• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಸಿಂಗಪುರ ಕನ್ನಡ ಸಂಘದ ವಚನಾಂಜಲಿ ಕಾರ್ಯಕ್ರಮದಲ್ಲಿ ʼವಿರಾಟಪುರ ವಿರಾಗಿʼ ಪ್ರದರ್ಶನ

ಪ್ರತಿಧ್ವನಿ by ಪ್ರತಿಧ್ವನಿ
August 27, 2023
in ಇದೀಗ, ಕರ್ನಾಟಕ
0
ವಚನಾಂಜಲಿ

ವಚನಾಂಜಲಿ ಕಾರ್ಯಕ್ರಮ

Share on WhatsAppShare on FacebookShare on Telegram

ಸುಮಾರು ನಾಲ್ಕಾರು ದಶಕಗಳಿಂದ ಕನ್ನಡಿಗರು ಸಿಂಗಾಪೂರದಲ್ಲಿ ನೆಲೆಸಿದ್ದಾರೆ, ಕನ್ನಡಿಗರು ಸಂಘ ಜೀವಿಗಳು ಮತ್ತು ತಮ್ಮ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ಭಾಷೆ ನಮ್ಮ ಅಸ್ಮಿತೆಯೆಂದು ನಂಬಿರುವವರು. ಈ ಹಿನ್ನೆಲೆಯಲ್ಲಿ 11ನೇ ಸೆಪ್ಟೆಂಬರ್ 1996 ರಂದು ಸಿಂಗಾಪೂರದ ರಿಜಿಸ್ಟ್ರಾರ್ ಆಫ್ ಸೊಸೈಟಿಯಲ್ಲಿ ನೊಂದಾಯಿಸುವ ಮೂಲಕ ಕನ್ನಡ ಸಂಘ ಉದಯವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ವಚನಾಂಜಲಿ ಸೇರಿದಂತೆ ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದ್ದಾರೆ.

ADVERTISEMENT

ಕನ್ನಡ ಸಂಘ (ಸಿಂಗಪುರ)ವು ವಚನ ಸಾಹಿತ್ಯದ ಸಾರಾಮೃತವನ್ನು ಹರಡುವ, ಹಂಚುವ ಸದುದ್ದೇಶದಿಂದ ಸುಮಾರು 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವೇ ವಚನಾಂಜಲಿ. ಪ್ರತೀ ವರ್ಷ ವಿವಿಧ ರೂಪಗಳಲ್ಲಿ ಆಚರಿಸಿಕೊಂಡು ಬಂದಂತಹ ವಚನಾಂಜಲಿ, ಶಾಸ್ತ್ರೀಯ ಸಂಗೀತ, ಜನಪದ ಶೈಲಿಯ ಹಾಡುಗಳ ಮೂಲಕ, ಭರತ ನಾಟ್ಯದಲ್ಲಿನ ನೃತ್ಯ ರೂಪಕಗಳಲ್ಲಿ, ಸಾಂಸ್ಕೃತಿಕವಾಗಿ ಆಚರಿಸಿಕೊಂಡು ಬಂದಿರುವುದು ಒಂದೆಡೆಯಾದರೆ, ಸಾಹಿತ್ಯದ ಒಳ ಅರಿವನ್ನು ಅರಿಯುವ ಹಾದಿಯಲ್ಲಿ ವಿಚಾರ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳ ಮೂಲಕ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಶ್ರೀಯುತರಾದಂತಹ ಅರವಿಂದ ಜತ್ತಿ, ವೈಜಯಂತಿ ಕಾಶಿ, ಲೀಲಾದೇವಿ ಪ್ರಸಾದ್, ಗೋ. ರು ಚನ್ನಬಸಪ್ಪ, ಪುತ್ತೂರು ನರಸಿಂಹ ನಾಯಕ, ಡಾ. ರೇಣುಕಾ ಗುಬ್ಬಿ, ವಿದ್ವಾನ್ ಕಲಾ ಸುಜಯ್ ಶಾನಭಾಗ್ , ಡಾ. ಬಸವ ಮರುಳ ಸಿದ್ದ ಸ್ವಾಮಿ, ಡಾ. ವೀಣಾ ಬನ್ನಂಜೆಯಂತಹ ಗಣ್ಯವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆಂಬುದು ಕನ್ನಡ ಸಂಘ (ಸಿಂಗಪುರ)ವು ಹೆಮ್ಮೆ ಪಡುವಂತಹ ವಿಷಯ.

