ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ A2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಇ.ಡಿ ಪರವಾಗಿ ವಕೀಲ ಮಧುರಾವ್ ವಾದ ಮಂಡಿಸಿದ್ದಾರೆ. ಕಸ್ಟಮ್ಸ್ ಕಾಯ್ದೆ 135(1)(a) ಅನ್ವಯ ತರುಣ್ ರಾಜ್ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ನಿರ್ಬಂಧಿತ ವಸ್ತುಗಳ ಸಾಗಣೆ ಯತ್ನ, ಕಳ್ಳಸಾಗಣೆ, ಖರೀದಿ, ಮಾರಾಟ ಮಾಡುವುದು ಅಪರಾಧ. ಕೇಂದ್ರ ಸರ್ಕಾರ ಸೂಚಿಸಿದ ವಸ್ತುಗಳ ಪೈಕಿ 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳ ಸಾಗಾಟ ಅಪರಾಧ ಆಗಿದೆ. ಮೊದಲನೇ ಆರೋಪಿಯನ್ನ ಬಂಧಿಸಲಾಯಿತು. ರನ್ಯಾ ರಾವ್ ಬಂಧನದ ನಂತರ ತನಿಖೆಯಲ್ಲಿ ತರುಣ್ ಪಾತ್ರ ಬೆಳಕಿಗೆ. ಎಫ್ಎಸ್ಎಲ್ ದಾಖಲೆಗಳಲ್ಲಿ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಮಾರ್ಚ್ 3 ರಂದು ದುಬೈನಿಂದ ಹೈದರಾಬಾದ್ಗೆ ಪ್ರಯಾಣ ಮಾಡಲಾಗಿದೆ. ನಮಗೆ ಇದರ ಬಗ್ಗೆ ಎವಿಡೇನ್ಸ್ ಸಿಕ್ಕಿದೆ. ತರುಣ್ ರಾಜ್ ಟಿಕೆಟ್ ಬುಕ್ ಮಾಡಿದ್ದೇ ಮೊದಲನೇ ಆರೋಪಿ ರನ್ಯಾ ರಾವ್. ತರುಣ್ ಅಕೌಂಟ್ಗೆ ರನ್ಯಾ ಹಣ ಹಾಕಿದ್ದಾರೆ. ಇದೇ ಹಣದಿಂದ ವಿಮಾನದ ಟಿಕೆಟ್ ಬುಕ್ ಆಗಿದೆ. ಅವರು ಎಸ್ಕೇಪ್ ಆಗಲು ಪ್ರಯತ್ನ ನಡೆಸಿದ್ದಾರೆ. ತರುಣ್ ಸಂಬಂಧ ಲುಕ್ ಔಟ್ ಸರ್ಕ್ಯಲರ್ ಹೊರಡಿಸಲಾಗಿದೆ. ಭಾರತದಿಂದ ಪರಾರಿಯಾಗಲು ತರುಣ್ ಪ್ರಯತ್ನಿಸಿದ್ದಾನೆ. ಮಾರ್ಚ್ ಮೂರರಂದು ಡಿಆರ್ಐ ನಲ್ಲಿ ಹೇಳಿಕೆ ಪಡೆಯಲಾಯಿತು. ಆ ನಂತರ ಆತನನ್ನ ಬಂಧಿಸಲಾಗಿದೆ ಎಂದು ಡಿಆರ್ಐ ಪರ ವಕೀಲ ಮಧುರಾವ್ ವಾದ ಮಂಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಅರೆಸ್ಟ್ ಮೆಮೊ ನೀಡಲಾಗಿದೆ. ಮೆಮೊದಲ್ಲಿ ಅಪರಾಧ, ಬಂಧನದ ಆಗತ್ಯ ತಿಳಿಸಲಾಗಿದೆ. ದುಬೈನಿಂದ ಜಿನೀವಾ ಅಥವಾ ಬ್ಯಾಂಕಾಕ್ಗೆ ಗೋಲ್ಡ್ ಸ್ಮಗ್ಲಿಂಗ್ ಯತ್ನ ನಡೆದಿದೆ. ಈ ಹಿಂದೆಯೂ ಇದೇ ರೀತಿ ಸ್ಮಗ್ಲಿಂಗ್ ಮಾಡಿರುವುದು ಕಂಡು ಬಂದಿದೆ. ಅರೆಸ್ಟ್ ಅದ ನಂತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ತರುಣ್ ಸಹೋದರಿಗೆ ಮಾಹಿತಿ ನೀಡಲಾಗಿದೆ. ಡಿಆರ್ ಐ ಎಲ್ಲಾ ನಿಯಮಗಳನ್ನ ಪಾಲಿಸಿದೆ ಎಂದು ಡಿಆರ್ಐ ಪರ ವಕೀಲ ಮಧುರಾವ್ ವಾದಿಸಿದ್ರು.

ತರುಣ್ ಕಡೆಯಿಂದ ಐದು ಹೇಳಿಕೆಗಳನ್ನ ದಾಖಲಿಸಲಾಗಿದೆ. ಮಾರ್ಚ್ 8, 9, 10, 11, 12ರಂದು ಹೇಳಿಕೆಗಳನ್ನ ಪಡೆಯಲಾಗಿದೆ. ತರುಣ್ ಅಮೆರಿಕ ಸಿಟಿಜನ್. ಹಾಗಾಗಿ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇದೆ. ಚಿನ್ನವನ್ನು ಜಿನೀವಾಗೆ ತೆಗೆದುಕೊಂಡು ಹೋಗ್ತಿನಿ ಅಂತಾ ದುಬೈನಲ್ಲಿ ಘೋಷಿಸಿ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ. ಜಿನೀವಾಗೆ ಹೋಗ್ತಿನಿ ಅಂತಾ ಭಾರತಕ್ಕೆ ಯಾಕೆ ಬಂದ್ರು..? ಇದರ ಬಗ್ಗೆ ತನಿಖೆ ಮಾಡಬೇಕಿದೆ. ಡಿಆರ್ಐ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ. 41A ನೋಟಿಸ್ ನೀಡುವುದು ಪೊಲೀಸರು, ಡಿಆರ್ಐ ಅಧಿಕಾರಿಗಳು CRPC 41A ಅಡಿಯಲ್ಲಿ ನೋಟಿಸ್ ನೀಡುವ ಅಗತ್ಯ ಇಲ್ಲ ಎಂದು ಕೋರ್ಟ್ನಲ್ಲಿ ವಾದಿಸಿದ್ದಾರೆ.

ದುಬೈನಲ್ಲಿ ಗೋಲ್ಡ್ ಖರೀದಿಗೆ ಹಣ ಟ್ರಾನ್ಷಕ್ಷನ್ ಆಗಿದೆ. ಭಾರತದಿಂದ ದುಬೈಗೆ ಟ್ರಾನ್ಸಕ್ಷನ್ ಆಗಿದೆ. ಈ ವ್ಯವಹಾರದ ಬಗ್ಗೆ ತನಿಖೆ ಮಾಡಬೇಕಿದೆ. ಹಣ ಸಂದಾಯದ ಸಂಪೂರ್ಣ ತನಿಖೆ ಆಗಬೇಕು. ಸ್ಮಗ್ಲಿಂಗ್ ನಲ್ಲಿ ಅಂತರಾಷ್ಟ್ರೀಯ ಲಿಂಕ್ಗಳ ಬಗ್ಗೆಯೂ ತನಿಖೆ ಆಗಬೇಕು. ಆರೋಪಿ ದುಬೈಗೆ ಹೆಚ್ಚಾಗಿ ಟ್ರಾವೆಲ್ ಮಾಡಿದ್ದಾರೆ. 20ಕ್ಕು ಹೆಚ್ಚು ಬಾರಿ ಬೆಳಗ್ಗೆ ಹೋಗಿ ಸಂಜೆ ವಾಪಸ್ ಆಗಿದ್ದಾರೆ. ತನಿಖೆಯಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಮತ್ತೆ ಅವರನ್ನ ವಶಕ್ಕೆ ಪಡೆದು ತನಿಖೆ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಎರಡನೇ ಆರೋಪಿ ತರುಣ್ ರಾಜ್ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಪ್ರತಿವಾದ ಮುಂದುವರಿಯಲಿದೆ…