• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೈಸೂರು ದಸರಾ ಇವತ್ತಿನ ಜಟ್ಟಿ ಕಾಳಗ ವಿಶೇಷ ಏನು..? ಯಾರು ಭಾಗಿಯಾಗ್ತಾರೆ..?

ಕೃಷ್ಣ ಮಣಿ by ಕೃಷ್ಣ ಮಣಿ
October 12, 2024
in Top Story, ಕರ್ನಾಟಕ, ದೇಶ, ವಿಶೇಷ
0
ಮೈಸೂರು ದಸರಾ ಇವತ್ತಿನ ಜಟ್ಟಿ ಕಾಳಗ ವಿಶೇಷ ಏನು..? ಯಾರು ಭಾಗಿಯಾಗ್ತಾರೆ..?
Share on WhatsAppShare on FacebookShare on Telegram

ಮೈಸೂರಿನಲ್ಲಿ ಜಂಬೂಸವಾರಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಚಾಮುಂಡೇಶ್ವರಿ ಬೆಟ್ಟದಿಂದ ಅರಮನೆಗೆ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗ್ತಿದೆ. ಇತ್ತ ಅರಮನೆ ಅಂಗಳದಲ್ಲಿ ಐತಿಹಾಸಿಕ ರಣರೋಚಕ ವಜ್ರಮುಷ್ಟಿ ಕಾಳಗ ನಡೆಯುತ್ತಿದೆ. ಅಂಬಾವಿಲಾಸ ಅರಮನೆಯ ಕರಿಕಲ್ಲು ನಾಲ್ವರು ಜಗ ಜಟ್ಟಿಗಳು ಕುಸ್ತಿ ಮಾಡುತ್ತಿದ್ದಾರೆ. ಮೊದಲು ಅರಮನೆಯ ಶ್ವೇತವರಾಹ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಕೆ ನಂತರ ಜಟ್ಟಿಗಳಿಗೆ ಕೆಂಪುಮಣ್ಣು, ಮಟ್ಟಿ ಮಣ್ಣು, ಅರಿಶಿನ-ಕುಂಕುಮ, ಕಣ್ಣು ಕಪ್ಪು ಬಳಿದುಕೊಂದು ಕಾಳಗ ನಡೆಸಿದ್ದಾರೆ.

ADVERTISEMENT

ಐತಿಹಾಸಿಕ ವಜ್ರಮುಷ್ಠಿ ಕಾಳಗದಲ್ಲಿ ಜಟ್ಟಿ ಜನಾಂಗದ ನಾಲ್ವರು ಪೈಲ್ವಾನರು ಕಾದಟ ನಡೆಸುತ್ತಿದ್ದಾರೆ. ಬೆಂಗಳೂರು, ಚನ್ನಪಟ್ಟಣ, ಮೈಸೂರು ಮತ್ತು ಚಾಮರಾಜನಗರದ ನಾಲ್ವರು ಜಟ್ಟಿಗಳ ಈ ಬಾರಿ ಭಾಗಿಯಾಗಿರುವ ಜಟ್ಟಿಗಳು. ಮೈಸೂರಿನ ಬಲರಾಮ್ ಜಟ್ಟಿ, ಚಾಮರಾಜನಗರದ ಶ್ರೀನಿವಾಸ್ ಜಟ್ಟಿ, ಬೆಂಗಳೂರಿನ ನಾರಾಯಣ್‌ ಜಟ್ಟಿ ಹಾಗೂ ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಭಾಗಿಯಾಗಿದ್ದು, ಚಾಮರಾಜನಗರದ ಶ್ರೀನಿವಾಸ್‌ ಜಟ್ಟಿ ಹಾಗೂ ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ನಡುವೆ ಕಾದಟ ನಡೆದಿದೆ. ಮೈಸೂರಿನ ಬಲರಾಮ್ ಜಟ್ಟಿ ಹಾಗೂ ಬೆಂಗಳೂರಿನ ನಾರಾಯಣ್‌ ಜಟ್ಟಿ ನಡುವೆ 2ನೇ ಸೆಣಸಾಟ ನಡೆದಿದೆ. ಉಸ್ತಾದ್​​ಗಳ ಉಪಸ್ಥಿತಿಯಲ್ಲಿ ವಜ್ರಮುಷ್ಟಿ ಆಯುಧ ಹಿಡಿದ ಇಬ್ಬರೂ ಜಟ್ಟಿಗಳ ಕಾದಾಟ ನಡೆದಿದೆ.

ಆನೆ ದಂತದಿಂದ ಮಾಡಿದ ವಜ್ರಮುಷ್ಟಿ ಆಯುಧವನ್ನು ಕೈಗೆ ಧರಿಸಿ ಕಾಳಗ ನಡೆಸಿದ್ದಾರೆ. ಹಣೆಯಲ್ಲಿ ರಕ್ತ ಚಿಮ್ಮುವವರೆಗೆ ಜಟ್ಟಿಗಳು ಕುಸ್ತಿ ಮಾಡಿದ್ದು, ರಕ್ತ ಚಿಮ್ಮಿದ ಬಳಿಕ ಕಾಳಗ ಸಮಾಪ್ತಿ ಆಗಿದೆ. ಆ ಬಳಿಕ ದೇವರಿಗೆ ಪೂಜೆ ಸಲ್ಲಿಸಿದ್ದು, ಇನ್ಮುಂದೆ ಜಂಬೂಸವಾರಿ ಆರಂಭಿಸುವ ಕಾರ್ಯಗಳು ಶುರು ಆಗಿವೆ. ಈ ವರ್ಷ ಇಂತಹ ಜಟ್ಟಿಗಳನ್ನು ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸಲಾಗುತ್ತದೆ. ದಸರಾ ಆರಂಭಕ್ಕೆ ಎರಡು ತಿಂಗಳು ಇರುವಾಗ ಆಯ್ಕೆ ಆದವರಿಗೆ ತರಬೇತಿ ನೀಡಲಾಗುತ್ತದೆ. ಈ ಬಾರಿ ಮೂವರು ಅನುಭವಿಗಳಾಗಿದ್ದು, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗಿ ಆಗಿದ್ದಾರೆ.

ಬೆಂಗಳೂರಿನ ನಾರಾಯಣ ಜಟ್ಟಿ 9ನೇ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗಿಯಾದ್ರೆ, ಮೈಸೂರಿನ ಬಲರಾಮ್ ಜಟ್ಟಿ 4ನೇ ಬಾರಿಗೆ ಹಾಗೂ ಚಾಮರಾಜನಗರದ ಶ್ರೀನಿವಾಸ್‌ ಜಟ್ಟಿ 3ನೇ ಬಾರಿಗೆ ಭಾಗಿಯಾಗಿದ್ದಾರೆ. ರಾಜಮಾತೆ ಪ್ರಮೋದ ದೇವಿ ಹಾಗು ಮೊಮ್ಮೊಗ ಆದ್ಯವೀರ್​​ ಜೊತೆಗೆ ಅರಮನೆ ಮೇಲೆ ನಿಂತು ಜಟ್ಟಿಕಾಳಗ ವೀಕ್ಷಿಸಿದ್ದಾರೆ. ಆ ಬಳಿಕ ಬನ್ನಿ ಪೂಜೆ ನೆರವೇರಿಸಿದ್ದಾರೆ ರಾಜವಂಶಸ್ಥ ಯಧುವೀರ್​. ಇದೀಗ ಜಂಬೂಸವಾರಿ ಸಿದ್ಧತೆಗಳು ಆರಂಭವಾಗಿದ್ದು, ಅಂಬಾರಿ ಕಟ್ಟುವ ಕೆಲಸ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ನಂದಿ ಧ್ವಜ ಪೂಜೆಗೆ ಸಕಲ ತಯಾರಿಗಳು ನಡೆಯುತ್ತಿವೆ. ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ರಾಜಕಳೆ ಬಂದಿದ್ದು, ಜಂಬೂಸವಾರಿ ನೋಡುಗರ ಕಣ್ಮನ ಸೆಳೆಯಲಿದೆ.

Tags: dasaradasara 2024dasara elephantsmysore dasaramysore dasara 2024mysore dasara 2024 livemysore dasara elephant 2024mysore dasara lighting 2024mysore dasara lightingsmysore dasara night lightingsmysore mahisha dasara 2024MysuruMysuru Dasaramysuru dasara 2024mysuru dasara festivalsmysuru dasara lightings 2024mysuru dasara live 2024mysuru dasara songmysuru palacemysuru yuva dasara 2024
Previous Post

ಬೆಂಗಳೂರಿನ 50 ಲಕ್ಷ ಜನರಿಗೆ ಅನುಕೂಲ:ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಹಬ್ಬದ ದಿನವೇ ಘೋರ ದುರಂತ:ಕಾಲುವೆಗೆ ಕಾರ್ ಬಿದ್ದು 7 ಜನ ಸಾವು

Related Posts

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?
ಕರ್ನಾಟಕ

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

by ಪ್ರತಿಧ್ವನಿ
March 4, 2026
0

ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (...

Read moreDetails
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
Next Post

ಹಬ್ಬದ ದಿನವೇ ಘೋರ ದುರಂತ:ಕಾಲುವೆಗೆ ಕಾರ್ ಬಿದ್ದು 7 ಜನ ಸಾವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada