ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತಯಾರಿ ವಿಚಾರಕ್ಕೆ ಸಂಬಂಧಿಸಿದಂತೆ “ಪ್ರತಿಧ್ವನಿ” ಗೆ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಯಾವಾಗಲೇ ಚುನಾವಣೆ ಬಂದರೂ ನಾವು ಎದುರಿಸಲು ಸಿದ್ಧ.ಬಿಬಿಎಂಪಿ ಚುನಾವಣೆ ನಡೆಸಿದ್ರೂ ನಾವು ರೆಡಿ. ಬೆಂಗಳೂರಿನಲ್ಲಿ ನಮ್ಮದೇ ಪಕ್ಷದ ಮೂವರು ಸಂಸದರಿದ್ದಾರೆ. 16 ಮಂದಿ ಬಿಜೆಪಿ ಶಾಸಕರಿದ್ದಾರೆ. ಈಗ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವರಾದ ಮೇಲೆ, ಮನೆಗಳ ಮೇಲೆ ಟ್ಯಾಕ್ಸ್ ಹಾಕಿದ್ದಾರೆ.

ಮನೆ ಕಟ್ಟಲು ಲಂಚ ಕೊಡಬೇಕು. ಹೆಚ್ಚಿಗೆ ಟ್ಯಾಕ್ಸ್ ಕಟ್ಟಬೇಕು. ಚದರಡಿ ಲೆಕ್ಕದಲ್ಲಿ ಲಂಚ ಕೊಡಬೇಕು. ಫ್ಲಾಟ್ ಕಟ್ಟುವುದಕ್ಕೂ ಚದರಡಿ ಲೆಕ್ಕದಲ್ಲಿ ಲಂಚ ಕೊಡಬೇಕು.
ಈ ರೀತಿಯ ದಂಧೆ ಶುರುವಾಗಿ ಎಲ್ಲಾ ಕಡೆ ಲಂಚಾವತರ ನಡೆಯುತ್ತಿದೆ. ಇಲ್ಲಿಯವರೆಗೆ ಹೊಡೆದಿದ್ದರಲ್ಲಾ ಲಂಚ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದು, ಚುನಾವಣೆಗೆ ನಾವು ಸಿದ್ಧ ಎಂದಿದ್ದಾರೆ.