ವಚನಾಂಜಲಿ
ವಚನಾಂಜಲಿ ಕಾರ್ಯಕ್ರಮ

ಈ ಬಾರಿ ವಚನಾಂಜಲಿಯನ್ನು ವಿಶೇಷವಾಗಿ ಆಯೋಜಿಸುವಾಗ ಬಂದಂತಹ ಚರ್ಚೆಯಲ್ಲಿ, ಶಿವಯೋಗಿಗಳಾದ ಶ್ರೀ ಹಾನಗಲ್ ಕುಮಾರಸ್ವಾಮಿಯವರ ಜೀವನಾಧಾರಿತ ಚಲನಚಿತ್ರ “ವಿರಾಟಪುರ ವಿರಾಗಿ”ಯ ಪ್ರದರ್ಶನವನ್ನು ಏರ್ಪಡಿಸಿದರೆ ಹೇಗೆ? ಎಂಬ ಪ್ರಶ್ನೆಯೊಂದಿಗೆ ಆರಂಭಗೊಂಡ ಒಂದು ಆಲೋಚನೆ ಕೆಲವೇ ದಿನಗಳಲ್ಲಿ ಆಯೋಜನೆಯಾಗಿ ಬದಲಾಗಿ, ಜೊತೆಗೆ ಈ ಚಿತ್ರವನ್ನು ಒಂದು ಯಜ್ಞದಂತೆ ಮೂರು ವರ್ಷಗಳ ಕಾಲ ಆಳವಾದ ಅಧ್ಯಯನವನ್ನು ಮಾಡಿ ತಯಾರಿಸಿದ ನಿರ್ದೇಶಕರಾದಂತಹ ಬಿ.ಎಸ್.ಲಿಂಗದೇವರು ಹಾಗು ಅದರ ಮುಖ್ಯ ಪಾತ್ರಧಾರಿಯಾಗಿ ನಟಿಸಿದ ಕಲಾವಿದ ಕೆ.ಸುಚೇಂದ್ರ ಪ್ರಸಾದ ಅವರ ಸಮ್ಮುಖದಲ್ಲಿ ನಡೆಸಿದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆಂದು ಕನ್ನಡ ಸಂಘ (ಸಿಂಗಪುರ)ದ ಆಶಯ ಕೊನೆಗೂ ಯಶಸ್ವಿ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು ನಿಜಕ್ಕೂ ಅಭಿನಂದನೀಯ.

ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಹನ್ನೆರಡನೆಯ ಶತಮಾನದ ಶಿವಶರಣರು ಶ್ರಮಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶರಣರು ಸಾಹಿತ್ಯ ರಚಿಸಬೇಕೆಂಬ ಉದ್ದೇಶದಿಂದ ವಚನಗಳನ್ನು ಬರೆಯದೆ ದಿನನಿತ್ಯದ ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಹೇಳಿದ್ದರಿಂದ ವಚನ ಸಾಹಿತ್ಯ ಒಂದು ಚಳಿವಳಿಯಾಯಿತು ಎಂಬುದು ಇತಿಹಾಸ. ವರ್ಣ-ಆಧಾರಿತ, ಜಾತಿ ಆಧಾರಿತ, ಲಿಂಗ-ಆಧಾರಿತ ಅಸಮಾನತೆಯನ್ನು ನಿರ್ಮೂಲಗೊಳಿಸಿ ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಶಿವ ಶರಣರು. ಈ ಹಿನ್ನಲೆಯಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಯವರು ಎಲ್ಲರನ್ನು ಒಳಗೊಳ್ಳುವ ಮತ್ತು ಬಹುತ್ವ ಪರಂಪರೆಗೆ ಒತ್ತುಕೊಟ್ಟು ಸಮಸಮಾಜ ನಿರ್ಮಿಸಲು ಸ್ವಾತಂತ್ರ್ಯಪೂರ್ವದಲ್ಲಿ ಶ್ರಮಿಸಿದವರು. ಅಂತಹವರ ಜೀವನಾಧಾರಿತ “ವಿರಾಟಪುರ ವಿರಾಗಿ” ಸಿನೆಮಾವು ಶರಣರ ವಚನಗಳ ಅರ್ಥ ಮತ್ತು ಅಂತರಂಗದ ಅರಿವನ್ನು ನಮಗೆ ಮೂಡಿಸಿದೆ ಎಂದರೂ ತಪ್ಪಾಗಲಾರದು. ವಚನಗಳನ್ನು ಸನ್ನಿವೇಶಗಳಿಗೆ ಹೊಂದುವಂತೆ ಆಯ್ಕೆ ಮಾಡಿಕೊಂಡು, ಅದಕ್ಕೆ ಅತ್ಯತ್ತಮ ಸಂಗೀತ ಸಂಯೋಜನೆ ಮಾಡಿರುವುದು ಪ್ರೆಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಹಾಯವಾಗಿದೆ. ಇಡೀ ತಂಡವು ನಮ್ಮನ್ನು ಸ್ವಾತಂತ್ರ್ಯಪೂರ್ವಕಾಲಗಟ್ಟಕ್ಕೆ ಕೊಂಡಯ್ಯುವಲ್ಲಿ ಯಶಸ್ವಿಯಾಗಿದ್ದು, ಜನಸಾಮಾನ್ಯರನ್ನು ಆಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭಾವದ ಚಿಂತನೆಗೆ ತೊಡಗಿಸಲು ಈ ಚಿತ್ರ ಕನ್ನಡಿಗರ ಹೆಮ್ಮೆಯ ಚಿತ್ರವಾಗಿದೆ.

ತುಂಬಿದ ಸಭಾಂಗಣದಲ್ಲಿ ʼವಿರಾಟಪುರ ವಿರಾಗಿʼ ಚಲನಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಬಗೆಗಿನ ವಿಚಾರ ಗೋಷ್ಠಿ, ವಚನ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕೊನೆಯಲ್ಲಿ ದಾಸೋಹದೊಂದಿಗೆ ಅನೇಕ ವಿಚಾರಗಳ ವಿವರಣೆ, ವಿಮರ್ಶೆ, ವಿತರಣೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡಿತು.

Tags: Singapore Kannada SamghaVachananjaliviratapura viragiವಚನಾಂಜಲಿವಿರಾಟಪುರ ವಿರಾಗಿಸಿಂಗಪುರ ಕನ್ನಡ ಸಂಘ
Previous Post

ಚಂದ್ರಯಾನ 3 ನವ ಭಾರತದ ಚೈತನ್ಯದ ಸಂಕೇತ: ಪ್ರಧಾನಿ ನರೇಂದ್ರ ಮೋದಿ

Next Post

ʼಇಂಡಿಯಾʼ ಮೈತ್ರಿಕೂಟಕ್ಕೆ ಮತ್ತಷ್ಟು ಪಕ್ಷಗಳು ಸೇರಲಿವೆ: ನಿತೀಶ್‌ ಕುಮಾರ್

Related Posts

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು
ಕರ್ನಾಟಕ

ವಂಡರ್‌ಲಾದಲ್ಲಿ ಥ್ರಿಲ್ ರೈಡ್ ಅಡಚಣೆ: ಮಧ್ಯದಲ್ಲೇ ನಿಂತ ರೋಲರ್ ಕೋಸ್ಟರ್, ಕಂಗಾಲಾದ ಪ್ರಯಾಣಿಕರು

by ಪ್ರತಿಧ್ವನಿ
April 16, 2026
0

ಬೆಂಗಳೂರು ಹೊರವಲಯದ ಜನಪ್ರಿಯ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್‌ಲಾ ನಲ್ಲಿ ರೋಮಾಂಚಕಾರಿ ರೈಡ್ ಮಧ್ಯದಲ್ಲೇ ನಿಂತು ಪ್ರಯಾಣಿಕರು ಕೆಲಕಾಲ ಆತಂಕಕ್ಕೀಡಾದ ಘಟನೆ ಬೆಳಕಿಗೆ ಬಂದಿದೆ. ತಾಂತ್ರಿಕ ದೋಷ ಅಥವಾ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ನಿತೀಶ್‌ ಕುಮಾರ್

ʼಇಂಡಿಯಾʼ ಮೈತ್ರಿಕೂಟಕ್ಕೆ ಮತ್ತಷ್ಟು ಪಕ್ಷಗಳು ಸೇರಲಿವೆ: ನಿತೀಶ್‌ ಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada