Tag: medicalstudents

ಬೆಂಗಳೂರಿನ ವೈದ್ಯಕೀಯ ವಿದ್ಯರ್ಥಿನಿಯರು ಅಸ್ವಸ್ಥ..! ಕಾರಣ ಕಾಲರಾ..?

ಬೆಂಗಳೂರಿನ BMCRI ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಂತಿ, ಬೇಧಿಯಿಂದ‌ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಎನ್ನಲಾಗಿದೆ. ಟ್ರಾಮಾ ಕೇರ್ ಸೆಂಟರ್‌ನಲ್ಲಿ ...

Read more

ಕೇರಳದಲ್ಲಿ ಪತ್ತೆಯಾಯಿತು ‘ನೋರೋ ವೈರಸ್’; ಇದು ಎಷ್ಟು ಅಪಾಯಕಾರಿ? ಇಲ್ಲಿದೆ ಮಾಹಿತಿ

ನಿಫಾ, ಝೀಕಾ, ಕರೋನಾ ಸೋಂಕಿನ ಬೆನ್ನಿಗೆ ದೇವರ ನಾಡು ಕೇರಳದಲ್ಲಿ ಹೊಸ ಮಾದರಿಯ ವೈರಸ್ ಕಂಡುಬಂದಿದೆ. ಇದನ್ನು ‘ನೋರೋ ವೈರಸ್’(NoroVirus) ಎಂದು ಗುರುತಿಸಲಾಗಿದ್ದು, ವಯನಾಡಿನ 13 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ.  ಸೋಂಕು ದೃಢಪಟ್ಟ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್’ನಲ್ಲಿ ಉಳಿದುಕೊಳ್ಳದೆ, ಪ್ರತ್ಯೇಕವಾಗಿ ವಾಸವಾಗಿದ್ದರು. ರೋಗ ಲ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಮಾದರಿಯನ್ನು ಸಂಗ್ರಹಿಸಿ ಅದನ್ನು National Institute of Virology, Alappuzhaಕ್ಕೆ  ಕಳುಹಿಸಿಕೊಡಲಾಗಿತ್ತು  ಮಾದರಿಗಳನ್ನು ಪರೀಕ್ಷಿಸಿ ನೋಡಿದಾಗ ವಿದ್ಯಾರ್ಥಿಗಳಿಗೆ ನೋರೋ ವೈರಸ್ ತಗುಲಿರುವುದು ದೃಢಪಟ್ಟಿದೆ.  ಒಂದೇ ಬಾರಿಗೆ 13 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ್ದರಿಂದ, ಕೇರಳ ಸರ್ಕಾರದ ಆರೋಗ್ಯ ಇಲಾಖೆ ಕೂಡಲೇ ಜಾಗೃತರಾಗಿ ಸುರಕ್ಷತಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಸೋಂಕಿಗೆ ಒಳಗಾದ ರೋಗಿಗಳು ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯಬೇಕು. ನೀರು ಅಥವಾ ನೀರಿನ ಅಂಶವುಳ್ಳ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಕುದಿಸಿದ ನೀರನ್ನೇ ಕುಡಿಯಬೇಕು, ಎಂದು ಹೇಳಿದೆ.  “ಕೈಗಳನ್ನು ಆಗಾಗ್ಗೆ ಸ್ವಚ್ಛಾಗಿ ತೊಳೆದುಕೊಳ್ಳಬೇಕು. ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸೋಪು ಬಳಸಿ ಕೈ ತೊಳೆಯಬೇಕು. ವಿಶೇಷವಾಗಿ ಪ್ರಾಣಿಗಳೊಂದಿಗೆ ಹೆಚ್ಚಿನ ಹೊತ್ತು ಕಳೆಯುವವರು ಹೆಚ್ಚು ಜಾಗೃತೆ ವಹಿಸಿಕೊಳ್ಳಬೇಕು,” ಎಂದು ಸರ್ಕಾರ ಹೇಳಿದೆ.  “ಸೋಂಕನ್ನು ಸ್ಥಳೀಯವಾಗಿ ತಡೆಗಟ್ಟುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ. ಸದ್ಯಕ್ಕೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಜಾಗೂರಕರಾಗಿರುವುದು ಒಳಿತು. ಸುರಕ್ಷತಾ ನಿಯಮಗಳನ್ನು ಪಾಲಿಸಿದಲ್ಲಿ ಹಾಗೂ ಸರಿಯಾದ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಶೀಘ್ರ ಗುಣಮುಖರಾಗಬಹುದು. ಹಾಗಾಗಿ ಎಲ್ಲರೂ ಈ ರೋಗದ ಬಗ್ಗೆ ಅರಿತು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು,” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.  