2023ರಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸುಲಭವಾಗಿ ಗೆಲ್ಲುವ ಆಸೆಯಲ್ಲಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಟೀಕಿಸಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾತನಾಡಿದ ಶ್ರಣಿವಾಸ್‌ಪ್ರಸಾದ್ ಕೋಲಾರ ಅತ್ಯಂತ ಸುರಕ್ಷಿತ ಕ್ಷೇತ್ರ ಎಂದು ಅಲ್ಲಿಗೆ ಹೋಗಿದ್ದಾರೆ. ಒಂದು ವೇಳೆ ಬಾದಾಮಿ ಸುರಕ್ಷಿತ ಅಲ್ಲದಿದ್ದರೆ ಅಲ್ಲಿಂದ ಯಾಕೆ ಸ್ಪರ್ದಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಈಗಾಗಲೇ ಚಾಮರಾಜಪೇಟೆಗೆ ಹೋಗಿ ಬಂದರೂ ಕೊನೆಗೆ ಕೋಲಾರಕ್ಕೆ ಹೋಗಿದ್ದಾರೆ ಅಲ್ಲಿ ಕುರುಬ ಮತ್ತು ಮುಸ್ಲಿಂ ಸಮುದಾಯ ಹೆಚ್ಚಾಗಿ ಇದೆ ಸುಲಭವಾಗಿ ಗೆದ್ದು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ವಿವೇಕ ಯೋಜನೆ ಕುರಿತು ಪ್ರತಿಕ್ರಿಯಿಸಿದ ಪ್ರಸಾದ್ ರಾಜ್ಯ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಕೇಸರಿ ಬಣ್ಣ ತ್ಯಾಗದ ಸಂಕೇತ ಎಲ್ಲರೂ ಗೌರವ ಕೊಡುತ್ತಾರೆ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಸಲಹೆ ನೀಡಿದ್ದಾರೆ.
ಮೈಸೂರು-ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣವಾಗಿ ಪ್ರತಿಕ್ರಿಯಿಸಿದ ಪ್ರಸಾದ್ ಟಿಪ್ಪು ಪ್ರತಿಮೆಯನ್ನು ಅವರ ಸ್ವಂತ ದುಡ್ಡಿನಲ್ಲಿ ಸ್ಥಾಪಿಸಿದರೆ ತಪ್ಪಿಲ್ಲ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸಬಾರದು ಎಂದು ತೀರ್ಮಾನಿಸಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ವಿಗ್ರಹರಾಧನೆ ಪ್ರತಿಮೆ ಸಂಸ್ಕೃತಿ ಇಲ್ಲ ಹಾಗಾಗಿ ಇನ್ನೊಮ್ಮೆ ಯೋಚನೆ ಮಾಡಲಿ ಎಂದಿದ್ದಾರೆ.