
ಇಂಡೋನೇಷ್ಯಾದ ಡುಕೋನೋ ಪರ್ವತದಲ್ಲಿ ಅನಿರೀಕ್ಷಿತವಾಗಿ ಭಾರೀ ಜ್ವಾಲಾಮುಖಿ ಸ್ಫೋಟಗೊಂಡಿದೆ.ಈ ಭಯಾನಕ ದೃಶ್ಯ ಸರ್ಕಾರ ಕಾರ್ಯಾಚರಣೆ ನೆಡುಸುತ್ತಿದ್ದ ಡ್ರೋನ್‌ನಲ್ಲಿ ಸೆರೆಯಾಗಿದ್ದು ಮೈ ಜುಮ್ಮೆನಿಸುವಂತಿದೆ.ಇದೇ ಸಂದರ್ಭದಲ್ಲಿ ಡುಕೊನೊ ಪರ್ವತ ಏರಲು ಮುಂದಾಗಿದ್ದ ಸುಮಾರು 12 ಕ್ಕೂ ಹೆಚ್ಚು ಪರ್ವತಾರೋಹಿಗಳು, ಜ್ವಾಲಾಮುಖಿ ಸ್ಫೋಟಗೊಂಡ ತಕ್ಷಣವೇ ಪರ್ವತದಿಂದ ಇಳಿದು ಓಡುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ.

ಅದೃಷ್ಟವಶಾತ್ ಜ್ವಾಲಾಮುಖಿ ಸ್ಫೋಟಗೊಂಡಿರೋದನ್ನ ತಿಳಿದ ಪರ್ವತಾರೋಹಿಗಳು, ಅಪಾಯದ ಸುಳಿವು ಅರಿತು, ಮರುಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.ಆದ್ರೆ ಪರ್ವತದ ಹಾದಿ ದುರ್ಗಮವಾಗಿದ್ದು, ಆ ದಾರಿಯಲ್ಲಿ ವೇಗವಾಗಿ ಮುಂದೆ ಸಾಗಿ ಜೀವ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು.ಜೊತೆಗೆ ಜ್ವಾಲಾಮುಖಿಯ ಸ್ಫೋಟದಿಂದ ಕ್ಷಣಮಾತ್ರದಲ್ಲೇ ಸಂಪೂರ್ಣ ಆಗಸ ಹೊಗೆಯಿಂದ ಆವರಿಸಿಬಿಟ್ಟಿತ್ತು.
NEW: Hikers run for their lives after Mount Dukono in Indonesia erupts right in front of them.
— Collin Rugg (@CollinRugg) August 24, 2024
The footage was captured by a government operated drone.
The hikers ignored warning signs that told them to stay out of the 3 kilometer ‘danger zone.’
The unauthorized hikers… pic.twitter.com/y5Rr6Rje6i
ಈ ಸ್ಫೋಟದ ತೀವ್ರತೆಯಿಂದ ಹೊರ ಚಿಮ್ಮಿಂದ ಲಾವಾ ಮತ್ತು ಬೂದಿ ಸುಮಾರು ಐದು ಕಿಲೋಮೀಟರ್ ತನಕ ಸಿಡಿದಿದೆ ಎಂದು ಹೇಳಲಾಗಿದ್ದು, ಇಂಥ ಪರಿಸ್ಥಿತಿಯಲ್ಲಿ, ಹೆದರಿ ಅಪಾಯಕ್ಕೆ ಸಿಲುಕದೇ, ತಕ್ಷಣ ಸ್ಥಳದಿಂದ ಹೊರಟು, ಯಾವುದೇ ಅಪಾಯವಿಲ್ಲದೇ ಎಲ್ಲಾ ಪರ್ವತಾರೋಹಿಗಳು ಜೀವ ಉಳಿಸಿಕೊಂಡಿರೋದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.