ಹಿಂದೂಗಳ ಹೆಸರು ಬಳಸಿ ಉಗ್ರ ಕೃತ್ಯ ಎಸಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದುಷ್ಕೃತ್ಯ ಎಸಗುವವರು ಹಿಂದೂ ಸಮಾಜದ ಮೇಲೆ ಅದನ್ನು ಹೇರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಎಚ್ಚರಿಸಿದ್ದಾರೆ.
ಮೊಬೈಲ್ ಅಥವಾ ದಾಖಲೆಗಳು ಕಳುವಾದಲ್ಲಿ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು. ಕುಕ್ಕರ್ ಬಾಂಬ್ ಸ್ಫೋಟದಿಂದಾಗಿ ಕರಾವಳಿಯಲ್ಲಿ ಇನ್ನು ಉಗ್ರ ಕೃತ್ಯಗಳಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸಂದೇಹಸ್ಪದ ಚಟುವಟಿಕೆ ಕಂಡ ಕೂಡಲೇ ಜನರು ಎಚ್ಚೆತ್ತುಕೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಅನಾಹುತ ನಡೆದರೆ ಸಮಾಜಕ್ಕೆ ದೊಡ್ಡ ಹಾನಿಯಾಗುತ್ತದೆ ಹೀಗಾಗಿ ಪೊಲೀಸ್ ಇಲಾಖೆ ಭದ್ರತೆ ಹೆಚ್ಚಿಸಬೇಕು ಎಂದು ಮಾತನಾಡುವ ವೇಳೆ ಆಗ್ರಹಿಸಿದ್ದಾರೆ.