• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಯತ್ನಾಳ್‌ ಕೆಣಕಿದ ಮಾಜಿ ಸಿಎಂಗೆ ವಾರ್ನಿಂಗ್.. ಯಾರಿಗೆ ಗುನ್ನಾ ಕೊಟ್ರು..?

ಕೃಷ್ಣ ಮಣಿ by ಕೃಷ್ಣ ಮಣಿ
November 28, 2024
in ಕರ್ನಾಟಕ, ರಾಜಕೀಯ
0
ಯತ್ನಾಳ್‌ ಕೆಣಕಿದ ಮಾಜಿ ಸಿಎಂಗೆ ವಾರ್ನಿಂಗ್.. ಯಾರಿಗೆ ಗುನ್ನಾ ಕೊಟ್ರು..?
Share on WhatsAppShare on FacebookShare on Telegram

ಬಿಜೆಪಿ ಪಕ್ಷದಲ್ಲಿ ಒಳಜಗಳ ತಾರಕಕ್ಕೇರಿದೆ. ವಕ್ಫ್‌ ವಿಚಾರದಲ್ಲಿ ಯತ್ನಾಳ್‌ ಟೀಂ ಪ್ರತ್ಯೇಕವಾಗಿ ಪ್ರವಾಸ ಮಾಡುತ್ತಿರುವ ವಿಚಾರದಲ್ಲಿ ಮಾಜಿ ಸಚಿವ ಡಿ.ವಿ ಸದಾನಂದಗೌಡ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದರು. ಬಿಜೆಪಿಯಲ್ಲಿ ಆಂತರಿಕ ಜಗಳವೇ ಆಯ್ತು. ಇವರಿಂದ ಸರ್ಕಾರವನ್ನು ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ಜನರು ಮಾತಾಡ್ತಿದ್ದಾರೆ. ಇಗೋ ಪ್ರಾಬ್ಲಂನಿಂದ ಬಿಜೆಪಿಗೆ ದೊಡ್ಡ ಹಾನಿಯಾಗ್ತಿದೆ. ಇಷ್ಟೆಲ್ಲಾ ಪಕ್ಷದಲ್ಲಿ ಆಗ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳೋಕೆ ಆಗಲ್ಲ. ಅದಕ್ಕಾಗಿ ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್‌ಗೆ ಒತ್ತಾಯ ಮಾಡುತ್ತೇವೆ ಎಂದಿದ್ದರು.

ADVERTISEMENT

ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಸದಾನಂದಗೌಡರು ಪರೋಕ್ಷವಾಗಿ ವಾಗ್ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸದಾನಂದಗೌಡರಿಗೆ ಯತ್ನಾಳ್ ವಾರ್ನಿಂಗ್ ಮಾಡಿದ್ದಾರೆ. ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡ್ತೇನೆ ಎನ್ನುವ ಮೂಲಕ ಚಾಟಿ ಬೀಸಿದ್ದಾರೆ. ಸದಾನಂದಗೌಡಗೆ ಪಂಥಾಹ್ವಾನ ನೀಡಿರುವ ಶಾಸಕ ಯತ್ನಾಳ್, ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಸದಾನಂದಗೌಡ ಮಾತನಾಡಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಆಣೆಪ್ರಮಾಣಕ್ಕೆ ಆಹ್ವಾನಿಸಿದ್ದಾರೆ ಯತ್ನಾಳ್, ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ ಎಂದು ಸವಾಲು ಎಸೆದಿದ್ದಾರೆ.

Duplicate Currency: ನಕಲಿ 500 ರೂಪಾಯಿ ನೋಟುಗಳ ಹಾವಳಿ ಮಿತಿ ಮೀರಿದೆ..! #indianrupee #RBIintervention

ಸದಾನಂದಗೌಡ ನನಗಿಂತ ಕೆಟ್ಟದಾಗಿ ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ, ಸದಾನಂದಗೌಡ ಯಾಕೆ ಗಾಬರಿ ಆಗಬೇಕು..? ಎಂದು ಪ್ರಶ್ನಿಸಿರುವ ಯತ್ನಾಳ್‌, ಸದಾನಂದಗೌಡರೇ ಗಾಬರಿ ಆಗಬೇಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ. ಸದಾನಂದಗೌಡ ದೀಪ ಆರುತ್ತಿದೆ. ಈಗಾಗಲೇ ಸದಾನಂದಗೌಡ ದೀಪ ಆರಿ ಹೋಗಿದೆ ಎಂದಿದ್ದಾರೆ ಬಸನಗೌಡ ಪಾಟೀಲ್‌ ಯತ್ನಾಳ್. ನಾನು ಯಾರ ಜೊತೆಗೂ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿಲ್ಲ, ನಿನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ ಎಂದು ಹೇಳಿ ಇದು ಹೊಸ ವಚನ ಎಂದು ಡಿವಿಎಸ್ ವಿರುದ್ಧ ವಚನದ ಮೂಲಕ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.

