
2023ನೇ ಸಾಲಿನ ಐಪಿಎಲ್ ಫೈನಲ್ ಪಂದ್ಯ ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೀತು. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿಕೊಂಡಿದ್ದ ಮೊಟೆರಾ ಸ್ಟೇಡಿಯಂನಲ್ಲಿ ಮಳೆಯ ಹೊಡೆತಕ್ಕೆ ತತ್ತರಿಸಿದ್ದ ಫೈನಲ್ ಪಂದ್ಯ, ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 15 ಓವರ್‌ಗಳ ಆಟದಲ್ಲಿ ಚೆನ್ನೈ ಸೂಪರ್ ಕಿಂಗ್ ಗೆದ್ದು ಬೀಗಿದೆ. ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 214 ರನ್ ಬಾರಿಸಿತ್ತು. ಆದರೆ ಮಳೆ ಬಂದು ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 15 ಓವರ್‌ಗೆ 171 ಗುರಿ ಬೆನ್ನತ್ತಿದ್ದ ಚೆನ್ನೈ ಮೊದಲಿನಿಂದಲೂ ಅಬ್ಬರದ ಆಟ ಆಡುವ ಮೂಲಕ 5 ವಿಕೆಟ್‌ಗಳ ಜಯಭೇರಿ ಬಾರಿಸಿದೆ.
ಬೃಹತ್ ಮೊತ್ತ ಬೆನ್ನತ್ತಿದ್ದ ಚೆನ್ನೈಗೆ ಎದುರಾಯ್ತು ಮಳೆ..

ಭಾನುವಾರ ಭಾರೀ ಮಳೆ ಸುರಿದಿದ್ದ ಕಾರಣಕ್ಕೆ ಆಟ ಆರಂಭವೇ ಆಗಿರಲಿಲ್ಲ. ಹೀಗಾಗಿ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಧೋನಿ ಬಳಗ, ಗುಜರಾತ್ ಟೈಟಾನ್ಸ್ ಕಟ್ಟಿಹಾಕಲು ಬೆವರು ಹರಿಸಬೇಕಾಯ್ತು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ಕೇವಲ 2 ವಿಕೆಟ್ ಕಳೆದುಕೊಂಡು 20 ಓವರ್‌ಗಳಲ್ಲಿ 214ರನ್‌ಗಳನ್ನು ಬಾರಿಸಿ ಬೃಹತ್ ಮೊತ್ತವನ್ನು ಸವಾಲಾಗಿ ನೀಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಆಟವನ್ನು ಶುರು ಮಾಡುತ್ತಿದ್ದ ಹಾಗೆ ಸುರಿದ ಮಳೆ ಆಟದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸೃಷ್ಟಿಸಿತ್ತು. ಇಡೀ ಮೈದಾನ ಮಳೆಯಿಂದ ಒದ್ದೆಯಾಗಿದ್ರಿಂದ ನಿಗದಿತ ಸಮಯದಲ್ಲಿ ಆಟ ನಡೆಸಲು ಸಾಧ್ಯವಾಗಲಿಲ್ಲ. ಕೊನೆಗೆ ರಾತ್ರಿ 11.30ರ ನಂತರ 15 ಓವರ್‌ಗಳ ಪಂದ್ಯ ಆಡಿಸುವ ನಿರ್ಧಾರಕ್ಕೆ ಅಂಪೈರ್‌ಗಳು ಬಂದಿದ್ದರು.

