ಇಂಟರ್ನೆಟ್ (internet) ಜಮಾನ ಶುರುವಾದಾಗಿನಿಂದ ಒಂದಲ್ಲ ಒಂದು ವಿಚಿತ್ರ ಹಾಗೂ ತರಹೆವಾರಿ ವಿಡಿಯೋಗಳು ( videos) ಸಾಮಾಜಿಕ ಜಾಲತಾಣದಲ್ಲಿ (social media) ಸಿಕ್ಕಾಪಟ್ಟೆ ವೈರಲ್ (viral) ಆಗುತ್ತಿದೆ ಅದರಲ್ಲೂ ಆಹಾರಕ್ಕೆ (food) ಸಂಬಂಧಪಟ್ಟ ವಿಡಿಯೋಗಳು ಅಂದ್ರೆ ನೆಟ್ಟಿಗರು ಕುತೂಹಲದಿಂದ ನೋಡುತ್ತಾರೆ. ಇತ್ತೀಚಿಗಿನ ದಿನಗಳಲ್ಲಿ ಆಹಾರಕ್ಕೆ ಸಂಬಂಧಪಟ್ಟ ಯಾವುದೇ ವಿಡಿಯೋ ಆದರೂ ಕೂಡ ಜನರು ಕುತೂಹಲದಿಂದ ನೋಡುತ್ತಾರೆ. ಅದರಲ್ಲೂ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣವನ್ನು ನೋಡಿಕೊಂಡೆ ಅಡುಗೆ ಕಲಿಯುತ್ತಾರೆ.

ಇದೇ ಕಾರಣಕ್ಕೆ ಇದೀಗ ಸಾಕಷ್ಟು ಮಂದಿ ವಿವಿಧ ಅಹಾರಗಳ ವಿಮರ್ಶೆ (criticize) ಮಾಡಲು, ಎಲ್ಲೆಲ್ಲಿ ಯಾವೆಲ್ಲ ಆಹಾರಗಳು ಸಿಗುತ್ತವೆ ಅನ್ನೋ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುತ್ತಾರೆ. ಇದರಲ್ಲಿ ಉತ್ತಮ ಮತ್ತು ಅತ್ಯುತ್ತಮ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೆಂಡ್ ಆದ್ರೆ ಇನ್ನೂ ಕೆಲವೊಂದು ವಿಡಿಯೋಗಳು ವಿವಾದಕ್ಕೆ ( controversy) ಹಾಗೂ ಆಹಾರ ಪ್ರಿಯರ ಆಕ್ರೋಶಕ್ಕೆ ಕೂಡ ಕಾರಣವಾಗುತ್ತವೆ.

ಹೌದು ಇತ್ತೀಚಿನ ದಿನಗಳಲ್ಲಿ ಆಹಾರ ಪ್ರಿಯರ ಆಕ್ರೋಶಕ್ಕೆ ಕಾರಣವಾಗುವ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ. ಇದಕ್ಕೆ ಕಾರಣ ಸೂಕ್ತವಲ್ಲದ ಆಹಾರ ಮಿಶ್ರಣ ಪದ್ಧತಿಗಳು, ಅಂದ್ರೆ ಚಾಕಲೇಟ್ ನಲ್ಲಿ ತಯಾರಿಸಿದ ಪಾನಿಪುರಿ, ಮಾವಿನ ಹಣ್ಣಿನೊಂದಿಗೆ ಬೆರೆಸಿದ ಮ್ಯಾಗಿ, ಚಾಕಲೇಟ್‌ನೊಂದಿಗೆ ಬರೆಸಿದ ಇಡ್ಲಿ ಸೇರಿದ ಹಾಗೆ ನಾನಾ ತರಹದ ವಿಲಕ್ಷಣ ಮಿಶ್ರಣ ಆಹಾರಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ವು.

ಇದೀಗ ಅಂತಹದ್ದೇ ವಿಚಿತ್ರ ಆಹಾರ ಒಂದು ವೈರಲ್ ಆಗಿದೆ ಇದು ಗುಲಾಬ್ ಜಾಮೂನ್ ಪ್ರಿಯರ ಆಕ್ರೋಶಕ್ಕೆ ಕೂಡ ಕಾರಣವಾಗಿದೆ. ಈ ವೈರಲ್ ವಿಡಿಯೋದಲ್ಲಿ ಫುಡ್ ವ್ಲಾಗರ್ ಒಬ್ಬ ರಸ್ತೆಯ ಬದಿಯಲ್ಲಿ ಆಹಾರ ಮಾರುವ ಅಂಗಡಿಯ ಬಳಿ ತೆರುಳುತ್ತಾನೆ. ಅಂಗಡಿಯಲ್ಲಿನ ವಿಶೇಷ ಖಾದ್ಯಗಳ ಬಗ್ಗೆ ತಿಳಿದುಕೊಳ್ಳೋ ಆತನಿಗೆ ಅಂಗಡಿ ಮಾಲಿಕ ಮೊಸರು ಮಿಶ್ರಿತ ಗುಲಾಬ್ ಜಾಮೂನ್ ತೋರಿಸುತ್ತಾನೆ. ಇದನ್ನ ನೋಡಿದ ಫುಡ್ ವ್ಲಾಗರ್ ಅಚ್ಚರಿಗೊಳ್ಳುತ್ತಾನೆ.

ಇದಾದ ಬಳಿಕ ಅಂಗಡಿ ಮಾಲೀಕ ಮೊಸರು ಮಿಶ್ರಿತ ಗುಲಾಬ್ ಜಾಮೂನ್ ತಮ್ಮ ಅಂಗಡಿಯಲ್ಲಿ ಎರಡನೇ ಜನಪ್ರಿಯವಾದ ತಿನಿಸು ಇದಕ್ಕೆ ರೂ.50 ಆಗುತ್ತೆ ಅಂತ ಹೇಳುತ್ತಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಹಾರ ಪ್ರಿಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಜಾಮೂನ್ ಸಿಹಿ ತಿನಿಸು ಇದರೊಂದಿಗೆ ಮೊಸರು ಬೆರೆಸುವುದು ಅಷ್ಟೊಂದು ರುಚಿಸುವುದಿಲ್ಲ ಹಾಗಿದ್ದರೂ ಈ ವಿಲಕ್ಷಣ ಮಿಶ್ರಣ ಏತಕ್ಕೆ ಅಂತ ಸಾಕಷ್ಟು ಆಹಾರ ಪ್ರಿಯರು ಈ ಅಂಗಡಿಯವನ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ
ಒಟ್ಟಾರೆಯಾಗಿ ಮೊಸರು ಮಿಶ್ರಿತ ಜಾಮೂನ್ ಖಾದ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಯಾವ ಯಾವ ತರಹದ ಆಹಾರಗಳು ಬರಲಿವೆಯೋ ಅಂತ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