ವಯನಾಡಿನಲ್ಲಿ ದೇಶದ ಅತೀ ದೊಡ್ಡ ಗ್ರಾಮೀಣೋತ್ಸವಕ್ಕೆ ಸಜ್ಜು
ವಯನಾಡ್ ;ದೇಶದ ಅತೀ ದೊಡ್ಡ ಗ್ರಾಮೀಣೋತ್ಸವ ಎನ್ನಲಾದ ವಯನಾಡ್ ಲಿಟರೇಚರ್ ಫೆಸ್ಟಿವಲ್ (WLF) 2024 ಡಿಸೆಂಬರ್ 26 ರಿಂದ 29 ರವರೆಗೆ ನಡೆಯಲಿದ್ದು, ವಿವಿಧ ರಂಗಗಳ ಗಣ್ಯರು, ...
Read moreDetailsವಯನಾಡ್ ;ದೇಶದ ಅತೀ ದೊಡ್ಡ ಗ್ರಾಮೀಣೋತ್ಸವ ಎನ್ನಲಾದ ವಯನಾಡ್ ಲಿಟರೇಚರ್ ಫೆಸ್ಟಿವಲ್ (WLF) 2024 ಡಿಸೆಂಬರ್ 26 ರಿಂದ 29 ರವರೆಗೆ ನಡೆಯಲಿದ್ದು, ವಿವಿಧ ರಂಗಗಳ ಗಣ್ಯರು, ...
Read moreDetailshttps://youtu.be/vWX5uVvP9dU
Read moreDetailshttps://youtu.be/JTyGAJ_XGzo?si=8QVGDOAAcCsfX_4_
Read moreDetailsವಯನಾಡು (wayanadu) ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. ಇದುವರೆಗೆ ಭೂಕುಸಿತದಲ್ಲಿ 280ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ವರದಿಯಾಗಿದೆ. ನೂರಾರು ಮಂದಿ ನಾಪತ್ತೆ ಆಗಿದ್ದು, ತೀವ್ರ ...
Read moreDetailsಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ...
Read moreDetailsನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡು ಹಾಗೂ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡರಲ್ಲಿಯೂ ಜಯ ಸಾಧಿಸಿದ್ದರು. ಹೀಗಾಗಿ ಒಂದು ಕ್ಷೇತ್ರ ಈಗ ತ್ಯಜಿಸಬೇಕಾಗಿದ್ದು, ರಾಯ್ ...
Read moreDetailsಸಂಸದ ರಾಹುಲ್ ಗಾಂಧಿ(Rahul Gandhi) ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ರಾಯ್ ಬರೇಲಿ ಸೇರಿದಂತೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಯಾವ ಕ್ಷೇತ್ರ ಉಳಿಸಿಕೊಳ್ಳಲಿದ್ದಾರೆ ...
Read moreDetailsಲೋಕಸಭೆ ಸದಸ್ಯತ್ವ ಮರುಸ್ಥಾಪನೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ (ಆಗಸ್ಟ್ 11) ಸಂಜೆ ತಾವು ಸಂಸತ್ತಿಗೆ ಆಯ್ಕೆಯಾದ ಕೇರಳದ ವಯನಾಡು ಕ್ಷೇತ್ರಕ್ಕೆ ನೀಡಿರುವ ಭೇಟಿ ...
Read moreDetailsನವದೆಹಲಿ: ಏ.೧೦: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ (ಏ.11) ಕೇರಳದ ತಮ್ಮ ಮಾಜಿ ಕ್ಷೇತ್ರವಾದ ವಯನಾಡುಗೆ ಭೇಟಿ ...
Read moreDetailsನಿಫಾ, ಝೀಕಾ, ಕರೋನಾ ಸೋಂಕಿನ ಬೆನ್ನಿಗೆ ದೇವರ ನಾಡು ಕೇರಳದಲ್ಲಿ ಹೊಸ ಮಾದರಿಯ ವೈರಸ್ ಕಂಡುಬಂದಿದೆ. ಇದನ್ನು ‘ನೋರೋ ವೈರಸ್’(NoroVirus) ಎಂದು ಗುರುತಿಸಲಾಗಿದ್ದು, ವಯನಾಡಿನ 13 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ. ಸೋಂಕು ದೃಢಪಟ್ಟ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್’ನಲ್ಲಿ ಉಳಿದುಕೊಳ್ಳದೆ, ಪ್ರತ್ಯೇಕವಾಗಿ ವಾಸವಾಗಿದ್ದರು. ರೋಗ ಲ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಮಾದರಿಯನ್ನು ಸಂಗ್ರಹಿಸಿ ಅದನ್ನು National Institute of Virology, Alappuzhaಕ್ಕೆ ಕಳುಹಿಸಿಕೊಡಲಾಗಿತ್ತು ಮಾದರಿಗಳನ್ನು ಪರೀಕ್ಷಿಸಿ ನೋಡಿದಾಗ ವಿದ್ಯಾರ್ಥಿಗಳಿಗೆ ನೋರೋ ವೈರಸ್ ತಗುಲಿರುವುದು ದೃಢಪಟ್ಟಿದೆ. ಒಂದೇ ಬಾರಿಗೆ 13 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾದ್ದರಿಂದ, ಕೇರಳ ಸರ್ಕಾರದ ಆರೋಗ್ಯ ಇಲಾಖೆ ಕೂಡಲೇ ಜಾಗೃತರಾಗಿ ಸುರಕ್ಷತಾ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಸೋಂಕಿಗೆ ಒಳಗಾದ ರೋಗಿಗಳು ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯಬೇಕು. ನೀರು ಅಥವಾ ನೀರಿನ ಅಂಶವುಳ್ಳ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಕುದಿಸಿದ ನೀರನ್ನೇ ಕುಡಿಯಬೇಕು, ಎಂದು ಹೇಳಿದೆ. “ಕೈಗಳನ್ನು ಆಗಾಗ್ಗೆ ಸ್ವಚ್ಛಾಗಿ ತೊಳೆದುಕೊಳ್ಳಬೇಕು. ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸೋಪು ಬಳಸಿ ಕೈ ತೊಳೆಯಬೇಕು. ವಿಶೇಷವಾಗಿ ಪ್ರಾಣಿಗಳೊಂದಿಗೆ ಹೆಚ್ಚಿನ ಹೊತ್ತು ಕಳೆಯುವವರು ಹೆಚ್ಚು ಜಾಗೃತೆ ವಹಿಸಿಕೊಳ್ಳಬೇಕು,” ಎಂದು ಸರ್ಕಾರ ಹೇಳಿದೆ. “ಸೋಂಕನ್ನು ಸ್ಥಳೀಯವಾಗಿ ತಡೆಗಟ್ಟುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ. ಸದ್ಯಕ್ಕೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಜಾಗೂರಕರಾಗಿರುವುದು ಒಳಿತು. ಸುರಕ್ಷತಾ ನಿಯಮಗಳನ್ನು ಪಾಲಿಸಿದಲ್ಲಿ ಹಾಗೂ ಸರಿಯಾದ ಚಿಕಿತ್ಸೆ ಪಡೆದಲ್ಲಿ ರೋಗದಿಂದ ಶೀಘ್ರ ಗುಣಮುಖರಾಗಬಹುದು. ಹಾಗಾಗಿ ಎಲ್ಲರೂ ಈ ರೋಗದ ಬಗ್ಗೆ ಅರಿತು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು,” ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ಏನಿದು ನೋರೋ ವೈರಸ್? ನೋರೋ ವೈರಸ್ ಸೋಂಕಿತರು ಒಂದು ಬಾರಿಗೆ ಕೋಟ್ಯಾಂತರ ರೋಗಾಣುಗಳನ್ನು ಹರಡಬಲ್ಲರು. ಇದೊಂದು ಸುಲಭದಲ್ಲಿ ಹರಡುವ ಸೋಂಕು. ಸೋಂಕಿನ ಕೆಲವೇ ಕೆಲವು ಕಣಗಳು ಓರ್ವ ಆರೋಗ್ಯವಂತ ವ್ಯಕ್ತಿಯನ್ನು ರೋಗಿಯನ್ನಾಗಿ ಪರಿವರ್ತಿಸಬಲ್ಲವು. ಈ ಸೋಂಕಿನಲ್ಲಿ ಹಲವು ವಿಧಗಳಿವೆ. ಒಂದು ವಿಧದ ಸೋಂಕು ಇನ್ನೊಂದು ವಿಧದ ಸೋಂಕಿನಿಂದ ಯಾರನ್ನೂ ರಕ್ಷಿಸದು. ಕೆಲವು ವಿಧಗಳ ವಿರುದ್ದ ದೇಹವು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು ಆದರೆ, ಎಲ್ಲಾ ವಿಧಗಳ ವಿರುದ್ದ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಕಷ್ಟ. ಒಂದು ಬಾರಿ ಸೋಂಕಿಗೆ ಒಳಪಟ್ಟವರು ಮತ್ತೆ ಸೋಂಕಿಗೆ ತುತ್ತಾಗುವುದಿಲ್ಲ ಎಂಬ ಭರವಸೆಯಿಲ್ಲ. ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ಬಾರಿಯಾದರೂ ನೋರೋ ವೈರಸ್’ಗೆ ಒಳಗಾಗಬಹುದು. ಯಾವುದೇ ವಯೋಮಾನದ ವ್ಯಕ್ತಿಗಳಿಗೆ ಸೋಂಕು ತಗುಲಬಹದು. ಇದು ಝೀಕಾ, ನಿಫಾ ಅಥವಾ ಕರೋನಾ ವೈರಸ್ ನಷ್ಟು ಅಪಾಯಕಾರಿಯಲ್ಲ. ಸಾಮಾನ್ಯವಾಗಿ ಕಾಣಿಸುವ ವಾಂತಿ ಬೇಧಿ ಜ್ವರದಂತೆ ಇದೂ ಇರಬಲ್ಲದು. ಸೋಂಕಿನ ಅತಿ ಸಾಮಾನ್ಯ ರೋಗ ಲಕ್ಷಣಗಳೆಂದರೆ, ವಾಂತಿ ಬೇಧಿ, ವಾಕರಿಕೆ ಬರುವುದು ಮತ್ತು ತೀವ್ರವಾದ ಹೊಟ್ಟೆ ನೋವು. ಇನ್ನು ಕೆಲವರಲ್ಲಿ ಜ್ವರ, ತಲೆ ನೋವು ಮತ್ತು ಮೈಕೈ ನೋವು ಕೂಡಾ ಕಂಡು ಬರಬಹುದು. ವ್ಯಕ್ತಿಯ ದೇಹದೊಳಗೆ ವೈರಸ್ ಪ್ರವೇಶಿಸಿದ 12 ರಿಂದ 48 ತಾಸುಗಳ ಬಳಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೈರಸ್ ಇತರ ವೈರಸ್’ಗಳಂತೆ ತೀರಾ ಅಪಾಯಕಾರಿ ಅಲ್ಲ. ಶೀಘ್ರದಲ್ಲಿ ಚಿಕಿತ್ಸೆ ನೀಡಿದರೆ ಕೇವಲ ಮೂರು ದಿನಗಳ ಒಳಗಾಗಿ ರೋಗಿಯು ಗುಣಮುಖರಾಗಬಹುದು. ಆದರೆ, ರೋಗವಿರುವ ಸಂದರ್ಭದಲ್ಲಿ ಅತೀ ಹೆಚ್ಚು ನೀರು ಅಥವಾ ನೀರಿನ ಪದಾರ್ಥಗಳ ಸೇವನೆ ಅತ್ಯಗತ್ಯ. ತೀವ್ರವಾದ ವಾಂತಿ ಬೇಧಿಯಿಂದಾಗಿ, ಮೂತ್ರವಿಸರ್ಜನೆ ಕಡಿಮೆಯಾಗುತ್ತದೆ, ಬಾಯಿ ಮತ್ತು ಗಂಟಲು ಒಣಗುತ್ತದೆ. ಕುಳಿತಲ್ಲಿಂದ ಮೇಲೇಳುವ ಸಂದರ್ಭದಲ್ಲಿ ತಲೆ ತಿರುಗಿದಂತಾಗುತ್ತದೆ. ಮಕ್ಕಳು ಅಳುವಾಗ ಸ್ವಲ್ಪ ಮಾತ್ರ ಕಣ್ಣೀರು ಅಥವಾ ಕಣ್ಣೀರು ಬರದೆಯೇ ಇರುವ ಸಾಧ್ಯತೆಗಳಿವೆ. ಹರಡುವ ವಿಧಾನಗಳು: ಸೋಂಕಿಗೆ ಒಳಪಟ್ಟ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕೈಗಳನ್ನು ಸ್ವಚ್ಛಗೊಳದೆ ಕುಡಿಯುವ ನೀರಿನ ಮೂಲವನ್ನು ಬರಿಗೈಯಲ್ಲಿ ಮುಟ್ಟಿದರೆ, ನೀರಿನಲ್ಲಿ ರೋಗಾಣುಗಳು ಸೇರಿಕೊಳ್ಳುತ್ತವೆ. ವಾಂತಿಯ ಕಣಗಳು ನೀರಿನಲ್ಲಿ ಸೇರಿದರೂ, ಈ ರೀತಿಯಾಗಲು ಸಾಧ್ಯವಿದೆ. ಇದೇ ರೀತಿ ಆಹಾರದಲ್ಲಿಯೂ ರೋಗಾಣುಗಳು ಸೇರಿಕೊಳ್ಳುವ ಸಾಧ್ಯತೆಯಿದೆ. ವಾಂತಿ ಮಾಡುವ ಸಂದರ್ಭದಲ್ಲಿ ಗಾಳಿಯಲ್ಲಿ ಸೇರುವ ಸೂಕ್ಷ್ಮ ಕಣಗಳು ಕೂಡಾ ಸಾವಿರಾರು ವೈರಸ್’ಗಳನ್ನು ಹೊಂದಿರುತ್ತವೆ. ಇವು ಆಹಾರದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ. ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada