• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೇರಳದಲ್ಲಿ ಪತ್ತೆಯಾಯಿತು ‘ನೋರೋ ವೈರಸ್’; ಇದು ಎಷ್ಟು ಅಪಾಯಕಾರಿ? ಇಲ್ಲಿದೆ ಮಾಹಿತಿ

Shivakumar A by Shivakumar A
November 13, 2021
in ದೇಶ
0
ಕೇರಳದಲ್ಲಿ ಪತ್ತೆಯಾಯಿತು ‘ನೋರೋ ವೈರಸ್’; ಇದು ಎಷ್ಟು ಅಪಾಯಕಾರಿ? ಇಲ್ಲಿದೆ ಮಾಹಿತಿ
Share on WhatsAppShare on FacebookShare on Telegram

ನಿಫಾ, ಝೀಕಾ, ಕರೋನಾ ಸೋಂಕಿನ ಬೆನ್ನಿಗೆ ದೇವರ ನಾಡು ಕೇರಳದಲ್ಲಿ ಹೊಸ ಮಾದರಿಯ ವೈರಸ್ ಕಂಡುಬಂದಿದೆ. ಇದನ್ನು ‘ನೋರೋ ವೈರಸ್’(NoroVirus) ಎಂದು ಗುರುತಿಸಲಾಗಿದ್ದು, ವಯನಾಡಿನ 13 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ. 

ADVERTISEMENT

ಸೋಂಕು ದೃಢಪಟ್ಟ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್’ನಲ್ಲಿ ಉಳಿದುಕೊಳ್ಳದೆ, ಪ್ರತ್ಯೇಕವಾಗಿ ವಾಸವಾಗಿದ್ದರು. ರೋಗ ಲ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಮಾದರಿಯನ್ನು ಸಂಗ್ರಹಿಸಿ ಅದನ್ನು National Institute of Virology, Alappuzhaಕ್ಕೆ  ಕಳುಹಿಸಿಕೊಡಲಾಗಿತ್ತು

 ಮಾದರಿಗಳನ್ನು ಪರೀಕ್ಷಿಸಿ ನೋಡಿದಾಗ ವಿದ್ಯಾರ್ಥಿಗಳಿಗೆ ನೋರೋ ವೈರಸ್ ತಗುಲಿರುವುದು ದೃಢಪಟ್ಟಿದೆ. 

ಒಂದೇ ಬಾರಿಗೆ 13 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ್ದರಿಂದ, ಕೇರಳ ಸರ್ಕಾರದ ಆರೋಗ್ಯ ಇಲಾಖೆ ಕೂಡಲೇ ಜಾಗೃತರಾಗಿ ಸುರಕ್ಷತಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಸೋಂಕಿಗೆ ಒಳಗಾದ ರೋಗಿಗಳು ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯಬೇಕು. ನೀರು ಅಥವಾ ನೀರಿನ ಅಂಶವುಳ್ಳ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಕುದಿಸಿದ ನೀರನ್ನೇ ಕುಡಿಯಬೇಕು, ಎಂದು ಹೇಳಿದೆ. 

“ಕೈಗಳನ್ನು ಆಗಾಗ್ಗೆ ಸ್ವಚ್ಛಾಗಿ ತೊಳೆದುಕೊಳ್ಳಬೇಕು. ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸೋಪು ಬಳಸಿ ಕೈ ತೊಳೆಯಬೇಕು. ವಿಶೇಷವಾಗಿ ಪ್ರಾಣಿಗಳೊಂದಿಗೆ ಹೆಚ್ಚಿನ ಹೊತ್ತು ಕಳೆಯುವವರು ಹೆಚ್ಚು ಜಾಗೃತೆ ವಹಿಸಿಕೊಳ್ಳಬೇಕು,” ಎಂದು ಸರ್ಕಾರ ಹೇಳಿದೆ. 

“ಸೋಂಕನ್ನು ಸ್ಥಳೀಯವಾಗಿ ತಡೆಗಟ್ಟುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ. ಸದ್ಯಕ್ಕೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಜಾಗೂರಕರಾಗಿರುವುದು ಒಳಿತು. ಸುರಕ್ಷತಾ ನಿಯಮಗಳನ್ನು ಪಾಲಿಸಿದಲ್ಲಿ ಹಾಗೂ ಸರಿಯಾದ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಶೀಘ್ರ ಗುಣಮುಖರಾಗಬಹುದು. ಹಾಗಾಗಿ ಎಲ್ಲರೂ ಈ ರೋಗದ ಬಗ್ಗೆ ಅರಿತು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು,” ಎಂದು ವೀಣಾ ಜಾರ್ಜ್ ಹೇಳಿದ್ದಾರೆ. 

ಏನಿದು ನೋರೋ ವೈರಸ್?

ನೋರೋ ವೈರಸ್ ಸೋಂಕಿತರು ಒಂದು ಬಾರಿಗೆ ಕೋಟ್ಯಾಂತರ ರೋಗಾಣುಗಳನ್ನು ಹರಡಬಲ್ಲರು. ಇದೊಂದು ಸುಲಭದಲ್ಲಿ ಹರಡುವ ಸೋಂಕು. ಸೋಂಕಿನ ಕೆಲವೇ ಕೆಲವು ಕಣಗಳು ಓರ್ವ ಆರೋಗ್ಯವಂತ ವ್ಯಕ್ತಿಯನ್ನು ರೋಗಿಯನ್ನಾಗಿ ಪರಿವರ್ತಿಸಬಲ್ಲವು. ಈ ಸೋಂಕಿನಲ್ಲಿ ಹಲವು ವಿಧಗಳಿವೆ. ಒಂದು ವಿಧದ ಸೋಂಕು ಇನ್ನೊಂದು ವಿಧದ ಸೋಂಕಿನಿಂದ ಯಾರನ್ನೂ ರಕ್ಷಿಸದು. ಕೆಲವು ವಿಧಗಳ ವಿರುದ್ದ ದೇಹವು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು ಆದರೆ, ಎಲ್ಲಾ ವಿಧಗಳ ವಿರುದ್ದ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಕಷ್ಟ. 

ಒಂದು ಬಾರಿ ಸೋಂಕಿಗೆ ಒಳಪಟ್ಟವರು ಮತ್ತೆ ಸೋಂಕಿಗೆ ತುತ್ತಾಗುವುದಿಲ್ಲ ಎಂಬ ಭರವಸೆಯಿಲ್ಲ. ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ಬಾರಿಯಾದರೂ ನೋರೋ ವೈರಸ್’ಗೆ ಒಳಗಾಗಬಹುದು. ಯಾವುದೇ ವಯೋಮಾನದ ವ್ಯಕ್ತಿಗಳಿಗೆ ಸೋಂಕು ತಗುಲಬಹದು. ಇದು ಝೀಕಾ, ನಿಫಾ ಅಥವಾ ಕರೋನಾ ವೈರಸ್ ನಷ್ಟು ಅಪಾಯಕಾರಿಯಲ್ಲ. ಸಾಮಾನ್ಯವಾಗಿ ಕಾಣಿಸುವ ವಾಂತಿ ಬೇಧಿ ಜ್ವರದಂತೆ ಇದೂ ಇರಬಲ್ಲದು. 

ಸೋಂಕಿನ ಅತಿ ಸಾಮಾನ್ಯ ರೋಗ ಲಕ್ಷಣಗಳೆಂದರೆ, ವಾಂತಿ ಬೇಧಿ, ವಾಕರಿಕೆ ಬರುವುದು ಮತ್ತು ತೀವ್ರವಾದ ಹೊಟ್ಟೆ ನೋವು. ಇನ್ನು ಕೆಲವರಲ್ಲಿ ಜ್ವರ, ತಲೆ ನೋವು ಮತ್ತು ಮೈಕೈ ನೋವು ಕೂಡಾ ಕಂಡು ಬರಬಹುದು. 

ವ್ಯಕ್ತಿಯ ದೇಹದೊಳಗೆ ವೈರಸ್ ಪ್ರವೇಶಿಸಿದ 12 ರಿಂದ 48 ತಾಸುಗಳ ಬಳಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೈರಸ್ ಇತರ ವೈರಸ್’ಗಳಂತೆ ತೀರಾ ಅಪಾಯಕಾರಿ ಅಲ್ಲ. ಶೀಘ್ರದಲ್ಲಿ ಚಿಕಿತ್ಸೆ ನೀಡಿದರೆ ಕೇವಲ ಮೂರು ದಿನಗಳ ಒಳಗಾಗಿ ರೋಗಿಯು ಗುಣಮುಖರಾಗಬಹುದು. ಆದರೆ, ರೋಗವಿರುವ ಸಂದರ್ಭದಲ್ಲಿ ಅತೀ ಹೆಚ್ಚು ನೀರು ಅಥವಾ ನೀರಿನ ಪದಾರ್ಥಗಳ ಸೇವನೆ ಅತ್ಯಗತ್ಯ. 

ತೀವ್ರವಾದ ವಾಂತಿ ಬೇಧಿಯಿಂದಾಗಿ, ಮೂತ್ರವಿಸರ್ಜನೆ ಕಡಿಮೆಯಾಗುತ್ತದೆ, ಬಾಯಿ ಮತ್ತು ಗಂಟಲು ಒಣಗುತ್ತದೆ. ಕುಳಿತಲ್ಲಿಂದ ಮೇಲೇಳುವ ಸಂದರ್ಭದಲ್ಲಿ ತಲೆ ತಿರುಗಿದಂತಾಗುತ್ತದೆ. ಮಕ್ಕಳು ಅಳುವಾಗ ಸ್ವಲ್ಪ ಮಾತ್ರ ಕಣ್ಣೀರು ಅಥವಾ ಕಣ್ಣೀರು ಬರದೆಯೇ ಇರುವ ಸಾಧ್ಯತೆಗಳಿವೆ. 

ಹರಡುವ ವಿಧಾನಗಳು: 

ಸೋಂಕಿಗೆ ಒಳಪಟ್ಟ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕೈಗಳನ್ನು ಸ್ವಚ್ಛಗೊಳದೆ ಕುಡಿಯುವ ನೀರಿನ ಮೂಲವನ್ನು ಬರಿಗೈಯಲ್ಲಿ ಮುಟ್ಟಿದರೆ, ನೀರಿನಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ. ವಾಂತಿಯ ಕಣಗಳು ನೀರಿನಲ್ಲಿ ಸೇರಿದರೂ, ಈ ರೀತಿಯಾಗಲು ಸಾಧ್ಯವಿದೆ. ಇದೇ ರೀತಿ ಆಹಾರದಲ್ಲಿಯೂ ರೋಗಾಣುಗಳು ಸೇರಿಕೊಳ್ಳುವ ಸಾಧ್ಯತೆಯಿದೆ. 

ವಾಂತಿ ಮಾಡುವ ಸಂದರ್ಭದಲ್ಲಿ ಗಾಳಿಯಲ್ಲಿ ಸೇರುವ ಸೂಕ್ಷ್ಮ ಕಣಗಳು ಕೂಡಾ ಸಾವಿರಾರು ವೈರಸ್’ಗಳನ್ನು ಹೊಂದಿರುತ್ತವೆ. ಇವು ಆಹಾರದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ. 

ಇನ್ನು, ನೋರೋ ವೈರಸ್ ಕಣಗಳು ಸೇರಿಕೊಂಡ ನೀರಿನಲ್ಲಿ ಬೆಳೆಸಿದ ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದಲೂ ರೋಗ ಹರಡುವ ಸಾಧ್ಯತೆಯಿದೆ. ಇನ್ನು ಸೋಂಕಿನ ಕಣಗಳು ಅತಿ ಸೂಕ್ಷ್ಮವಾಗಿದ್ದು ಬರಿಗಣ್ಣಿಗೆ ಕಾಣಿಸುವುದಿಲ್ಲ. ಇಂತಹ ಕಣಗಳು ಸೇರಿಕೊಂಡಿರುವ ಸ್ಥಳಗಳನ್ನು ಬರಿಗೈಯಲ್ಲಿ ಮುಟ್ಟಿ ನಂತರ ಕೈತೊಳೆಯದೆ ಏನಾದರೂ ತಿಂದರೆ, ಅಥವಾ ಬಾಯಿಯನ್ನು ಮುಟ್ಟಿದರೂ ಈ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. 

ಸೋಂಕನ್ನು ತಡೆಗಟ್ಟುವುದು ಹೇಗೆ? 

ಕರೋನಾ ಸೋಂಕು ದೇಶದಲ್ಲಿ ಆರಂಭವಾದಾಗ ಕೈಗಳ ಸ್ವಚ್ಛತೆ ಕುರಿತು ಜನರು ಜಾಗೃತಿ ಹೊಂದಲು ಆರಂಭಿಸಿದರು. ಇದೇ ಜಾಗೃತಿ ಇಲ್ಲಿಯೂ ಬೇಕಾಗಿದೆ. ಪ್ರಮುಖವಾಗಿ ಶೌಚಾಲಯ ಬಳಸಿದ ನಂತರ ಅಥವಾ ಮಕ್ಕಳ ಡೈಪರ್ ಬದಲಾಯಿಸಿದ ನಂತರ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳಬೇಕು. ಯಾವುದೇ ಆಹಾರವನ್ನು ತಿನ್ನುವ, ತಯಾರಿಸುವ ಅಥವಾ ಬಡಿಸುವ ಮುನ್ನ ಕೈಗಳನ್ನು ಸ್ವಚ್ಛಗೊಳಿಸಬೇಕು. 

ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಅಥವಾ ಇತರರಿಗೆ ನೀಡುವ ಮುನ್ನ ಕೈಗಳನ್ನು ಸ್ವಚ್ಛಗೊಳಿಸಬೇಕು. ಸ್ಯಾನಿಟೈಸರ್ ಕೂಡಾ ಬಳಸಬಹುದಾಗಿದೆಯಾದರೂ, ಇದು ಸೋಪಿಗೆ ಸಮರ್ಪಕ ಪರ್ಯಾಯ ವಿಧಾನವಲ್ಲ. ಸ್ಯಾನಿಟೈಸರ್’ಗಳು ನಿಮ್ಮ ಕೈಯನ್ನು ಸೋಪಿನಷ್ಟು ಸ್ವಚ್ಛಗೊಳಿಸುವುದಿಲ್ಲ.

ಆಹಾರ ತಯಾರಿಸುವ ಮುನ್ನ ಅಥವಾ ಹಣ್ಣುಗಳನ್ನು ತಿನ್ನುವ ಮುನ್ನ, ತರಕಾರಿ ಮತ್ತು ಹಣ್ಣುಗಳನ್ನು ಸ್ವಚ್ಛವಾಗಿ ತೊಳೆಯಿರಿ. ಪ್ರಮುಖವಾಗಿ ಏಡಿಯಂತಹ ಸೀಫುಡ್’ಗಳನ್ನು ಸರಿಯಾಗಿ ಬೇಯಿಸಿದ ಬಳಕವೇ ಸ್ವೀಕರಿಸಿ. ಸಾಮಾನ್ಯವಾಗಿ ನೋರೋ ವೈರಸ್ ಕಣಗಳು 62 ಡಿಗ್ರಿಯಷ್ಟು ಉಷ್ಣತೆಯನ್ನು ತಡೆದುಕೊಳ್ಳಬಲ್ಲವು. ರೋಗ ಲಕ್ಷಣ ಹೊಂದಿರುವ ಮಕ್ಕಳು ಅಥವಾ ವಯಸ್ಕರನ್ನು ಆಹಾರ ಮೂಲಗಳಿಂದ ದೂರವಿರಿಸಿದೆ. ಆಹಾರ ತಯಾರಿಸುವವರಲ್ಲಿ ರೋಗ ಲಕ್ಷಣ ಕಂಡುಬಂದರೆ, ಇತರರಿಗೆ ಆಹಾರ ತಯಾರಿಸಬೇಡಿ. 

ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ಸ್ಯಾನಿಟೈಸೇಷನ್ ಮಾಡುವುದರಿಂದ ಸೋಂಕು ತಡೆಗಟ್ಟಬಹುದು. ಅಡುಗೆ ಮನೆಯ ಎಲ್ಲಾ ವಸ್ತುಗಳನ್ನು ನಿಗದಿತವಾಗಿ ಸ್ವಚ್ಛಗೊಳಿಸಿ. ಬಟ್ಟೆಗಳ ಸ್ವಚ್ಛತೆಯ ಕುರಿತಾಗಿಯೂ ಗಮನವಿರಲಿ. 

ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಆದರೂ, ವೈದ್ಯರು ನೀಡುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡರೆ, ರೋಗ ಲಕ್ಷಣಗಳಿಂದ ಪಾರಾಗಬಹುದು. ಮುಖ್ಯವಾಗಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ವೀಕರಿಸುವುದು ಅಗತ್ಯ. 

Tags: Keralamedicalstudentsnoroviruswayanad
Previous Post

ಸಿಬಿಐ, ಈಡಿ ಭ್ರಷ್ಟಚಾರದ ವಿರುದ್ದ ಹೋರಾಡುವುದಿಲ್ಲವೇ? : ಪವನ್ ಖೇರಾ

Next Post

ಮೈಸೂರು ನಂದಿ ಬೆಟ್ಟ ; ರಸ್ತೆ ಕುಸಿದಿರುವ ಹಿನ್ನೆಲೆ ಆದಷ್ಟು ಬೇಗ ರಿಪೇರಿ ಕೆಲಸ ನಡೆಯುತ್ತದೆ : C.C Patil

Related Posts

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?
Top Story

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

by ಪ್ರತಿಧ್ವನಿ
April 14, 2026
0

ಬೆಂಗಳೂರು : ರಾಜ್ಯ ರಾಜಕೀಯ ವಲಯದಲ್ಲಿ ದಿಢೀರ್ ಬೆಳವಣಿಗೆಗಳು ಜೋರಾಗಿವೆ. ಎರಡು ಉಪಚುನಾವಣೆಗಳ ವಿಚಾರದಲ್ಲಿ "ಕೈ" ನಲ್ಲಿ ಆಂತರಿಕ ಕೊತ ಕೊತ ಕುದಿಯುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ...

Read moreDetails
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

April 13, 2026
“ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ”

“ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ”

April 13, 2026
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
Next Post
ಮೈಸೂರು ನಂದಿ ಬೆಟ್ಟ ; ರಸ್ತೆ  ಕುಸಿದಿರುವ ಹಿನ್ನೆಲೆ  ಆದಷ್ಟು ಬೇಗ ರಿಪೇರಿ ಕೆಲಸ ನಡೆಯುತ್ತದೆ : C.C Patil

ಮೈಸೂರು ನಂದಿ ಬೆಟ್ಟ ; ರಸ್ತೆ ಕುಸಿದಿರುವ ಹಿನ್ನೆಲೆ ಆದಷ್ಟು ಬೇಗ ರಿಪೇರಿ ಕೆಲಸ ನಡೆಯುತ್ತದೆ : C.C Patil

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada