ವಯೋ ವೃದ್ಧರು ಹಾಗು ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕೊಡಲಾಗಿದೆ. ಅದೇ ರೀತಿ ಇಂದು ಅನಾರೋಗ್ಯ ದಿಂದ ಬಳಲುತ್ತಿದ್ದ ವೃದ್ಧೆ ಮನೆಯಲ್ಲೇ ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರು ಎಳೆದಿದ್ದಾರೆ. ಉಡುಪಿ ಜಿಲ್ಲೆಯ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರದಲ್ಲಿ ಘಟನೆ ನಡೆದಿದೆ.
83 ವರ್ಷದ ಪಿ. ಯಶೋದಾ ನಾರಾಯಣ ಉಪಾಧ್ಯ ಮತದಾನ ಮಾಡಿ ಮೃತಪಟ್ಟ ವಯೋವೃದ್ಧೆ. ಯಶೋಧಾ ಅವರು ಹಿರಿಯ ನಾಗರಿಕರ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ಮತದಾನ ಮಾಡುವ ಮುನ್ನ ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡಿತ್ತು. ಸುಸ್ತು ಇತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ಹೋಗುವುದಾಗಿ ನಿಶ್ಚಯಿಸಿದ ಅಜ್ಜಿ ಮತದಾನ ಮಾಡಿದರು.
ಮತದಾನ ಮಾಡಿದ ಬಳಿಕ ಆಸ್ಪತ್ರೆಗೆ ತೆರಳಿದ್ದ, ಅಜ್ಜಿ ಚಿಕಿತ್ಸೆ ಪಡೆದುಕೊಂಡಿದ್ದ. ಆದರೆ ಆಸ್ಪತ್ರೆಗೆ ಹೋಗುವ ಹೊತ್ತಿಗೆ ಆರೋಗ್ಯ ಉಲ್ಬಣಗೊಂಡಿತ್ತು. ವೈದ್ಯರು ಚಿಕಿತ್ಸೆ ಕೊಟ್ಟರೂ ಫಲಕಾರಿ ಆಗದೆ ಪಿ. ಯಶೋಧಾ ಮೃತರಾಗಿದ್ದಾರೆ.. ಆದರೆ ಮತದಾನ ಮಾಡಲು ಕಾಯದೆ, ಚಿಕಿತ್ಸೆ ಪಡೆದಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ.