ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತಾ ದಾಖಲು ಮಾಡಿರೋದು. ಜೊತೆಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಆಶ್ರಯ ಕಾಲೋನಿ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಿಗ್ಗಾವಿಯ ಆಶ್ರಯ ಕಾಲೋನಿಯಲ್ಲಿ 104 ಮನೆಗಳನ್ನು ಹೊಂದಿದ್ದು, ಕಳೆದ 50 ವರ್ಷಗಳಿಂದ ನಿವಾಸಿಗಳು ಇಲ್ಲೇ ವಾಸ ಮಾಡ್ತಿದ್ದಾರೆ. ಆಶ್ರಯ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಆಗಿತ್ತು. ಆದ್ರೆ ಮನೆ ನಿರ್ಮಿಸೋ ಹಂತದಲ್ಲಿ ವಕ್ಫ್‌ನಿಂದ ನೋಟಿಸ್ ಬಂದಿದ್ದು, ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ರೀತಿ ನಮ್ಮ ಜಾಗಕ್ಕೆ ವಕ್ಫ್ ಆಸ್ತಿ ಅಂತಾ ನೋಟಿಸ್ ಕೊಟ್ಟರೆ ನಾವೆಲ್ಲಿಗೆ ಹೋಗಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕೋರ್ಟ್ನಲ್ಲಿ ನೀಡಿರುವ ತಡೆಯಾಜ್ಞೆ ತೆರವು ಗೊಳಿಸಬೇಕು. ಜಿಲ್ಲಾಧಿಕಾರಿಗಳೇ ಲಿಖಿತವಾಗಿ ಬರೆದುಕೊಡಬೇಕು. ಇಲ್ಲದಿದ್ದರೆ ಮತದಾನ ಮಾಡಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.