ಮಳೆ ಬಂದು ಮಾನ ಕಳೆದ ನಮೋ ಸ್ಟೇಡಿಯಂ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಷ್ಟೇ ದೊಡ್ಡ ಮಳೆ ಬಂದರೂ ಕೇವಲ ಅರ್ಧ ಗಂಟೆಯಲ್ಲಿ ಇಡೀ ಮೈದಾನವನ್ನೇ ಒಣಗಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಎಷ್ಟೆ ಪ್ರಮಾಣದಲ್ಲಿ ಮಳೆ ಬಂದರೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆ ಬಿಟ್ಟ ಬಳಿಕ ಪಂದ್ಯ ಮುಂದುವರಿಯುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಹೊಂದಿರುವ ಗುಜರಾತ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮಳೆ ನೀರು ಸೇರಿಕೊಂಡಿದ್ದರಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು ಆಗುವಂತೆ ಮಾಡಿತ್ತು. ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲು ಸಿಬ್ಬಂದಿ ಹರಸಾಹಸ ಪಡಬೇಕಾಯ್ತು. ದೊಡ್ಡ ದೊಡ್ಡ ಸ್ಪಾಂಜ್‌ಗಣನ್ನು ಬಳಸಿ ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲಾಯ್ತು. ಆ ಬಳಿಕ ಮಧ್ಯರಾತ್ರಿ 12.10ಕ್ಕೆ ಡಕ್ಷರ್ಥ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸಿ ರೋಚಕ ಪಂದ್ಯವನ್ನಾಗಿಸಲಾಯ್ತು.
ಕುಣಿದು ಕುಪ್ಪಳಿಸಿದ ರವೀಂದ್ರ ಜಡೆಜಾ, ರಾಯುಡು ಕಣ್ಣೀರು


75 ಸಾವಿರ ಜನರು ಅಂತಿಮ ಪಂದ್ಯ ವೀಕ್ಷಣೆಗೆ ಕಾದು ಕುಳಿತಿದ್ದರು. ಕೊನೆಯ ಓವರ್‌ನಲ್ಲಿ ಚೆನ್ನೈಗೆ ಬೇಕಿದ್ದಿದ್ದು 13 ರನ್‌ಗಳು. ಚೆನ್ನೈ ಭರ್ಜರಿ ಆಟದ ನಡುವೆ ಮೊದಲ ಬಾಲ್ ಹಿಟ್ ಮಾಡುವಲ್ಲಿ ದುಬೆ ಸೋತಿದ್ರು. 2ನೇ ಬಾಲ್‌ಗೆ 1 ರನ್ ಬಂತು. 3ನೇ ಬಾಲ್‌ಗೆ ರವೀಂದ್ರ ಜಡೇಜಾ 1 ರನ್ ಮಾತ್ರ ಗಳಿಸಿದ್ರು. ನಂತರ ದುಬೆ ಕೂಡ ಒಂದು ರನ್ ಗಳಿಸಿ ಜಡೆಜಾಗೆ ಸ್ಟ್ರೈಕ್ ಬಿಟ್ಟುಕೊಟ್ಟಿದ್ದರು. ಅಂತಿಮವಾಗಿ ಕೊನೆಯ 2 ಬಾಲ್‌ಗಳಿಗೆ 10 ರನ್ ಅವಶ್ಯಕತೆ ಇತ್ತು. ರವಿಂದ್ರ ಜಡೆಜಾ 5ನೇ ಬಾಲ್‌ಗೆ ಸಿಕ್ಸರ್ ಸಿಡಿಸಿದ್ರು. ಮೈದಾನದಲ್ಲಿ ಸಪ್ಪೆ ಮೋರೆ ಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಮಂದಹಾಸ ಮನೆ ಮಾಡಿತು. ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿ ಪಂದ್ಯ ವೀಕ್ಷಣೆ ಮಾಡ್ತಿದ್ದ ಅಮಿತ್ ಷಾ ಪುತ್ರ ಜೈ ಷಾ ಮುಖ ಮಂಕಾಯ್ತು. ಕೊನೆಗೆ ಮೋಹಿತ್ ಶರ್ಮಾ ಹಾಗು ಹಾರ್ದಿಕ್ ಪಾಂಡ್ಯ ಇಬ್ಬರೂ ಮಾತನಾಡಿಕೊಂಡು ಕೊನೆ ಬಾಲ್ ಎಸೆದಾಗ ಸೀದಾ ಫೋರ್ ಲೈನ್ ದಾಟಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಯ್ತು.
ಕೃಷ್ಣಮಣಿ