
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿಧಾನಸೌಧದಲ್ಲಿ ಮಾತನಾಡಿ, ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದನ್ನು ಖಂಡಿಸಿದ್ದಾರೆ. ರೈತರಿಗೆ ನೋಟಿಸ್ ಕೊಡೋದನ್ನು ತಕ್ಷಣ ನಿಲ್ಲಿಸಬೇಕು. ಜಮೀರ್ ಅಹಮದ್ ಜಿಲ್ಲಾ ಜಿಲ್ಲಾ ಪ್ರವಾಸ ಮಾಡಿ, ಅಧಿಕಾರಿಗಳಿಗೆ ಧಮಕಿ ಹಾಕಿ ನೋಟಿಸ್ ಕೊಡಬೇಕು ಅಂತ ಮೌಖಿಕ ಸೂಚನೆ ಕೊಟ್ಟಿದ್ರು. ಸಚಿವರು ಸೂಚನೆ ಕೊಟ್ಟ ಬಳಿಕ ಇದೆಲ್ಲ ಶುರುವಾಯ್ತು ಎಂದಿದ್ದಾರೆ. ಇನ್ನು ಜಮೀರ್ ಅಹಮದ್‌ಗೆ ಹೇಳ್ತೀನಿ, ಇಸ್ಲಾ ಧರ್ಮವೇ ಮುಖ್ಯ ಅನ್ನೋರು ಪಾಕಿಸ್ತಾನಕ್ಕೆ ಹೋದ್ರು. ಜಮೀರ್‌ಗೆ ಈಗಲೂ ಷರಿಯಾನೇ ಮುಖ್ಯ ಅಂದ್ರೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದಿದ್ದಾರೆ.
ಮುಸ್ಲಿಮರು ವಕ್ಫ್ ಆಸ್ತಿ ಅಂತಾರಲ್ಲ.. ಯಾರಿಂದ ಬಂತು..? ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಸೌದಿ ಮುಲ್ಲಾಗಳು ಕೊಟ್ರಾ..? ಪ್ರತ್ಯೇಕ ಆಸ್ತಿ ಮುಸ್ಲಿಮರಿಗೆ ಎಲ್ಲಿಂದ ಬಂತು ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ಯಾರಿಂದ ಮುಸ್ಲಿಮರಿಗೆ ಆಸ್ತಿ ಬಳುವಳಿ ಆಗಿ ಬಂದಿದ್ದು..? ಮೈಸೂರಿನ ಹುಣಸೂರಿನ ಗಣೇಶ ದೇಗುಲದ 17 ಏಕರೆ ನಮ್ಮದು ಅಂತಾರೆ. ಚಿಕ್ಕಮಗಳೂರಲ್ಲೂ ಇದೇ ಕಥೆ ಆಗಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡುತ್ತಾ ಇದು ನಮ್ಮದು ಅಂತಿದ್ದಾರೆ. ವಕ್ಫ್ ಬೋರ್ಡ್ ಜಮೀನಿನಲ್ಲಿ ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದಿರಾ? ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ ಚರ್ಚ್‌ಗಳಲ್ಲಿ ಹಿಡಿ ಅನ್ನ ಯಾರಿಗಾದರೂ ಹಾಕಿದ್ದಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಒಂದು ಬಾರಿ ವಕ್ಫ್ ಆಸ್ತಿ ಅಂತಾ ಆದ್ರೆ ಅದು ಅಲ್ಲಾಹುವಿನ ಜಾಗ ಎಂದು ಕಾನೂನು ಹೇಳುತ್ತದೆ. ಷರಿಯತ್ ಕಾನೂನು ಹಾಗೇ ಇದೆ ಎಂದು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸ ಅದಿ ಹೇಳಿದ್ದಾರೆ. ವಿಜಯಪುರದಲ್ಲಿ ಆದಿಲ್ ಶಾಯಿಗಳು ಆಡಳಿತ ನಡೆಸಿದ್ದಾರೆ. ಕಬಳಿಕೆ ಆದ ಜಾಗ ವಾಪಸ್ ತೆಗೆದುಕೊಳ್ಳುವ ಕೆಲಸ ಆಗ್ತಿದೆ ಅಷ್ಟೆ. ವಕ್ಫ್ ಜಿಹಾದ್ ಅನ್ನೋದು ಸರಿಯಲ್ಲ ಎಂದಿದ್ದಾರೆ.
ವಕ್ಫ್ ಆಸ್ತಿ ವಿವಾದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಯಾವುದೇ ರೈತರನ್ನು ಒಕ್ಕಲೆಬ್ಬಿಸಲ್ಲ. ನಿನ್ನೆ ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸಲ್ಲ. ಒಂದೊಮ್ಮೆ ನೋಟಿಸ್ ಕೊಟ್ಟಿದ್ದರೆ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ. ಧಾರವಾಡದಲ್ಲೂ ರೈತರಿಗೆ ನೊಟೀಸ್ ನೀಡಿದ್ದಾರೆ ಅನ್ನೋ ವಿಚಾರದ ಬಗ್ಗೆ ಕೇಳಿದಾಗ ನೋಟಿಸ್ ಕೊಟ್ಟಿದ್ದರೆ ನಾವು ಅದನ್ನೂ ನೋಡ್ತೇವೆ ಎಂದಿದ್ದಾರೆ.
