ಕಾಂಗ್ರೆಸ್ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಕ್ಲಾರಿಟಿ ಕೇಳಲು ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದು, ಈ ವೇಳೆ ಹಿಂದಿನ ಸರ್ಕಾರದ ವೇಳೆ ನಕಲಿ ಸಹಿ ಬಳಕೆ ಆರೋಪ ಮಾಡಿದ್ದಾರೆ. ಸಿಎಂ 5 ಸೈನ್ ಮಾಡಿದರೆ, ಅವರ ಮಗ 50 ಸೈನ್ ಮಾಡ್ತಿದ್ದರು. ಸೈನ್ ಮಾಡಿ ಪಡೆದ ಆ ಹಣ ಎಲ್ಲ ಫ್ಲೈಟ್ನಲ್ಲಿ ಕಳಿಸಿದ್ದಾರೆ ಅಂತ ಮಾಹಿತಿ ಕೇಳಿ ಬರುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಸದನದಲ್ಲಿ ಆರೋಪ ಮಾಡಿದ್ದಾರೆ ಎಮ್ಎಲ್ಸಿ ಪುಟ್ಟಣ್ಣ.

ಪುಟ್ಟಣ್ಣ ಹೇಳಿಕೆಗೆ ವಿರೋಧ ಪಕ್ಷದ ಸದ್ಯಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೂ ರಾಜ್ಯಪಾಲರ ಭಾಷಣದ ಚರ್ಚೆಗೂ ಏನು ಸಂಬಂಧ ಎಂದ ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರ ಜೊತೆಗೆ ಪುಟ್ಟಣ್ಣ ವಾಗ್ವಾದ ಮಾಡಿದ್ದಾರೆ. ಕಡತದಿಂದ ಈ ವಿಷಯ ಕೈಬಿಡಲು ಬಿಜೆಪಿ ಸದಸ್ಯರ ಆಗ್ರಹ ಮಾಡಿದಾಗ ಛೀ ನಿಮಗೆ ನಾಚಿಕೆ ಆಗಬೇಕು ಎಂದಿದ್ದಾರೆ ಪುಟ್ಟಣ್ಣ. ಪುಟ್ಟಣ್ಣ ಪದ ಬಳಕೆಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಸದನದಿಂದ ಹೊರನಡೆದಿದ್ದಾರೆ ಪರಿಷತ್ ಸದಸ್ಯರ ಸಿಟಿ ರವಿ. ಈ ವೇಳೆ ವಿಷಯದ ಬಗ್ಗೆ ಕಡತ ಪರಿಶೀಲನೆ ನಡೆಸೋದಾಗಿ ಸಭಾಪತಿ ಭರವಸೆ ನೀಡಿದ್ದಾರೆ. ಪರಿಷತ್ ಸಭಾಪತಿ ಭರವಸೆ ಬಳಿಕ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಈಗಲೂ ಬಹಳ ಚರ್ಚೆಯಲ್ಲಿ ಇರುವ ವಿಚಾರ ಇದು. ನಿತ್ಯ ಪ್ರಸ್ತಾಪ ಮಾಡ್ತಿರುವ ವಿಚಾರ. ಹಿಂದಿನ ಮುಖ್ಯಮಂತ್ರಿ ಅವ್ರು ಐದು ಸಹಿ ಮಾಡಿದ್ರೆ ಅವರ ಮಗ 50 ಸೈನ್ ಮಾಡ್ತಿದ್ರು. ಸಾಕಷ್ಟು ಹಣ ಮಾಡಿ ಆ ಹಣ ಎಲ್ಲ ಫ್ಲೈಟ್ನಲ್ಲಿ ಸಾಗಿಸಿದ್ದಾರೆ ಅಂತ ಪ್ರಸ್ತಾಪ ಆಗ್ತಿದೆ. ದುಡ್ಡು ಎಲ್ಲಿಗೆ ತೆಗೆದುಕೊಂಡು ಹೋದ್ರು, ಎಲ್ಲಿಗೆ ಸಾಗಿಸಿದ್ದಾರೆ ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಒಂದು ಎಸ್‌ಐಟಿ ರಚನೆ ಮಾಡಬೇಕು ಎಂದು ಎಂದು ಒತ್ತಾಯ ಮಾಡಿದ್ದಾರೆ ಪುಟ್ಟಣ್ಣ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೆಸರು ಹೇಳದೆ ಪರೋಕ್ಷವಾಗಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ವಿರೋಧ ಪಕ್ಷದ ಸದ್ಯಸ್ಯರು.

ಇದಕ್ಕೂ ರಾಜ್ಯಪಾಲರ ಭಾಷಣದ ಚರ್ಚೆಗೆ ಏನು ಸಂಬಂಧ..? ಇದನ್ನ ಕಡತದಿಂದ ತೆಗೆಸಿ ಎಂದು ವಿಪಕ್ಷ ಸದಸ್ಯರ ಆಗ್ರಹ ಮಾಡಿದ್ದಾರೆ. ಈ ವೇಳೆ ವಿರೋಧ ಪಕ್ಷದ ಉಪನಾಯಕ ಸುನಿಲ್ ವಲ್ಯಾಪುರೆ ಮಧ್ಯಪ್ರವೇಶ ಮಾಡಿ, ನೀ ಯಾವ್ಯಾವ ಪಾರ್ಟಿಲಿದ್ರಿ, ಹೆಂಗೆ ಬಂದ್ರಿ ಅಂತ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ನೀವು ಹೇಗೆ ಬಂದ್ರಿ ಏನು ಅಂತ ನಮಗೆ ಗೊತ್ತು. ಪಕ್ಕದಲ್ಲೇ ವಿಶ್ವನಾಥ್ ಇದ್ದಾರೆ ಅವರನ್ನೇ ಕೇಳಿ ಎಂದಿದ್ದಾರೆ ಪುಟ್ಟಣ್ಣ. ಈ ವೇಳೆ ಥೂ ನಿನ್ ಜನ್ಮಕ್ಕೆ ಎಂದು ಪದ ಬಳಸಿದ್ದಾರೆ ಪುಟ್ಟಣ್ಣ. ಪುಟ್ಟಣ್ಣ ಮಾತಿಗೆ ವಿಪಕ್ಷ ಸದಸ್ಯರ ಆಕ್ರೋಶ ವ್ಯಕ್ತಪಡಿಸಿ, ಈ ಮಾತನ್ನು ಕಡತದಿಂದ ತಗೆಯಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಆ ಬಳಿಕ ಹೊರಟ್ಟಿ ಕ್ರಮದ ಭರವಸೆ ನೀಡಿದ್ದಾರೆ.