ಕಾರವಾರ : ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು ಟಿಕೆಟ್ ಸಿಗದೇ ಜಗದೀಶ್ ಶೆಟ್ಟರ್ ಕಂಗಾಲಾಗಿದ್ದಾರೆ. ದೆಹಲಿಯಲ್ಲಿ ವರಿಷ್ಠರ ಜೊತೆಯಲ್ಲಿಯೂ ಮಾತನಾಡಿಕೊಂಡು ಬಂದಿರುವ ಶೆಟ್ಟರ್ ಮುಂದಿನ ನಡೆ ಏನು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಈ ಎಲ್ಲದರ ನಡುವೆ ಶೆಟ್ಟರ್ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಶೆಟ್ಟರ್ ಕಾಂಗ್ರೆಸ್ ಸೇರಲು ಇಚ್ಛಿಸಿದರೆ ನಮ್ಮ ಸ್ವಾಗತವಿದೆ ಎಂದು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಶೆಟ್ಟರ್ ಇದುವರೆಗೂ ಕಾಂಗ್ರೆಸ್ ಸೇರುವ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡಿಲ್ಲ ಎಂದು ಹೇಳಿದ್ರು.
ಶೆಟ್ಟರ್ ಒಬ್ಬ ಅತ್ಯುತ್ತಮ ನಾಯಕ . ಅವರು ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದರೆ ಅದಕ್ಕೆ ನಮ್ಮ ಸಮ್ಮತಿಯಿದೆ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು.