ತೂಕವನ್ನು ಇಳಿಸಬೇಕು ಅನ್ನುವವರ ಸಂಖ್ಯೆ ಎಷ್ಟಿದೆಯೋ ಅಷ್ಟೇ ಸಂಖ್ಯೆ ತೂಕವನ್ನು ಹೆಚ್ಚು ಮಾಡಬೇಕು ಅನ್ನುವವರದ್ದು ಕೂಡ ಇದೆ. ತೂಕವನ್ನು ಇಳಿಸುವುದಕ್ಕೆ ಹರಸಾಹಸವನ್ನು ಮಾಡುತ್ತಾರೆ ಎಷ್ಟೇ ಕಷ್ಟಪಟ್ಟು ಕೆಲವರು ವೈಟ್ ಲಾಸ್ ಮಾಡೋದಕ್ಕೆ ಆಗೋದಿಲ್ಲ.ಅದೇ ರೀತಿ ವೇಟ್ ಗೇನ್ ಮಾಡೋದು ಕೂಡ ಸುಲಭದ ಮಾತಲ್ಲ. ಕೆಲವರು ಸರಿಯಾಗಿ ತಿನ್ನದೆ ತೆಳ್ಳಗಿರುತ್ತಾರೆ.ಆದರೆ ಕೆಲವರು ಎಷ್ಟೇ ತಿಂದರೂ ಕೂಡ ಅವರು ದಪ್ಪನೆ ಆಗೋದಿಲ್ಲ.ಎರಡು ವರ್ಗದವರು ಯಾವ ರೀತಿ ಆಹಾರವನ್ನ ಸೇವಿಸಿದರೆ ಬೇಗನೆ ದಪ್ಪ ಆಗುತ್ತಾರೆ ಅನ್ನೋದರ ಡೀಟೇಲ್ಸ್ ಹೀಗಿದೆ.
ಅವಕಾಡೋ
ಪ್ರತಿ ದಿನ ನೀವು ಅವಕಾಡೋ ಹಣ್ಣನ್ನ ಅಥವಾ ಇದರಿಂದ ಮಾಡಿರುವಂತ ಮಿಲ್ಕ್ ಶೇಕ್ ಅನ್ನ ಕುಡಿಯುವುದರಿಂದ ದಪ್ಪ ಆಗುವುದಕ್ಕೆ ಸಹಾಯಕಾರಿ.ಇದರಲ್ಲಿ ವಿಟಮಿನ್ ಕೆ ಪೊಟ್ಯಾಶಿಯಂ ಮತ್ತು ಫೈಬರ್ ಅಂಶ ಹೆಚ್ಚಿರುವುದರಿಂದ ತೂಕವನ್ನು ಹೆಚ್ಚಿಸುವುದಕ್ಕೆ ಉಪಯುಕ್ತ. ಹಾಗೂ ಮುಖ್ಯವಾಗಿ ಒಂದು ಅವಕಾಡೊ ಹಣ್ಣಿನಲ್ಲಿ 200ರಷ್ಟು ಕ್ಯಾಲೋರಿಸ್ ಇದೆ ಹಾಗೂ ಫ್ಯಾಟಿ ಅಂಶ ಜಾಸ್ತಿ ಇದೆ.
ಫ್ಯಾಟಿ ಫಿಶ್
ಫ್ಯಾಟಿ ಫಿಶ್ ಅನ್ನ ನೀವು ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ಫ್ಯಾಟ್ ಅಂಶ ಹಾಗೂ ಪ್ರೋಟೀನ್ ಹೆಚ್ಚಿನ ಮಟ್ಟದಲ್ಲಿ ನಿಮಗೆ ಸಿಗುತ್ತದೆ. ಇದರ ಜೊತೆಗೆ ನಮ್ಮ ದೇಹಕ್ಕೆ ಇಮ್ಯುನಿಟಿಯನ್ನು ಬೂಸ್ಟ್ ಮಾಡುತ್ತದೆ .ಆಯ್ಲಿ ಫಿಶ್, ರೆಡ್ ಮೀಟ್ ಕೂಡ ತುಂಬಾನೇ ಒಳ್ಳೆಯದು ಹಾಗೂ ಎಲ್ಲದ್ರಲ್ಲೂ ಪ್ರೊಟೀನ್ ಅಂಶಾ ಕೂಡ ಇರುತ್ತದೇ.
ಡ್ರೈ ಫ್ರೂಟ್ಸ್
ಪ್ರತಿದಿನ ನೀವು ಡ್ರೈ ಫ್ರೂಟ್ಸ್ ಅನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಜಾಸ್ತಿ ಆಗುತ್ತದೆ. ಜೊತೆಗೆ ನಿಮ್ಮ ಮೂಳೆಗಳಿಗೆ ಶಕ್ತಿ ಸಿಗುತ್ತದೆ .ಇದರಲ್ಲಿ ಕ್ಯಾಲೋರಿಸ್ ಅಂಶ ಜಾಸ್ತಿದ್ದು ನೀವು ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಅಥವಾ ನಟ್ಸ್ ಮಿಲ್ಕ್ ಶೇಕ್ ಅನ್ನ ಮಾಡಿಕೊಡಿಬಹುದು. ಇನ್ನು ರಾತ್ರಿ ಮಲಗೋದಕ್ಕಿಂತ ಮುಂಚೆ ಗೋಡಂಬಿ, ಡ್ರೈ ದ್ರಾಕ್ಷಿ,ಬಾದಾಮಿ, ಪಿಸ್ತವನ್ನ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಡ್ರೈ ಫ್ರೂಟ್ಸ್ ಹಾಗೂ ನೀರನ್ನು ಕುಡಿಯುವುದರಿಂದ ಬೇಗನೆ ತೂಕವನ್ನು ಗೈನ್ ಮಾಡ್ತೀರಾ.
ಹಾಲು ಮತ್ತು ಮೊಟ್ಟೆ
ದಿನಕ್ಕೆ ಒಂದು ಲೋಟ ಹಾಲು ಇದರ ಜೊತೆಗೆ ಎರಡು ಮೊಟ್ಟೆಯನ್ನ ತಪ್ಪದೆ ತಿನ್ನುವುದರಿಂದ ನೀವು ಬೇಗನೆ ವೇಟಿಗೆ ಮಾಡಬಹುದು ಮಾತ್ರವಲ್ಲದೆ ಹೆಲ್ದಿಯಸ್ಟ್ ಮಜಲ್ ಬಿಲ್ಡ್ ಆಗುತ್ತದೆ, ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಹಾಗೂ ಮೊಟ್ಟೆಲಿ ಪ್ರೋಟೀನ್ ಅಂಶ ಇರೋದ್ರಿಂದ ದೇಹದ ತೂಕಕ್ಕೆ ಇದು ಒಳ್ಳೆಯದು.
ಪ್ರತಿದಿನ ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು.ಇದರ ಜೊತೆಗೆ ತೂಕವನ್ನು ಬೇಗನೆ ಹೆಚ್ಚಾಗೋದಿಕ್ಕೆ ಅಬ್ಬಬ್ಬ ಅಂದ್ರೆ ದಿನಕ್ಕೆ ಐದು ಮಿನಿ ಮೀಲ್ ಮಾಡುವುದು ಉತ್ತಮ.