ಕೋವಿಡ್ ಸಂಕಟದಲ್ಲಿ ಹಲವು ಸಂಸ್ಥೆಗಳು ಮುಂದೆ ಬಂದು ಸಾವಿರಾರು ಕಿಟ್ ಗಳನ್ನು ಹಂಚಿದರು. ಬಹುತೇಕರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಅಂತವರಲ್ಲಿ ವಿನ್ ಶಿ ಸಂಸ್ಥೆ ಯೂ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಉತ್ತರ ಕರ್ನಾಟಕದ ಅನೇಕ ಉದ್ಯೋಸ್ಥರು ಬೆಂಗಳೂರಿನಲ್ಲಿ ಸಂಕಟದಲ್ಲಿರುವಾಗ ಕೈಚಾಚಿದ್ದು ವಿನ್ ಶಿ ಸಂಸ‍್ಥೆ. ಲಾಕ್ ಡೌನ್ ಸಮಯದಲ್ಲಿ ರಾಜರಾಜೇಶ್ವರಿನಗರದ ಸುತ್ತಮುತ್ತಲಿನ ಹತ್ತಾರು ಕಿಮಿಗಳಲ್ಲಿ ವಾಸಿಸುವ ಕೋವಿಡ್ ಸಂತ್ರಸ್ಥರಿಗೆ ಉಚಿತ ಆಹಾರ ವಿತರಿಸಿದರು.
ಇದು ಒಂದೆ ಬಾರಿ ಮುಗಿಯಲಿಲ್ಲ, ಲಾಕ್ ಡೌನ್ ಮುಗಿದ ಮೇಲೂ ನವಲಗುಂದದ ಶಿರೊಳ ಗ್ರಾಮದಲ್ಲಿ ಕಾರ್ಯ ನಿರಂತರವಾಗಿ ಸಾಗುತ್ತಿದೆ. ನನ್ನ ಊರು ನನ್ನ ಜನ ಈ ಕಾರ್ಯಕ್ರಮದಡಿಯಲ್ಲಿ ಇನ್ನೂ ಅನೇಕ ಯೋಜನೆ ಗಳು ಸಿದ್ಧಗೊಂಡಿವೆ. ಇದು ನಮ್ಮ ಕೈ ಲಾದ ಅಲ್ಪ ಮಟ್ಟಿನ ಸಹಾಯ, ಎನ್ನುತ್ತಾರೆ ವಿನಯ್ ಮತ್ತು ಶಿಲ್ಪಾ ಶಿರಹಟ್ಟಿಮಠ.
ವಿನ್ ಶಿ ಸಂಸ್ಥೆಯಿಂದ ಇನ್ನೂ ಕೆಲವೇ ದಿನಗಳಲ್ಲಿ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಆರಂಭವಾಗುತ್ತಿವೆ. ಇದಕ್ಕಾಗಿ ಉತ್ತಮ ತರಬೇತುದಾರರನ್ನು ನೇಮಿಸಲಾಗಿದೆ. ಮಹಿಳೆಯರು ತರಬೇತಿ ಮುಗಿದ ನಂತರ ಅರ್ಥಿಕ ಸ್ವಾವಲಂಬಿಗಳಾಗಲು ಅನೇಕ ಪರ್ಸನಾಲಿಟಿ ಡೆವೆಲೆಪ್ ಮೆಂಟ್ ಶಿಬಿರಗಳನ್ನು ಹೊಲಿಗೆ ತರಬೇತಿ ಶಿಬಿರದಲ್ಲಿ ನಡೆಸಲಾಗುವುದು ಎಂದು ಶಿಲ್ಪಾತಿಳಿಸಿದರು.
ಹಾಂ.. ವಿನ್ ಶಿ ಸಂಸ್ಥೆಯಿಂದ ಅಶಕ್ತ ಮಹಿಳೆ ಮತ್ತು ಮಕ್ಕಳಿಗಾಗಿ ಪೌಷ್ಟಿಕ ಪೌಡರ್ ತಯಾರಿಸುವುದುನ್ನು ಕಲಿಸಿಕೊಡಲಾಗಿತ್ತದೆ. ಇದರ ಉದ್ದೇಶ ಮಹಿಳಾ ಸಬಲೀಕರಣ ಮತ್ತು ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಈ ಪೌಡರ್ ಮುಟ್ಟಲಿ. ಸೆಪ್ಟೆಂಬರ್ ನಲ್ಲಿ ಮೂರನೆಯ ಅಲೆ ಬರುತ್ತೆ ಎಂದು ಹೇಳಲಾಗುತ್ತದೆ. ಅದು ಬರಲಿ ಬಿಡಲಿ ಎಲ್ಲರಿಗೂ ಪೌಡರ್ ಸಿಗಲಿ ಭಯ ಬೆಡ ಜಾಗೃತಿ ಇರಲಿ ಎನ್ನುತ್ತಾರೆ ವಿನಯ್ ಶಿರಹಟ್ಟಿಮಠ.
ಎಲ್ಲ ಶಾಲೆಗಳು ಆರಂಭವಾದ ಕೂಡಲೇ ಪ್ರತಿ ಕ್ಲಾಸಿನಲ್ಲಿಯೂ ವಿನ್ ಶಿ ಸಂಸ್ಥೆಯಿಂದ ುಚಿತ ಕಂಪ್ಯೂಟರ್ ಕೋಚಿಂಗ್ ಮತ್ತು ಡಿಜಿಟಲ್ ಲಿಟರೆಸಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮಹಿಳೆಯರಿಗೆ ಹೋಮ್ ನರ್ಸಿಂಗ್ ತರಬೇತಿ, ಕೋವಿಡ್ ಬಗ್ಗೆ ಅರಿವು, ಲಸಿಕೆ ಬಗ್ಗೆ ತಿಳಿವಳಿಕೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಬರಲಿವೆ.