ಬಿ.ವೈ ವಿಜಯೇಂದ್ರ ಪರವಾಗಿ ಸಭೆ ಮಾಡಿದ್ದ ಬಿ.ಸಿ ಪಾಟೀಲ್ ಹಾಗು ರೇಣುಕಾಚಾರ್ಯ ಯತ್ನಾಳ್‌ ವಿರುದ್ಧ ಕಿಡಿ ಕಾರಿದ್ದರು. ಇದೀಗ ಬಿ.ಸಿ ಪಾಟೀಲ್‌ ವಿರುದ್ಧ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಜೊತೆಗೆ ಯತ್ನಾಳ್ ಕೈ ಜೋಡಿಸಿದ್ದಾರೆ ಎಂದಿದ್ದ ಬಿ.ಸಿ ಪಾಟೀಲ್‌ಗೆ ಎಚ್ಚರಿಕೆ ನೀಡಿರುವ ಯತ್ನಾಳ್, ಕಾಂಗ್ರೆಸ್ ಜೊತೆಗೆ ಕೂರುವಂತಹ ಹಲ್ಕಾ ಕೆಲಸ ನಾವು ಮಾಡಲ್ಲ, ರಾಜ್ಯಾಧ್ಯಕ್ಷ ಹೋಗಿ ಡಿಸಿಎಂ ಡಿ.ಕೆ ಶಿವಕುಮಾರ್‌ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡ . ಆ ವಿಡಿಯೋ ನನ್ನ ಬಳಿ ಇವೆ. ನಾವು ಕಾಂಗ್ರೆಸ್ ಜೊತೆಗೆ ಕೈ ಜೋಡಿಸೋ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡಲ್ಲ, ಹೆತ್ತತಾಯಿಗೆ ದ್ರೋಹ ಬಗೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

Tags: Basanagouda patil Yatnalbasanagouda patil yatnal newsBasangouda Patil Yatnalbasangouda patil yatnal controversybasangouda patil yatnal latest newsbs yediyurappa on yatnaldisciplinary action against yatnalsadananda gowda on yatnalsadananda gowda vs yatnalYatnalyatnal angryyatnal angry on bjp leadersyatnal latest newsyatnal slams yediyurappa vijayendrayatnal vs bjpyatnal warns dv sadananda gowda
Previous Post

ಬೆಂಗಳೂರಲ್ಲಿ ಕಸ ಸಂಗ್ರಹ & ವಿಲೇವಾರಿಯಲ್ಲಿ ಮಹತ್ವದ ಬದಲಾವಣೆ, ಏನದು

Next Post

ಮುಡಾ ಕೇಸ್‌; ಹಿಂದಿನ ಆಯುಕ್ತರಿಗೆ ಡ್ರಿಲ್‌.. ಏನೆಲ್ಲಾ ಕೇಳಿದ್ರು SP..?

Related Posts

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?
Top Story

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

by ಪ್ರತಿಧ್ವನಿ
July 14, 2026
0

ಬೆಂಗಳೂರು: ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದರು. https://youtu.be/_88MGrTJXb0?si=TMbaKMg2Dn5lzJUR ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ...

Read moreDetails
FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

July 14, 2026
H.D Deve Gowda:ಬಿಡದಿ ಟೌನ್​​ಶಿಪ್​​ ಯೋಜನೆ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರ: ಹೋರಾಟದ ಎಚ್ಚರಿಕೆ!

H.D Deve Gowda:ಬಿಡದಿ ಟೌನ್​​ಶಿಪ್​​ ಯೋಜನೆ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರ: ಹೋರಾಟದ ಎಚ್ಚರಿಕೆ!

July 14, 2026
Bidadi Township: ಬಿಡದಿ ಟೌನ್‌ಶಿಪ್‌ ವಿವಾದ: 20ಕ್ಕೂ ಹೆಚ್ಚು ರೈತರ ವಿರುದ್ಧ FIR

Bidadi Township: ಬಿಡದಿ ಟೌನ್‌ಶಿಪ್‌ ವಿವಾದ: 20ಕ್ಕೂ ಹೆಚ್ಚು ರೈತರ ವಿರುದ್ಧ FIR

July 14, 2026
ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

July 14, 2026
Next Post
ಮುಡಾ ಕೇಸ್‌; ಹಿಂದಿನ ಆಯುಕ್ತರಿಗೆ ಡ್ರಿಲ್‌.. ಏನೆಲ್ಲಾ ಕೇಳಿದ್ರು SP..?

ಮುಡಾ ಕೇಸ್‌; ಹಿಂದಿನ ಆಯುಕ್ತರಿಗೆ ಡ್ರಿಲ್‌.. ಏನೆಲ್ಲಾ ಕೇಳಿದ್ರು SP..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada