ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ (Vinay somaiah) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (Cm siddaramaiah) ಪ್ರತಿಕ್ರಿಯಿಸಿದ್ದು ಅದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಈಗ ಎಫ್.ಐ.ಆರ್ (FIR) ಆಗಿದೆ ಮತ್ತು ತನಿಖೆ ನಡೆಯುತ್ತಿದೆ.ನಾವು ಇಂಟರ್ ಫೀಯರ್ ಮಾಡಲ್ಲ ಎಂದಿದ್ದಾರೆ.

ಇನ್ನು ವಿರೋಧ ಪಕ್ಷ ಬಿಜೆಪಿಯವರು ಹತಾಶರಾಗಿದ್ದಾರೆ. ನಾವು ಸಾವಿನಲ್ಲೂ ರಾಜಕೀಯ ಮಾಡಲ್ಲ.ಅವರು ಹೇಳಿದಂತೆ ಎಲ್ಲವೂ ಆಗಲ್ಲ ಎಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.
ಈಗ ಕೇವಲ ಆರೋಪ ಕೇಳಿಬಂದಿದೆ.ಯಾರು ತಪ್ಪಿತಸ್ಥರು ಅಂತ ತನಿಖೆಯಲ್ಲಿ ಬೆಳಕಿಗೆ ಬರಲಿದೆ. ಆ ನಂತರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಎಫ್ಐಆರ್ ನಲ್ಲಿ ಶಾಸಕರಾದ ಪೊನ್ನಣ್ಣ,ಮಂಥರ್ ಗೌಡ ಹೆಸರು ಸೇರಿಸುವಂತೆ ಬಿಜೆಪಿ ಒತ್ತಾಯ ಮಾಡಿರುವ ವಿಚಾರವಾಗಿ ಸಿಎಂ ಕಿಡಿಕಾರಿದ್ದಾರೆ.

ಬಿಜೆಪಿಯವರು ಡಿಮ್ಯಾಂಡ್ ಗೆಲ್ಲ ನಾವು ಉತ್ತರ ಕೋಡೋಕೆ ಆಗಲ್ಲ. ಬಿಜೆಪಿ ಅವ್ರು ಒಂದು ರೀತಿ ಹತಾಶರಾಗಿಬಿಟ್ಟಿದ್ದಾರೆ.ಹತಾಶರಾಗಿ ಈ ರೀತಿ ಹೇಳಿಕೆ ಕೋಡ್ತಾಯಿದ್ದಾರೆ. ಹೀಗಾಗಿ ಸಾವಿನಲ್ಲಿ ರಾಜಕೀಯ ಮಾಡ್ತಾರೆ. ಇದೇ ಮೊದಲಲ್ಲ,ಯಾವಾಗಲೂ ಸಹ ಬಿಜೆಪಿ ಅವ್ರು ಇದನ್ನೆ ಮಾಡೋದು.ಅದರಿಂದ ನಾವು ಅವರು ಹೇಳಿದಕ್ಕೆಲ್ಲ ರಿಯಾಕ್ಟ್ ಮಾಡೋಕೆ ಆಗಲ್ಲ ಎಂದಿದ್ದಾರೆ.