ವಿನ್ ಶಿ ಸಂಸ್ಥೆ ಎನೇನು ಮಾಡಿದೆ?
ವಿನ್ ಶಿ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಜನೇವರಿಯಲ್ಲಿ ಆಯೋಜಿಸಿದ ನನ್ನ ಊರು ನನ್ನ ಜನ ಕಾರ್ಯಕ್ರಮದಲ್ಲಿ 130 ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಲಾಯಿತು. ಫೆಬ್ರುವರಿಯಲ್ಲಿ 180 ಕ್ಕೂ ಅಧಿಕ ಜನರಿಗೆ ಕಣ್ಣಿನ ತಪಾಸಣೆ ಹಾಗೂ ಅವಶ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಮಾರ್ಚ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ 161 ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಅದರಲ್ಲಿ 56 ಮಹಿಳೆಯರಿಗೆ ಗರ್ಭಕೋಶ ತಪಾಸಣೆ ಮಾಡಿ 10 ಮಹಿಳೆಯರಿಗೆ ಕಾಲ್ಪೊಸ್ಕೋಪಿಗೆ ರೆಫರ್ ಮಾಡಲಾಯಿತು. 3 ಮಹಿಳೆಯರಿಗೆ ಹುಬ್ಬಳ್ಳಿಯ ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಕೋವಿಡಾತಂಕದ ಮಧ್ಯೆಯೂ ಗ್ರಾಮಸ್ಥರಿಗೆ ಸಹಾಯ ಮಾಡಲು ಮುಂದೆ ಬಂದ ಶಿರೂರ ವಾರಿಯರ್ಸ್
ಕೋವಿಡ್ ಒಂದು ಎರಡು ಅಲೆಗಳು ಬಂದವು. ಈಗ ಮೂರನೇಯ ಅಲೆಯ ಆತಂಕ. ಇಂಥ ಸಮಯದಲ್ಲಿ ನಗರಗಳಲ್ಲಿ ಒಂದು ಬಿಟ್ಟು ಇನ್ನೊಂದು ಆಸ್ಪತ್ರೆ ಇರುತ್ತವೆ. ಆದರೆ ಹಳ್ಳಿಗಳಲ್ಲಿ ಜನರು ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸಬೇಕು. ನವಲಗುಂದದ ಶಿರೂರನಲ್ಲಿ ಮೆಡಿಕಲ್ ಕ್ಯಾಂಪ್ ಗಳು ವಿನ್ ಶಿ ಎಂಬ ಬೆಂಗಳೂರು ಮೂಲದ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದ್ದವು. ನಂತರ ಮತ್ತೇ ಕೋವಿಡ್ ರಾಕ್ಷಸನ ಅಟ್ಟಹಾಸ. ಆದರೂ ಮೆಡಿಕಲ್ ಕ್ಯಾಂಪ್ ಮುಂದು ವರೆಸಬೇಕೆಂಬ ಸದಿಚ್ಛೆ ವಿನ್ ಶಿ ಸಂಸ್ಥೆಯದು. ತಕ್ಷಣವೇ ಶಿರೂರಿನ ನಾಗಪ್ಪ ಮ ಪಟ್ಟಣ ಹಾಗೂ ಗ್ರಾಮದ ಆಸ್ಪತ್ರೆ ನರ್ಸ್ ದೀಪಾ ಅವರು ಮುಂದೆ ಬಂದು ಕೋವಿಡಾತಂಕದ ಮಧ್ಯೆಯೂ ಆರೋಗ್ಯ ಶಿಬಿರವನ್ನು ನಡೆಸಿದರು. 3 ನೇ ಅಲೆ ಭಯ ಇರುವಾಗ ಗ್ರಾಮದಲ್ಲಿ ಬೇರೆ ಆರೋಗ್ಯ ಶಿಬಿರಗಳೇ ನಡೆಯುದಿಲ್ಲ ಎಂಬ ಚಿಂತೆಗೀಡಾಗಿದ್ದ ಗ್ರಾಮಸ್ಥರಿಗೆ ಕೊಂಚ ನಿರಾಳವಾಯಿತು. ವಿನಯ್ ಶಿಲ್ಪಾ ದಂಪತಿಗಳ ಕಾರ್ಯದಿಂದ ಪ್ರೇರಿತರಾಗಿ ಹಲವರು ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.
ನಾಗಪ್ಪ ಪಟ್ಟಣ ಮತ್ತು ನರ್ಸ್ ದೀಪಾ ಅವರು ಗ್ರಾಮಸ್ಥರಿಗೆ ಮನೋಸ್ಥೈರ್ಯ ತುಂಬಿ ಕೋವಿಡೆತರ ಆರೋಗ್ಯ ಸಮಸ್ಯೆಗಳಿಗೂ ಸ್ಪಂದಿಸಿದರು. ಅವರು ಸೂಕ್ತ ಮಾತ್ರೆ ನೀಡಿದರು. ಹಲವು ಸಣ್ಣ ಸಣ್ಣ ಆಸ್ಪತ್ರೆಗಳು ಭಯದಿ ಬಾಗಿಲು ಹಾಕಿರುವಂತ ದಿನಗಳಲ್ಲಿ ಈ ಇಬ್ಬರ ಸೇವೆ ಜನರಿಗೆ ಅನುಕೂಲವಾಯಿತು. ಇರಬೇಕು ಇಂಥವರು ಅಲ್ಲವೇ