connection to Adani. Their partnership has been long-standing and close.
: @RahulGandhi ji pic.twitter.com/SfmX415Pkt