ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ʻವೀಕೆಂಡ್ ವಿತ್ ರಮೇಶ್ʼ ಸೀಸನ್ 5ರ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮಾರ್ಚ್ 25 ರಂದು, ಅಂದರೆ ಇದೇ ಶನಿವಾರ ಕಾರ್ಯಕ್ರಮದ ಮೊದಲ ಎಪಿಸೋಡ್ ಪ್ರಸಾರವಾಗಲಿದೆ. ಈ ಸೀಸನ್‌ಗೆ ಮೊದಲ ಅತಿಥಿಯಾಗಿ ಯಾರ್ ಬರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಪ್ರೇಕ್ಷಕರ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ನ ಮೋಹಕ ರಮ್ಯಾ, ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್‌ನ ಮೊದಲ ಎಪಿಸೋಡ್‌ಗೆ ಅತಿಥಿಯಾಗಿ ಬರಲಿದ್ದಾರೆ.

ಈ ಸಂಬಂಧ ಜೀ ಕನ್ನಡ ವಾಹಿನಿ, ಹೊಸ ಪೋಸ್ಟರ್ ಒಂದನ್ನ ಶೇರ್ ಮಾಡಿದ್ದು, ಇದನ್ನ ನೋಡಿದ ಪದ್ಮಾವತಿಯ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕೆಲ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ, ಇದೀಗ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ರಮ್ಯಾ ಭಾಗವಹಿಸುತ್ತಿರುತ್ತಾರೆ. ಇದೀಗ ರಮ್ಯಾ ಸಾಧಕರ ಕುರ್ಚಿ ಏರಲಿದ್ದಾರೆ. ಸಾಧಕರ ಹಿಂದಿನ ಶ್ರಮವನ್ನು ತೋರಿಸುವ ಶೋ ವೀಕೆಂಡ್ ವಿತ್ ರಮೇಶ್.. ಈ ಕಾರ್ಯಕ್ರಮವನ್ನ ಅನೇಕರು ಇಷ್ಟ ಪಡ್ತಾರೆ. ಈ ಬಾರಿ ಕಾರ್ಯಕ್ರಮದ ಮೊದಲ ಎಪಿಸೋಡ್‌ನಲ್ಲಿ ನಟಿ ರಮ್ಯಾ ಬದುಕಿನಲ್ಲಿ ನಡೆದ ಖುಷಿಯ ಕ್ಷಣಗಳು, ಅನೇಕ ಘಟನೆಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ ಪ್ರೇಕ್ಷಕರಿಗೆ ಲಭ್ಯವಾಗಲಿದೆ.














