ಟಾಲಿವುಡ್ನ ಭರವಸೆಯ ನಾಯಕ ನಟ ಎಂದೇ ಖ್ಯಾತಿ ಪಡೆದಿರುವ ನಟ, ನಿರ್ದೇಶಕ ವಿಶ್ವಕ್ ಸೇನ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಧಮ್ಕಿ ಹಾಕಲು ಸಜ್ಜಾಗುತ್ತಿದ್ದಾರೆ.
ಫಲಕ್ನುಮಾ ದಾಸ್ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ವಿಶ್ವಕ್ ಈಗ ದಾಸ್ ಕಾ ಧಮ್ಕಿ ಚಿತ್ರದ ಮೂಲಕ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ.
ದಾಸ್ ಕಾ ಧಮ್ಕಿ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಆಕ್ಷನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿರಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಶೇ 95ರಷ್ಟು ಚಿತ್ರೀಕರಣವನ್ನ ಮುಗಿಸಿರುವ ಚಿತ್ರತಂಡ ಇನ್ನುಳಿದ ಭಾಗವನ್ನ ಈ ತಿಂಗಳೊಳಗೆ ಮಾಡಿ ಮುಗಿಸುವ ಯೋಜನೆ ಹಾಕಿಕೊಂಡಿದೆ.
ಇನ್ನು ದೀಪಾವಳಿಗೆ ಚಿತ್ರತಂಡ ಫರ್ಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ಯೋಜನೆ ರೂಪಿಸಿದೆ. ಚಿತ್ರದಲ್ಲಿ ವಿಶ್ವಕ್ ಜೊತೆಗೆ ರಾವ್ ರಮೇಶ್, ಹೈಪರ್ ಆದಿ, ರೋಹಿಣಿ ಹಾಗೂ ಪೃಥ್ವಿರಾಜ್ ಸೇರಿದಂತೆ ಅನೇಕರು ಚಿತ್ರದ ತಾರಬಳಗದಲ್ಲಿದ್ದಾರೆ.
ಚಿತ್ರಕ್ಕೆ ವಿಶ್ವಕ್ ಸೇನ್ ಆಕ್ಷನ್ ಕಟ್ ಹೇಳಿದ್ದು ಮನ್ಮಯಿ ಕ್ರಿಯೇಷನ್ಸ್ ಹಾಗೂ ವಿಶ್ವಕ್ ಸೇನ್ ಸಿನಿಮಾಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.