ತೆಲುಗು ನಟ ನರೇಶ್ ಜೊತೆ 3ನೇ ವಿವಾದ ಚಿತ್ರರಂಗದಲ್ಲಿ ಭಾರೀ ಕೊಲಾಹಲ ಎಬ್ಬಿಸಿದ್ದು, ಎರಡು ಕುಟುಂಬಗಳ ನಡುವೆ ವಾಗ್ವಾದ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಪವಿತ್ರಾ ಲೋಕೇಶ್, ನಾನಿನ್ನು ನರೇಶ್ ಅವರನ್ನು ಮದುವೆ ಆಗಿಲ್ಲ. ಮುಂದೆ ಆಗುತ್ತೆನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
‘ನಾನು ಮತ್ತು ನರೇಶ್ ಪರಿಚಯವಾಗಿದ್ದು 4 ವರ್ಷಗಳ ಹಿಂದೆ. ಅವರು ನಾನು ಹ್ಯಾಪಿ ವೆಡ್ಡಿಂಗ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದೆವು. ಆಗ ನರೇಶ್ ಯಾರು ಅಂತಾನೇ ಗೊತ್ತಿರಲಿಲ್ಲ. ಎರಡನೇ ಸಿನಿಮಾ ಮಾಡುವಾಗ ಪರಿಚಯವಾದರು. ತೀರಾ ಸಲುಗೆ ಬೆಳೆಯಿತು. ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನಾನೂ ಹಂಚಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಆತ್ಮಿಯತೆ ಬೆಳೆಯಿತು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಅಂದರೆ, ಒಟ್ಟಿಗೆ ಓಡಾಡುವುದು ಸಹಜ. ಅದರ ಹೊರತಾಗಿ ಏನೂ ಇಲ್ಲ ಎಂದು ಪವಿತ್ರಾ ಲೋಕೇಶ್ ಸಮರ್ಥಿಸಿಕೊಂಡಿದ್ದಾರೆ.
ನೂರಾರು ಸಿನಿಮಾಗಳನ್ನು ಮಾಡಿರುವೆ. ಹಲವು ಕಲಾವಿದರ ಜೊತೆ ನಟಿಸಿರುವೆ. ಹಾಗಂತ ಎಲ್ಲರ ಜೊತೆಯೂ ನನಗೆ ಸಂಬಂಧವಿದೆ ಅಂದರೆ ಹೇಗೆ? ರಮ್ಯಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನಾನು ಮತ್ತು ನರೇಶ್ ಏನು ಅಂತ ನಮ್ಮಿಬ್ಬರಿಗೆ ಗೊತ್ತು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇನ್ನು ಮದುವೆ ಆಗಿದ್ದೇನೆ ಎಂಬುದು ಸುಳ್ಳು. ಸದ್ಯ ನಾವು ಆತ್ಮೀಯರಾಗಿದ್ದೇವೆ. ನಾಳೆಯ ಬಗ್ಗೆ ನಾನು ಹೇಗೆ ಮಾತನಾಡೋಕೆ ಆಗುತ್ತೆ? ಎಂದು ಹೇಳುವ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ.
ನರೇಶ್ ಜೊತೆ ಆತ್ಮೀಯವಾಗಿರುವುದು ಅವರ ಬಳಿ ದುಡ್ಡಿದೆ ಅಂತ ಅಲ್ಲ. ನನ್ನ ಬಳಿ ಇರುವ ದುಡ್ಡು, ಒಡವೆ ಎಲ್ಲವೂ ನನ್ನವೇ. ಯಾರದ್ದೂ ಅಲ್ಲ. ನನ್ನ ವಿರುದ್ಧ ರಮ್ಯಾ ಯಾಕೆ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಅವರ ವೈಯಕ್ತಿಕ ಸಮಸ್ಯೆ ನನ್ನ ಖಾಸಗಿತನಕ್ಕೆ ಧಕ್ಕೆ ಬರುತ್ತಿದೆ ಎಂದು ಅವರು ಹೇಳಿದರು.