ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಚಿತ್ರವನ್ನು ಧ್ರುವೀಕರಣ ಎಂದು ಕರೆಯುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಸಂಸತ್ತಿನಲ್ಲೂ ಚರ್ಚೆಯ ವಿಷಯವಾಗಿ ಮಾರ್ಪಟ್ಟಿರುವ ಕಾಶ್ಮೀರ ಫೈಲ್ಸ್ ಚಿತ್ರವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಸಮಾಜದ ಒಂದು ವರ್ಗ ಟೀಕಿಸಿದೆ. ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರೆ ನಮ್ಮ ಸಿನಿಮಾವನ್ನು ಟೀಕಿಸುತಿದ್ದಾರೆ ಎಂದು ವಿವೇಕ್ ಹೇಳಿದ್ದಾರೆ.
ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಮತ್ತಿತರರು ನಟಿಸಿರುವ ‘ದಿ ಕಾಶ್ಮೀ ರ್ ಫೈ ಲ್ಸ್’ ಸಿನಿಮಾ ಈಗಾಗಲೇ ₹ 200 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕಾಶ್ಮೀರ ಫೈಲ್ಸ್ ಧ್ರುವೀಕರಣದ ಚಲನಚಿತ್ರ ಎಂಬ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ವಿವೇಕ್, “ನೀವು ಕೆಟ್ಟ ಮತ್ತು ಒಳ್ಳೆಯದರ ನಡುವೆ ಧ್ರುವೀಕರಿಸುವುದು ಪ್ರಜಾಪ್ರಭುತ್ವಕ್ಕೆ ಉತ್ತಮ ಸೇವೆಯಾಗಿದೆ. ವಾಸ್ತವವಾಗಿ, ನಾನು ಧ್ರುವೀಕರಣ ಎಂಬ ಪದವನ್ನು ಬಳಸುವುದಿಲ್ಲ, ಮಾನವೀಯತೆಯ ಪರವಾಗಿರುವ ಜನರು, ಮಾನವೀಯ ಮೌಲ್ಯಗಳು ಮತ್ತು ಮಾನವ ಹಕ್ಕುಗಳಲ್ಲಿ ನಂಬಿಕೆಯಿರುವ ಜನರು ಮತ್ತು ಭಯೋತ್ಪಾದನೆಯಿಂದ ಬಂದ ಜನರನ್ನು ಪ್ರತ್ಯೇಕಿಸಿ ಮತ್ತು ವಿಭಾಗಿಸಿ ಎಂದು ನಾನು ಹೇಳುತ್ತೇನೆ. ಭಯೋತ್ಪಾದಕರಿಗೆ ಸೈದ್ಧಾಂತಿಕ ಅಥವಾ ಬೌದ್ಧಿಕ ಬೆಂಬಲ ನೀಡುವ ಜನರು ಸಣ್ಣ ಪ್ರಮಾಣದವರು. ನಮ್ಮಲ್ಲಿ ಮಾನವೀಯತೆಯನ್ನು ನಂಬುವ ದೊಡ್ಡ ಸಂಖ್ಯೆಯ ಜನರಿದ್ದಾರೆ ಎಂದು ಹೇಳಿದ್ದಾರೆ.
“ಈ ಚಿತ್ರವನ್ನು ನೋಡಿದ 2 ಕೋಟಿ ಜನರಲ್ಲಿ ಈ ಚಿತ್ರವನ್ನು ಧ್ರುವೀಕರಣದ ಚಿತ್ರ ಎಂದು ಹೇಳುವ ಒಬ್ಬ ವ್ಯಕ್ತಿಯೂ ನಿಮಗೆ ಸಿಗುವುದಿಲ್ಲ. ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವವರೇ ಚಿತ್ರವನ್ನು ಟೀಕಿಸುತಿದ್ದಾರೆ. ಕಾಶ್ಮೀರ ಫೈಲ್ಸ್ ಅದನ್ನು ವಿಭಜಿಸುತ್ತಿಲ್ಲ ಅಥವಾ ಧ್ರುವೀಕರಿಸುತ್ತಿಲ್ಲ. ರಾಮ ಮತ್ತು ರಾವಣನ ನಡುವೆ ವ್ಯತ್ಯಾಸವಿದೆ ಅದನ್ನು ನಾವು ಪ್ರತ್ಯೇಕಿಸುತಿದ್ದೇವೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸಿನಿಮಾವನ್ನು ಟೀಕಿಸುವವರಿಗೆ ಏನಾದರೂ ಹೇಳಲು ಬಯಸುತ್ತೀರಾ ಎಂದು ಕೇಳಿದಾಗ, ವಿವೇಕ್, “ನಾನು ಭಯೋತ್ಪಾದಕರಿಗೆ ಏನನ್ನಾದರು ಏಕೆ ಹೇಳಬೇಕು?” ಎಂದು ಮರು ಪ್ರಶ್ನಿಸಿದ್ದಾರೆ.
ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಚಿತ್ರವನ್ನು ಶ್ಲಾಘಿಸಿದ್ದಾರೆ. ಅಮೀರ್ ಖಾನ್ ಅವರು ಚಲನಚಿತ್ರವನ್ನು ವೀಕ್ಷಿಸಲು ಪ್ರತಿಯೊಬ್ಬ ಭಾರತೀಯರನ್ನು ಕೇಳಿಕೊಂಡಿದ್ದಾರೆ. ಅಷ್ಟೇ ಜನರು ಈ ಚಿತ್ರವನ್ನು ಸುಳ್ಳಿನಿಂದ ಚಿತ್ರಿಸುದ ಸಿನಿಮಾ ಎಂದು ಟೀಕಿಸುತ್ತಿದ್ಧಾರೆ.