ಏನಿದು ನೋರೋ ವೈರಸ್? ನೋರೋ ವೈರಸ್ ಸೋಂಕಿತರು ಒಂದು ಬಾರಿಗೆ ಕೋಟ್ಯಾಂತರ ರೋಗಾಣುಗಳನ್ನು ಹರಡಬಲ್ಲರು. ಇದೊಂದು ಸುಲಭದಲ್ಲಿ ಹರಡುವ ಸೋಂಕು. ಸೋಂಕಿನ ಕೆಲವೇ ಕೆಲವು ಕಣಗಳು ಓರ್ವ ಆರೋಗ್ಯವಂತ ವ್ಯಕ್ತಿಯನ್ನು ರೋಗಿಯನ್ನಾಗಿ ಪರಿವರ್ತಿಸಬಲ್ಲವು. ಈ ಸೋಂಕಿನಲ್ಲಿ ಹಲವು ವಿಧಗಳಿವೆ. ಒಂದು ವಿಧದ ಸೋಂಕು ಇನ್ನೊಂದು ವಿಧದ ಸೋಂಕಿನಿಂದ ಯಾರನ್ನೂ ರಕ್ಷಿಸದು. ಕೆಲವು ವಿಧಗಳ ವಿರುದ್ದ ದೇಹವು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು ಆದರೆ, ಎಲ್ಲಾ ವಿಧಗಳ ವಿರುದ್ದ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಕಷ್ಟ.  ಒಂದು ಬಾರಿ ಸೋಂಕಿಗೆ ಒಳಪಟ್ಟವರು ಮತ್ತೆ ಸೋಂಕಿಗೆ ತುತ್ತಾಗುವುದಿಲ್ಲ ಎಂಬ ಭರವಸೆಯಿಲ್ಲ. ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ಬಾರಿಯಾದರೂ ನೋರೋ ವೈರಸ್’ಗೆ ಒಳಗಾಗಬಹುದು. ಯಾವುದೇ ವಯೋಮಾನದ ವ್ಯಕ್ತಿಗಳಿಗೆ ಸೋಂಕು ತಗುಲಬಹದು. ಇದು ಝೀಕಾ, ನಿಫಾ ಅಥವಾ ಕರೋನಾ ವೈರಸ್ ನಷ್ಟು ಅಪಾಯಕಾರಿಯಲ್ಲ. ಸಾಮಾನ್ಯವಾಗಿ ಕಾಣಿಸುವ ವಾಂತಿ ಬೇಧಿ ಜ್ವರದಂತೆ ಇದೂ ಇರಬಲ್ಲದು.  ಸೋಂಕಿನ ಅತಿ ಸಾಮಾನ್ಯ ರೋಗ ಲಕ್ಷಣಗಳೆಂದರೆ, ವಾಂತಿ ಬೇಧಿ, ವಾಕರಿಕೆ ಬರುವುದು ಮತ್ತು ತೀವ್ರವಾದ ಹೊಟ್ಟೆ ನೋವು. ಇನ್ನು ಕೆಲವರಲ್ಲಿ ಜ್ವರ, ತಲೆ ನೋವು ಮತ್ತು ಮೈಕೈ ನೋವು ಕೂಡಾ ಕಂಡು ಬರಬಹುದು.  ವ್ಯಕ್ತಿಯ ದೇಹದೊಳಗೆ ವೈರಸ್ ಪ್ರವೇಶಿಸಿದ 12 ರಿಂದ 48 ತಾಸುಗಳ ಬಳಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೈರಸ್ ಇತರ ವೈರಸ್’ಗಳಂತೆ ತೀರಾ ಅಪಾಯಕಾರಿ ಅಲ್ಲ. ಶೀಘ್ರದಲ್ಲಿ ಚಿಕಿತ್ಸೆ ನೀಡಿದರೆ ಕೇವಲ ಮೂರು ದಿನಗಳ ಒಳಗಾಗಿ ರೋಗಿಯು ಗುಣಮುಖರಾಗಬಹುದು. ಆದರೆ, ರೋಗವಿರುವ ಸಂದರ್ಭದಲ್ಲಿ ಅತೀ ಹೆಚ್ಚು ನೀರು ಅಥವಾ ನೀರಿನ ಪದಾರ್ಥಗಳ ಸೇವನೆ ಅತ್ಯಗತ್ಯ.  ತೀವ್ರವಾದ ವಾಂತಿ ಬೇಧಿಯಿಂದಾಗಿ, ಮೂತ್ರವಿಸರ್ಜನೆ ಕಡಿಮೆಯಾಗುತ್ತದೆ, ಬಾಯಿ ಮತ್ತು ಗಂಟಲು ಒಣಗುತ್ತದೆ. ಕುಳಿತಲ್ಲಿಂದ ಮೇಲೇಳುವ ಸಂದರ್ಭದಲ್ಲಿ ತಲೆ ತಿರುಗಿದಂತಾಗುತ್ತದೆ. ಮಕ್ಕಳು ಅಳುವಾಗ ಸ್ವಲ್ಪ ಮಾತ್ರ ಕಣ್ಣೀರು ಅಥವಾ ಕಣ್ಣೀರು ಬರದೆಯೇ ಇರುವ ಸಾಧ್ಯತೆಗಳಿವೆ.  ಹರಡುವ ವಿಧಾನಗಳು:  ಸೋಂಕಿಗೆ ಒಳಪಟ್ಟ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕೈಗಳನ್ನು ಸ್ವಚ್ಛಗೊಳದೆ ಕುಡಿಯುವ ನೀರಿನ ಮೂಲವನ್ನು ಬರಿಗೈಯಲ್ಲಿ ಮುಟ್ಟಿದರೆ, ನೀರಿನಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ. ವಾಂತಿಯ ಕಣಗಳು ನೀರಿನಲ್ಲಿ ಸೇರಿದರೂ, ಈ ರೀತಿಯಾಗಲು ಸಾಧ್ಯವಿದೆ. ಇದೇ ರೀತಿ ಆಹಾರದಲ್ಲಿಯೂ ರೋಗಾಣುಗಳು ಸೇರಿಕೊಳ್ಳುವ ಸಾಧ್ಯತೆಯಿದೆ.  ವಾಂತಿ ಮಾಡುವ ಸಂದರ್ಭದಲ್ಲಿ ಗಾಳಿಯಲ್ಲಿ ಸೇರುವ ಸೂಕ್ಷ್ಮ ಕಣಗಳು ಕೂಡಾ ಸಾವಿರಾರು ವೈರಸ್’ಗಳನ್ನು ಹೊಂದಿರುತ್ತವೆ. ಇವು ಆಹಾರದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ.  ...

Read more

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!