ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ರಿಯಾಯಿತಿ ದಂಡ ಪಾವತಿಗೆ ಇಂದು ಕೊನೆಯ ದಿನವಾದ ಹಿನ್ನಲೆಯಲ್ಲಿ ದಂಡ ಪಾವತಿಸಲು ವಾಹನ ಸವಾರರು ಮುಗಿಬಿದ್ದಿದ್ದಾರೆ.
ಟಿಎಂಸಿ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆಯ ದಂಡ ಕಟ್ಟುತ್ತಿದ್ದಾರೆ. ಇಂದು ದಾಖಲೆಯ ಮಟ್ಟದಲ್ಲಿ ದಂಡ ಪಾವತಿ ಅಗುವ ನಿರೀಕ್ಷೆ ಇದೆ.
ಈಗಾಗಲೇ ದಂಡ ಸಂಗ್ರಹ ಮೊತ್ತ ನೂರು ಕೋಟಿ ದಾಟಿದೆ. ಟಿಎಂಸಿಯಲ್ಲಿ ದಂಡ ಪಾವತಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸರು ವಾಹನ ಸವಾರರು ದೂರು ಪರಿಶೀಲನೆ ನಡೆಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ.
ಅವಧಿ ವಿಸ್ತರಿಸಲು ವಾಹನ ಸವಾರರ ಪಟ್ಟು
ಆದರೆ ಸರ್ವರ್ ಡೌನ್ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ದಂಡ ಪಾವತಿಸಲು ಸಾಕಷ್ಟು ಸಮಸ್ಯೆಯಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಮೂರು ಗಂಟೆಗಳಿಂದಲೂ ಕಾಯುತ್ತಿದ್ದರೂ ಸರ್ವರ್ ಡೌನ್ ಆಗಿದೆ ಎಂದು ಸಿಬ್ಬಂದಿಗಳು ತಿಳಿಸುತ್ತಿದ್ದು, ರಿಯಾಯಿತಿ ದರದಲ್ಲಿ ದಂಡ ಕಟ್ಟುವ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ವಾಹನ ಸವಾರರು ಮನವಿ ಮಾಡಿದ್ದಾರೆ.