ಕೋವಿಡ್‌ ನಿಯಮಕ್ಕೆ ಕ್ಯಾರೇ ಎನ್ನದೇ ನಿಯಮ ಉಲ್ಲಂಘನೆ– ಪಶ್ವಿಮ ಬಂಗಾಳದ 13 ಅಭ್ಯರ್ಥಿಗಳ ವಿರುದ್ಧ FIR, 33 ಅಭ್ಯರ್ಥಿಗಳಿಗೆ ನೋಟಿಸ್

[Sassy_Social_Share]

ದೇಶದಲ್ಲಿ ಕರೋನಾ ಎರಡನೇ ಅಲೆ ಸಂಕಷ್ಟದ ಪರಿಸ್ಥಿತಿಗೆ ಎಡೆಮಾಡಿಕೊಟ್ಟಿದೆ.  ಪಶ್ಚಿಮ ಬಂಗಾಳದಲ್ಲಿ  ವಿಧಾನಸಭಾ ಚುನಾವಣೆ ಹಿನ್ನಲೆ, ಕೋವಿಡ್‌ ಸಂಬಂಧ ಚುನಾವಣಾ ಆಯೋಗ ಕಠಿಣ ನಿಯಮಗಳನ್ನು ಜಾರಿಗೊಳಿಸಿತ್ತು. ನಿಯಮಕ್ಕೆ ಕ್ಯಾರೇ ಅನ್ನದೆ ನಿಯಮ ಉಲ್ಲಂಘಿಸಿ  ಚುನಾವಣಾ ಕಾರ್ಯದಲ್ಲಿ ನಿರತರಾದ 13 ಅರ್ಭ್ಯರ್ಥಿಗಳಗೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ ದಾಖಲಿಸಿದೆ. 33 ಅಭ್ಯರ್ಥಿಗಳಿಗೆ ಶೋಕಾಸ್‌ ನೋಟಿಸ್ ನೀಡಿದೆ.

ಏಪ್ರಿಲ್‌ 22 ರಂದು  ಕಲ್ಕತ್ತಾ ಹೈಕೋರ್ಟ್  ಪಶ್ವಿಮ ಬಂಗಾಳದ ಚುನಾವಣಾ ಪ್ರಚಾರದ ಸಮಯದಲ್ಲಿ COVID-19 ಪ್ರೋಟೋಕಾಲ್ಗಳ ಉಲ್ಲಂಘನೆ  ಬಗ್ಗೆ   ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲೇ, ಚುನಾವಣಾ ಆಯೋಗ ಎಚ್ಚೆತ್ತುಕೊಂಡು ನಿಯಮ ಉಲ್ಲಂಘಿಸಿರುವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕೋವಿಡ್‌ ಹೆಚ್ಚಾದ ಕಾರಣ ಚುನಾವಣೆ ಸಂಬಂಧಿಸಿದಂತೆ ಆಯೋಗ ಕೆಲವು ನಿಯಮಗಳನ್ನು ಜಾರಿ ಮಾಡಿತ್ತು.  ರೋಡ್‌ ಶೋಗಳನ್ನು ನಡೆಸುವಂತಿಲ್ಲ, 500 ಕ್ಕೂ ಹೆಚ್ಚು ಜನರೊಂದಿಗೆ ದೊಡ್ಡ ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ ಎಂದು ತಿಳಿಸಿತ್ತು.

ಈ ಸಂಬಂಧಪಟ್ಟ  ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯೋಗ, ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. COVID-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿರುವ ಅಭ್ಯರ್ಥಿಗಳಿಗೆ ಕಠಿಣ ಕ್ರಮಕೈಗೊಳ್ಳಬೇಕೆಂದು  ವಿಡಿಯೋ ಕಾನ್ಫರೆನ್ಸ್‌ ಮೂಲಕ  ಸೂಚನೆ ಕೂಡ ನೀಡಿದೆ.

ಕೋರ್ಟ್‌ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲೇ,, ಚುನಾವಣಾ ಆಯೋಗ  ಕರೋನಾ ಪ್ರೋಟೋಕಾಲ್‌ ಉಲ್ಲಂಘಿಸಿದ 13 ಅಭ್ಯರ್ಥಿಗಳ ವಿರುಧ್ಧ ಎಫ್‌ಐಆರ್‌ ದಾಖಲಿಸಿದೆ. ಇತ್ತ 33 ಅಭ್ಯರ್ಥಿಗಳ ವಿರುದ್ಧ  ಶೋ ಕಾಸ್‌ ನೋಟಿಸ್ ನೀಡಿದೆ.  ಈ ಸಂಬಂಧ ಅಭ್ಯರ್ಥಿಗಳು ಪ್ರತಿಕ್ರಿಯಿಸದಿದ್ದರೆ. ನಂತರ ಮುಲಾಜಿಲ್ಲದೆ ಎಫ್‌ಐಆರ್‌  ದಾಖಲಿಸುವಂತೆ ತಿಳಿಸಿದೆ. ಈ ಕುರಿತು ಅಧಿಕಾರಿಗಳು ಆಯೋಗಕ್ಕೆ ವರದಿಸಲ್ಲಿಸ ಬೇಕೆಂದಿದೆ. 

ಯಾರೇ ಆಗಲಿ ಕರೋನಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸುವವರ ವಿರುದ್ಧ  ಸಾಂಕ್ರಾಮಿಕ ರೋಗ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ 188 ರ  ಅಡಿಯಲ್ಲಿ ದೂರು ನೀಡಲು  ಇಸಿಐ ನಿರ್ಧರಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Related posts

Latest posts

ನೆಹರೂ-ಗಾಂಧಿ ಕುಟುಂಬದಿಂದಲೇ ಭಾರತ ಇಂದು ಉಳಿದುಕೊಂಡಿದೆ: ಕೇಂದ್ರಕ್ಕೆ ಚಾಟಿಯೇಟು ನೀಡಿದ ಶಿವಸೇನೆ

COVID-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದ್ದರೆ, ದೆಹಲಿಯಲ್ಲಿ ಬಹುಕೋಟಿ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸುವ ಕನಿಷ್ಟ ಸೌಜನ್ಯವನ್ನೂ ಮೋದಿ ಸರ್ಕಾರ ತೋರುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು...

ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು...

ಲಾಕ್ ಡೌನ್ ಘೋಷಿಸಿ ಬಡವರ್ಗದವರಿಗೆ ಯಾವುದೇ ಯೋಜನೆ ಘೋಷಿಸದ ರಾಜ್ಯ ಸರ್ಕಾರ

ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ...