ವಕ್ಛ್ ತಿದ್ದುಪಡಿ ಕಾಯ್ದೆ (waqf amendment act) ಕಾನೂನು ಸಮರ ಇಂದಿನಿಂದ ಆರಂಭವಾಗಲಿದೆ. ಸುಪ್ರೀಂ ಕೋರ್ಟ್ (Supreme court) ನಿಂದ ವಕ್ಛ್ ತಿದ್ದುಪಡಿ ಕಾಯಿದೆಯ ಪ್ರಶ್ನಿಸಿದ್ದ 73 ಅರ್ಜಿಗಳ ವಿಚಾರಣೆ ಇಂದಿಂದ ನಡೆಯಲಿದೆ.

ಸುಪ್ರೀಂ ಕೋರ್ಟ್ ಸಿಜೆಐ ಸಂಜೀವ್ ಖನ್ನಾ ,ಜಸ್ಟೀಸ್ ಸಂಜಯ್ ಕುಮಾರ್, ಜಸ್ಟೀಸ್ ಕೆ.ಕೆ.ವಿಶ್ವನಾಥನ್ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ವಕ್ಛ್ ಬೋರ್ಡ್ (Waqf board) ಏಕಪಕ್ಷೀಯವಾಗಿ ರೈತರ ಭೂಮಿ ಕಿತ್ತುಕೊಳ್ಳುವುದಕ್ಕೆ ಬ್ರೇಕ್ ಹಾಕಿದ ಕಾಯ್ದೆ ಕುರಿತು ವಿಚಾರಣೆ ನಡೆಯಲಿದೆ.
ದೇಶದಲ್ಲಿ ತೀವ್ರ ಪರ- ವಿರೋಧದ ಚರ್ಚೆ, ಹಿಂಸಾಚಾರಕ್ಕೆ ಈ ವಕ್ಛ್ ತಿದ್ದುಪಡಿ ಕಾಯ್ದೆ ಕಾರಣವಾಗಿದೆ.ಈ ತಿದ್ದುಪಡಿ ಕಾಯಿದೆ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಈಗ ಕಾನೂನಿನ ಸಮರ ಶುರುವಾಗಲಿದೆ.

ಈ ಕುರಿತು ಸುಪ್ರೀಂ ಕೋರ್ಟ್ ಗೆ ಈಗಾಗಲೇ ಕೇಂದ್ರ ಸರ್ಕಾರ ಕೇವಿಯೇಟ್ ಹಾಕಿದೆ.ಹೀಗಾಗಿ ಕೇಂದ್ರ ಸರ್ಕಾರದ ವಾದ ಆಲಿಸದೇ ಸುಪ್ರೀಂ ಕೋರ್ಟ್ ಆದೇಶ ನೀಡುವಂತಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಕಾಯ್ದೆಯ ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಲಿದೆ.