ಪ್ರತಿಯೊಬ್ಬರು ಆಹಾರವನ್ನು ಸೇವಿಸುವುದು ಹಸಿವನ್ನು ತಡೆಯೋಕೆ, ಹಾಗೂ ದೇಹಕ್ಕೆ ತಾನು ಸೇವಿಸುವ ಆಹಾರ ಎಲ್ಲಾ ರೀತಿಯ ಪೋಷಕಾಂಶಗಳು, ಖನಿಜಾಂಶಗಳು ಹಾಗೂ ವಿಟಮಿನ್ಗಳನ್ನು ಒದಗಿಸುವುದಕ್ಕೆ.ಇದರಲ್ಲಿ ಯಾವುದಾದರು ಒಂದರ ಕೊರತೆ ಕಂಡರು ಆರೋಗ್ಯ ಸಮಸ್ಯೆಗಳು ಎದುರಾಗುವುದು ಕಂಡಿತ..ಅದರಲ್ಲೂ ವಿಟಮಿನ್ B12 ಕೊರತೆಯಾದರೆ ಏನೆಲ್ಲಾ ಆರೋಗ್ಯದಲ್ಲಿ ಏನೆಲ್ಲ ಏರುಪೇರಾಗುತ್ತದೆ ಅನ್ನುವ ಮಾಹಿತಿ ಹೀಗಿದೆ..

ರಕ್ತ ಹೀನತೆ
ದೇಹದಲ್ಲಿ ವಿಟಮಿನ್ ಬಿ12 ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಬಿ12 ದೇಹದಲ್ಲಿ ಹೆಲ್ದಿ ರೆಡ್ ಬ್ಲಡ್ ಸೆಲ್ಸ್ , ವೈಟ್ ಬ್ಲಡ್ ಸೆಲ್ಸ್ ಮತ್ತು ಪ್ಲೇಟ್ ಲೆಟ್ಸ್. ಹಾಗೂ ಪ್ರತಿದಿನ ಒಂದು ಪರ್ಸೆಂಟ್ ಅಷ್ಟು ಓಲ್ಡ್ ರೆಡ್ ಬ್ಲಡ್ ಸೆಲ್ಸ್ ಅನ್ನ ಡಿಸ್ಟ್ರಾಯ್ ಮಾಡಿ ನ್ಯೂ ಬ್ಲಡ್ ಸೆಲ್ಸ್ ಅನ್ನ ಪ್ರೊಡ್ಯೂಸ್ ಮಾಡುತ್ತದೆ. ದೆಹಲಿ ವಿಟಮಿನ್ ಬಿ 12 ಕೊರತೆ ಆದರೆ ಡಿ ಎನ್ ಎ ಹಾರ್ಡ್ ಆಗುತ್ತದೆ ಮತ್ತು ಅನಿಮಿಯ ಶುರುವಾಗುತ್ತದೆ. ರಕ್ತಹೀನತೆಗೆ ಪ್ರಮುಖ ಕಾರಣವಾಗುತ್ತದೆ.

ಮೂಳೆಯ ಆರೋಗ್ಯ
ದೇಹದಲ್ಲಿ ವಿಟಮಿನ್ ಬಿ12 ಕೊರತೆಯಿಂದಾಗಿ ಮೂಳೆಗಳ ಆರೋಗ್ಯ ಹಾಳಾಗುತ್ತದೆ ಅದರಲ್ಲೂ ಕೂಡ ಮೂಳೆ ಸವಿಯುವಂತೆ ಅಥವಾ ಚಿಕ್ಕಪುಟ್ಟ ಏಟಿಗೆ ಫ್ರಾಕ್ಚರ್ ಆಗುವಂಥದ್ದು ಹೆಚ್ಚಾಗುತ್ತದೆ.

ಮೆದುಳಿನ ಆರೋಗ್ಯ ಹದಗೆಡುತ್ತದೆ
ವಿಟಮಿನ್ ಬಿ12 ಕಡಿಮೆಯಾದಲ್ಲಿ ಮುಖ್ಯವಾಗಿ ಕಾನ್ಸನ್ಟ್ರೇಷನ್ ಪ್ರಾಬ್ಲಮ್ ಶುರುವಾಗುತ್ತೆ ಮೆಮೊರಿ ಪವರ್ ಕಮ್ಮಿ ಆಗುತ್ತದೆ. ಹಾಗೂ ಹೆಚ್ಚು ಜನ ಮೂಡ್ ಸ್ವಿಂಗ್ಸ್ ಗೆ ಒಳಗಾಗುತ್ತಾರೆ ಡಿಪ್ರೆಶನ್ ಇರಿಟೇಶನ್ ಎಲ್ಲವೂ ಕೂಡ ಶುರುವಾಗುತ್ತದೆ. ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಎದುರಾಗುತ್ತದೆ.

ಬಾಯಿ ಮತ್ತು ಕರುಳಿನ ಆರೋಗ್ಯದಲ್ಲಿ ಏರುಪೇರು
ಬಾಯಲ್ಲಿ ಹುಣ್ಣಾಗುವಂತಹ ಚಾನ್ಸಸ್ ಹೆಚ್ಚಿರುತ್ತದೆ .ಹಾಗೂ ನಾಲಿಗೆಯಲ್ಲಿ ಉರಿಯುತದ ಲಕ್ಷಣಗಳು ಕಾಣಿಸುತ್ತದೆ, ಮತ್ತು ಕರುಳಿನ ಸಮಸ್ಯೆ ಎಂದರೆ ಡೈಜೆಶನ್ ಪ್ರಾಬ್ಲಮ್ ಶುರುವಾಗುತ್ತದೆ ಮಲಬದ್ಧತೆ, ಅತಿಸಾರ ಕೂಡ ಎದುರಾಗುತ್ತದೆ.

ತ್ವಚೆಗೆ ಹಾನಿ
ಮುಖ್ಯವಾಗಿ ವಿಟಮಿನ್ ಬಿ12 ಕಡಿಮೆ ಆದಲ್ಲಿ, ಹೈಪರ್ ಪಿಗ್ಮೆಂಟೇಶನ್ ನಿಮ್ಮ ತ್ವಚೆಯಲ್ಲಿ ಕಾಣಿಸಿಕೊಳ್ಳುತ್ತದೆ .ವೈಟ್ ಪ್ಯಾಚಸ್, ಬಾಯಲ್ಲಿ ಹುಣ್ಣು ,ಮುಖದಲ್ಲಿ ಗುಳ್ಳೆಗಳು ಅಥವಾ ಪಿಂಪಲ್ಸ್ ಹೆಚ್ಚಾಗುತ್ತದೆ.

ಹಾಗೂ ಇದೆಲ್ಲದರ ಜೊತೆಗೆ ಹೆಚ್ಚು ಜನಕ್ಕೆ ಕೂದಲು ಉದುರುವುದು ಕೂಡ ಜಾಸ್ತಿಯಾಗುತ್ತದೆ ಹಾಗೂ ಉಗುರುಗಳ ಹಳದಿ ಅಥವಾ ಬ್ರೌನ್ ಕಲರ್ ಗೆ ತಿರುಗುತ್ತದೆ.. ಬಹಳ ತೆಳುವಾದ ಉಗುರು ನಿಮ್ಮದಾಗುತ್ತದೆ.