ಬೆಳಗಾವಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಪರಿಷತ್ ಸದಸ್ಯ ಸಿ.ಟಿ ರವಿ ಹೈಕೋರ್ಟ್ನಿಂದ ಜಾಮೀನು ಪಡೆದ ಬಳಿಕ ಬಿಡುಗಡೆ ಆಗಿದ್ದು, ಆ ಬಳಿಕ ದಾವಣಗೆರೆ, ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ವಾಪಸ್ ಆಗುವ ಮುನ್ನ ಚಿತ್ರದುರ್ಗದಲ್ಲಿ ಮಾತನಾಡಿದ್ದು, ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ಸಿ.ಟಿ ರವಿ ಬರುತ್ತಿರುವ ವಿಷಯ ತಿಳಿದ ಬಿಜೆಪಿ ಕಾರ್ಯಕರ್ತರು ಟೋಲ್ ಬಳಿ ಜಮಾವಣೆ ಆಗಿದ್ದರು. ಭದ್ರತಾ ದೃಷ್ಠಿಯಿಂದ ಎಸ್ಕಾರ್ಟ್ ಮೂಲಕವೇ ಬೆಂಗಳೂರಿಗೆ ತೆರಳುತ್ತಿದ್ದ ಸಿ.ಟಿ ರವಿ, ನಿಮಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ. ನೀವೆಲ್ಲ ಅಖಂಡವಾದ ಪ್ರೀತಿ ತೋರಿಸಿದ್ದೀರಿ. ನಿಮ್ಮ ಕಷ್ಟ ಕಾಲದಲ್ಲಿ ಜೊತೆಗಿದ್ದು ಋಣ ತೀರಿಸುತ್ತೇನೆ ಎಂದಿದ್ದಾರೆ.
ಪರಿಷತ್ ಕಲಾಪದ ವೇಳೆ ಸಿ.ಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಬಂಧನ ಮಾಡಲಾಗಿತ್ತು. ಹೈಕೋರ್ಟ್ ಆದೇಶದ ಬಳಿಕ ಪೊಲೀಸರು ಬಂಧನದಿಂದ ಬಿಡುಗಡೆ ಮಾಡಿದ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಕೈಗೊಂಡಿದ್ದರು.
ಹಿರಿಯೂರಿನ ಐಮಂಗಲ ಟೋಲ್ ಬಳಿ ಬಿಜೆಪಿ ಕಾರ್ಯಕರ್ತರು ಜಮಾವಣೆ ಆಗಿದ್ದರು. ಸಿ.ಟಿ ರವಿ ಬರುತ್ತಿದ್ದಂತೆ ಜೈಕಾರ ಕೂಗಿ ಹಾರ ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು. ಕಾರಲ್ಲಿಯೇ ನಿಂತು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ ಸಿಟಿ ರವಿ. ಸಿ.ಟಿ ರವಿ ಕಾರಿನ ಮುಂದೆ ಮುಂದೆಯೇ ಜೊತೆ ಜೊತೆಗೆ ಸಾಗಿದ್ದಾರೆ ಬಿ.ವೈ ವಿಜಯೇಂದ್ರ.