
ನಟ ವಿನೋದ್ ರಾಜ್ ಪುತ್ರ ಯುವರಾಜ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಮಗನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಭಾಗಿಯಾಗಿದ್ದಾರೆ. ಚೆನ್ನೈನ ಅಣ್ಣಾ ಯೂನಿವರ್ಸಿಟಿಯಲ್ಲಿ ಯುವರಾಜ್ಗೆ ಪದವಿ ಪ್ರದಾನ ಮಾಡಲಾಗಿದೆ.
ಇದೇ ಸಂದರ್ಭದಲ್ಲೇ ಚೆನ್ನೈನ ಲೀಲಾವತಿ ಫಾರ್ಮ್ ಹೌಸ್ ಬಗ್ಗೆಯೂ ವಿನೋದ್ ರಾಜ್ ಮಾಹಿತಿ ಹಂಚಿಕೊಂಡಿದ್ದು, ಮೊಮ್ಮಗನಿಗಾಗಿ ಲೀಲಾವತಿ ಅಮ್ಮ ಮಹಾಬಲಿಪುರ ರಸ್ತೆಯಲ್ಲಿ ಎರಡು ಎಕರೆ ಫಾರ್ಮ್ ಹೌಸ್ ಮಾಡಿದ್ದಾರೆ. ಅಲ್ಲಿಯೇ ಪತ್ನಿ ಮತ್ತು ಮಗ ವಾಸ ಮಾಡ್ತಿದ್ದಾರೆ ಎಂದಿದ್ದಾರೆ.

ಅತ್ತೆ ಆಸೆಯಂತೆ ಚೆನ್ನೈನಲ್ಲೂ ವ್ಯವಸಾಯ ಮಾಡ್ತಿರುವ ವಿನೋದ್ ರಾಜ್ ಪತ್ನಿ ಅನು, ಮಗನ ಪದವಿ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ವಿನೋದ್ ರಾಜ್ ಕೂಡ ಫಾರ್ಮ್ ಹೌಸ್‌ಗೆ ಕೆಲ ದಿನಗಳ ಕಾಲ ತಂಗಿದ್ದು, ಕುಟುಂಬದ ಜೊತೆಗೆ ಕಾಲ ಕಳೆದಿದ್ದಾರೆ. ಚೆನ್ನೈ ಫಾರ್ಮ್‌ಹೌಸ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.