
ಆಪರೇಷನ್ ಸಿಂಧೂರದ (Operation sindhoor) ಬಳಿಕ ಬಾಲ ಮುದುರಿಕೊಂಡಿದ್ದ ಪಾಕಿಸ್ತಾನ (Pakistan) ಈಗ ಮತ್ತೆ ಬಾಲ ಬಿಚ್ಚಲು ಶುರು ಮಾಡಿದೆ.ಈಗ ಭಾರತದ ವಿರುದ್ಧ ಮತ್ತೆ ವಿಷಕಾರಿರುವ ಪಾಕಿಸ್ತಾನ ಸೇನಾ ಮುಖ್ಯಸ್ತ ಆಸಿಮ್ ಮುನೀರ್ (Asim munir), ಕಾಶ್ಮೀರದ ವಿಚಾರವಾಗಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾನೆ.

ಕರಾಚಿಯ ಪಾಕಿಸ್ತಾನ ನೌಕಾ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದನ್ನ ಭಯೋತ್ಪಾನೆ ಎಂದು ಲೇಬಲ್ ಮಾಡಲಾಗುತ್ತಿದೆಯೋ ಅದು ಭಯೋತ್ಪಾದನೆಯಲ್ಲ…ಬದಲಿಗೆ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಕಾನೂನುಬದ್ಧ ಹೋರಾಟ ಎಂದು ಹೇಳಿಕೆ ಕೊಟ್ಟಿದ್ದಾನೆ.
ಪಾಕಿಸ್ತಾನ ಯಾವಾಗಲೂ ಕಾಶ್ಮೀರಿಗಳೊಂದಿಗೆ ಇದೆ. ನಾವು ಅದನ್ನ ಮತ್ತೆ ಮುಂದುವರಿಸುತ್ತದೆ.ಇದೇ ವೇಳೆ ಭವಿಷ್ಯದಲ್ಲಿ ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಆಸಿಮ್ ಮುನೀರ್ ಹೇಳಿದ್ದಾನೆ.